Advertisement

Megha Shetty; ‘ಲಂಡನ್‌ ಕೆಫೆ’ಯಲ್ಲಿ ಮೇಘಾ – ಕವೀಶ್‌; ಹೊಸಬರ ಪ್ಯಾನ್‌ ಇಂಡಿಯಾ ಚಿತ್ರ

02:19 PM Jun 08, 2024 | Team Udayavani |

ಕವೀಶ್‌ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ “ಆಪರೇಶನ್‌ ಲಂಡನ್‌ ಕೆಫೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾ ಗಲಿದ್ದು, ಕನ್ನಡ, ಮರಾಠಿ, ಹಿಂದಿ, ತಮಿಳು ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದೊಂದು ಮಾಸ್‌ ಆ್ಯಕ್ಷನ್‌ ಚಿತ್ರವಾಗಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದೆ.

Advertisement

ಸಡಗರ ರಾಘವೇಂದ್ರ ಈ ಚಿತ್ರದ ನಿರ್ದೇಶಕರು. ಕವೀಶ್‌ ಮತ್ತು ಮೇಘಾ ಶೆಟ್ಟಿ ಜೊತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ ವಿರಾಟ್‌ ಮಡಕೆ ಪ್ರಸಾದ್‌ ಕಾಂಡೇಕರ್‌ ಹಾಗೂ ಕನ್ನಡದ ಅರ್ಜುನ್‌ ಕಾಪಿಕಾಡ್‌, ಬಿ ಸುರೇಶ್‌, ಕೃಷ್ಣ ಹೆಬ್ಟಾಳೆ, ಧರ್ಮೇಂದ್ರ ಅರಸ್‌, ನೀನಾಸಂ ಅಶ್ವತ್‌ ಸೇರಿದಂತೆ ಅನೇಕರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಯುವ ಸಂಗೀತ ನಿರ್ದೇಶಕ ಪ್ರಾನ್ನು ಝಾ ಸಂಗೀತವಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಜೊತೆಯಲ್ಲಿ ದೀರ್ಘ‌ ಕಾಲ ಕೆಲಸ ಮಾಡಿದ ಅನುಭವವಿರುವ ಡಿ. ನಾಗಾರ್ಜುನ್‌ ಛಾಯಾಗ್ರಹಣವಿದೆ. ಕಲಾ ನಿರ್ದೇಶಕ ವರದರಾಜ್‌ ಕಾಮತ್‌, ಕೆ. ಎಂ. ಪ್ರಕಾಶ್‌ ಸಂಕಲನದ ಜೊತೆಯಲ್ಲಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಮತ್ತು ವಿಕ್ರಂ ಮೋರ್‌, ಅರ್ಜುನ್‌ ಮತ್ತು ಮಾಸ್‌ ಮಾದ ಸಾಹಸ ಚಿತ್ರಕ್ಕಿದೆ.

ಇಂಡಿಯನ್‌ ಫಿಲಂ ಫ್ಯಾಕ್ಟರಿ ಮತ್ತು ದೀಪಕ್‌ ರಾಣೆ ಫಿಲಂ ಲಾಂಛನದ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಉಡುಪಿಯ ವಿಜಯ್‌ ಕುಮಾರ್‌ ಶೆಟ್ಟಿ ಹವರಾಲ್, ರಮೇಶ್‌ ಕೊಠಾರಿ, ದೀಪಕ್‌ ರಾಣೆ ಮತ್ತು ವಿಜಯ್‌ ಪ್ರಕಾಶ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next