Advertisement
ಕೊರೊನಾ ಎರಡನೇ ಅಲೆಯಲ್ಲಿ ದೇಶ ಎದುರಿಸಿರುವ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಸರಕಾರ, 23 ಸಾವಿರ ಕೋಟಿ ರೂ.ಗಳ ತುರ್ತು ಪ್ಯಾಕೇಜ್ ಘೋಷಿಸಿದೆ. ಈ ಮೊತ್ತವನ್ನು ಮುಂದಿನ 9 ತಿಂಗಳ ಒಳಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಬಳಸಿಕೊಳ್ಳಲಿವೆ ಎಂದು ಕೇಂದ್ರದ ಹೊಸ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ತಿಳಿಸಿದ್ದಾರೆ.
Related Articles
Advertisement
ಬುಧವಾರದ ಮೆಗಾ ಸಂಪುಟ ಪುನಾರಚನೆಯಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದ ರಾಜ್ಯದ ಸಂಸದ ರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ಸೇರಿದಂತೆ ಬಹುತೇಕ ಮಂದಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ತೆಂಗು ಕೃಷಿಕರಿಗೆ ನೆರವು :
ತೆಂಗು ಬೆಳೆ ಉತ್ತೇಜಿಸಲು ಹಾಗೂ ಅದರಲ್ಲಿ ವೃತ್ತಿಪರತೆ ತರುವ ಉದ್ದೇಶದಿಂದ ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ 1979ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ತೆಂಗು ಕೃಷಿಕರಿಗೂ ನೆರವಾಗಬೇಕು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ ಅಧಿಕಾರಿಗಳಲ್ಲದವರು ಅಂದರೆ ಈ ಬೆಳೆಯ ಬಗ್ಗೆ ಸಂಪೂರ್ಣ ಅರಿವಿರುವಂಥ ಕೃಷಿಕ ಸಮುದಾಯದ ವ್ಯಕ್ತಿಯನ್ನೇ ಮಂಡಳಿಯ ಅಧ್ಯಕ್ಷರನ್ನಾಗಿಸಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಹೇಳಿದ್ದಾರೆ.
1 ಲಕ್ಷ ಕೋ.ರೂ. ಬಳಕೆ ಅವಕಾಶ :
ಕೇಂದ್ರ ಬಜೆಟ್‌ನಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ರೈತರ ಮೂಲಸೌಕರ್ಯ ನಿಧಿಗಾಗಿ 1 ಲಕ್ಷ ಕೋಟಿ ರೂ. ಘೋಷಿಸಲಾಗಿದ್ದು, ಅದನ್ನು ಬಳಸಲು ಎಪಿಎಂಸಿ ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಘೋಷಣೆ ಯನ್ನು ಜಾರಿಗೆ ತರಲು ಸಂಪುಟದಲ್ಲಿ ತೀರ್ಮಾ
ನಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಎಲ್ಲ ರಾಜ್ಯ-ಕೇಂದ್ರ ಸಹಕಾರಿ ಸಂಘಗಳು, ಒಕ್ಕೂಟ ಗಳು, ಸ್ವಾಯತ್ತ ಒಕ್ಕೂಟಗಳು ಈ ಮೊತ್ತವನ್ನು ಬಳಸಬಹುದಾಗಿದೆ. ಇದರಿಂದ ಎಪಿಎಂಸಿಗಳು ಬಲಿಷ್ಠಗೊಳ್ಳಲಿವೆ ಎಂದರು.
ಕೃಷಿ ಕಾಯ್ದೆ ರದ್ದು ಇಲ್ಲ :
ಕೇಂದ್ರವು ರೈತರಿಗೆ ಏನೇನು ಆಶ್ವಾಸನೆ ನೀಡಿದೆಯೋ ಅವೆಲ್ಲವನ್ನೂ ಈಡೇರಿಸಲು ನಾವು ಬದ್ಧರಾಗಿದ್ದೇವೆ. ಎಪಿಎಂಸಿ ವ್ಯವಸ್ಥೆ ಯನ್ನು ರದ್ದು ಮಾಡುವುದಿಲ್ಲ. ಶೇ.3ರ ರಿಬೇಟ್‌ನೊಂದಿಗೆ 2 ಕೋಟಿ ರೂ. ವರೆಗೆ ಸಾಲವನ್ನೂ ನೀಡಲಾಗುತ್ತದೆ. ಹೊಸ ಕೃಷಿ ಕಾಯ್ದೆಗಳು ಜಾರಿಯಾದರೆ ಎಪಿಎಂಸಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬ ಹೇಳಿಕೆ ಗಳು ಸರಿಯಲ್ಲಿ. ಮಂಡಿ ವ್ಯವಸ್ಥೆ ಕೊನೆ ಯಾಗು ವುದಿಲ್ಲ ಎಂಬುದನ್ನು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸಚಿವ ತೋಮರ್ ಅವರು ಹೇಳಿದರು.
ರೈತ ಸಮುದಾಯದ ಒಳಿತಿಗಾಗಿ ಕೇಂದ್ರ ಸರಕಾರ 3 ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸಲಾಗುತ್ತಿದೆ. ನಾನು ಎಲ್ಲ ರಾಜ್ಯಗಳಿಗೂ ಪ್ರವಾಸ ಕೈಗೊಂಡು ಅನ್ನದಾತರ ಮನವೊಲಿಸುವ ಕೆಲಸ ಮಾಡುತ್ತೇನೆ.– ಶೋಭಾ ಕರಂದ್ಲಾಜೆ, ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ