Advertisement

ಇದೇ ತಿಂಗಳಲ್ಲಿ ಮೇಘಾ ಅಲಿಯಾಸ್‌ ಮ್ಯಾಗಿ

11:01 AM Jun 09, 2018 | |

ಇದೇ ಮೊದಲ ಸಲ ನಟಿ ಸುಕೃತ ವಾಗ್ಲೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಮೇಘ ಅಲಿಯಾಸ್‌ ಮ್ಯಾಗಿ’ ಚಿತ್ರ ಈಗ ತೆರೆಯ ಮೇಲೆ ಬರಲು ಸಜ್ಜಾಗಿದೆ. ಜೂ.15 ರಂದು ತೆರೆಗೆ ಬರುತ್ತಿರುವ ಈ ಚಿತ್ರವನ್ನು ವಿನಯ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ಚಿತ್ರವನ್ನು ವಿಶಾಲ್‌ ಪುಟ್ಟಣ್ಣ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿಯೂ ಅವರದೇ. 

Advertisement

ಇದೊಂದು ರೋಚಕ ಕಥಾನಕ ಹೊಂದಿರುವ ಚಿತ್ರ. ಹೆಣ್ಣೊಬ್ಬಳ ಮನದ ಭಾವೋದ್ವೇಗದ ಕಥಾನಕವನ್ನು ಒಳಗೊಂಡಿರುವ ಈ ಚಿತ್ರವು ಥ್ರಿಲ್ಲರ್‌ ಹಾಗೂ ಸಸ್ಪೆನ್ಸ್‌ ಕಥೆಯನ್ನು ಹೊಂದಿದೆ. ಸುಕೃತಾ ವಾಗ್ಲೆ ಈ ಚಿತ್ರದಲ್ಲಿ ಎರಡು ಬಗೆಯ ಪಾತ್ರದಲ್ಲಿ ಮಿಂಚಿದ್ದಾರೆ. ಒಂದು ರೀತಿಯ ನಾಯಕ, ನಾಯಕಿ ಆಗಿರುವಂತಹ ಪಾತ್ರ.

ಬೆಂಗಳೂರು, ಕಳಸಾ ಹಾಗೂ ಕುಂದಾಪುರದ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಜಿನಿಸ್‌ ಪೈಕ್ಕಟ್ಟು ಹಾಗೂ ಜಯಪ್ರಕಾಶ್‌ ಛಾಯಾಗ್ರಹಣ ಮಾಡಿದ್ದಾರೆ. ಅತಿಶಯ ಜೈನ್‌ ಸಂಗೀತವಿದೆ. ಪರಮೇಶ್‌ ಸಂಭಾಷಣೆ ಬರೆದಿದ್ದಾರೆ. ವಿನಯ್‌ ಕುಮಾರ್‌ ಕೂರ್ಗು ಸಂಕಲನವಿದೆ.

ವಿನು ಮನಸು ಹಿನ್ನೆಲೆ ಸಂಗೀತ ನೀಡಿದರೆ, ರಘು ಎಸ್‌, ಸೈ ಅರುಣ್‌ ಕುಮಾರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮಲ್ಲಿಕಾರ್ಜುನ  ಕಾರ್ಯಕಾರಿ ನಿರ್ಮಾಪಕರಾಗಿದ್ದು, ತೇಜ್‌ ಗೌಡ, ನೀತು ಬಾಲ, ಕಿರಣ್‌ ಕುಮಾರ್‌, ಮಂಜು ಪಾವಗಡ, ಅಶ್ವಿ‌ನ್‌ ಕುಮಾರ್‌, ಮಹೇಶ್‌ ಗೌಡ, ನಟರಾಜ್‌, ತನುಷ, ಇನ್ನು ಮುಂತಾದವರು ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next