ನವದೆಹಲಿ: ಒಟ್ಟಾರೆ ಭಾರತದ ಕಡಲ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ದೇಶದ 7,516 ಕಿ.ಮೀ. ಉದ್ದದ ಕರಾವಳಿಯಲ್ಲಿ ಭಾರತೀಯ ನೌಕಾ ಪಡೆ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಸಮರಾಭ್ಯಾಸ ಮಂಗಳವಾರ ಆರಂಭವಾಗಿದೆ.
“ಸಮುದ್ರ ಜಾಗರಣೆ’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಸಮರಾಭ್ಯಾಸದಲ್ಲಿ ನೌಕಾ ಪಡೆಯೊಂದಿಗೆ ಕರಾವಳಿ ಭದ್ರತಾ ಪಡೆ, ಕಸ್ಟಮ್ಸ್ ಇಲಾಖೆ ಮತ್ತು ಇತರೆ ಕಡಲ ಭದ್ರತಾ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ.
2008ರ ಮುಂಬೈ ದಾಳಿಯ ನಂತರ ಕರಾವಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಸಮರಾಭ್ಯಾಸ ಕೂಡ ಕಡಲ ಭದ್ರತೆಗೆ ಕೈಗೊಂಡಿರುವ ವಿವಿಧ ಕ್ರಮಗಳಿಗೆ ಪೂರಕವಾಗಿವೆ. ಇದು ಭಾರತೀಯ ನೌಕಾ ಪಡೆಯು ಎರಡು ವರ್ಷಗಳಿಗೊಮ್ಮೆ ಕೈಗೊಳ್ಳುವ ಥಿಯೇಟರ್ ಲೆವಲ್ ರೆಡಿನೆಸ್ ಆಪರೇಷನಲ್ ಎಕ್ಸಸೈಸ್(ಟ್ರೊಪೆಕ್ಸ್)ನ ಭಾಗವಾಗಿದೆ.