Advertisement

I.N.D.I.A. ಮೆಗಾ ರ್‍ಯಾಲಿಗೂ ಮುನ್ನ ಸುನೀತಾ ಕೇಜ್ರಿವಾಲ್ ಭೇಟಿಯಾದ ಕಲ್ಪನಾ ಸೋರೆನ್

07:44 PM Mar 30, 2024 | Team Udayavani |

ಹೊಸದಿಲ್ಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೋರೆನ್ ಅವರು ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿಯಾದರು.

Advertisement

ದೆಹಲಿ ಮುಖ್ಯಮಂತ್ರಿ ನಿವಾಸ 6 ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿ ಭೇಟಿ ನಡೆದಿದ್ದು ಇಬ್ಬರ ನಡುವೆ 15-20 ನಿಮಿಷಗಳ ಕಾಲ ಮಾತುಕತೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಮಂತ್ ಸೋರೆನ್ ಜಾರ್ಖಂಡ್‌ನ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನವರಿಯಲ್ಲಿ ಇಡಿ ಬಂಧಿಸಿದ ನಂತರ ಜೈಲಿನಲ್ಲಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಕೇಜ್ರಿವಾಲ್ ಬಂಧನದ ನಂತರ ಭಾನುವಾರ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರ ಮೆಗಾ ರ್‍ಯಾಲಿ ನಡೆಯಲಿದ್ದು ಸುನೀತಾ ಕೇಜ್ರಿವಾಲ್ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next