Advertisement
ಇಷ್ಟೊತ್ತಿಗಾಗಲೇ ಮಾರುಕಟ್ಟೆ ಲೋಕಾರ್ಪಣೆಯಾಗಿ ಸಾರ್ವಜನಿಕರು ಇಲ್ಲಿ ವ್ಯಾಪಾರ-ವಹಿವಾಟು ನಡೆಸಬೇಕಿತ್ತು. ಆದರೆ ಕೊರೊನಾ ವಕ್ಕರಿಸಿದ್ದರಿಂದ ಸರ್ಕಾರದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಇದೀಗ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಅನೇಕ ಜನಪರ ಯೋಜನೆಗಳು ಆಮೆಗತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿವೆ.
Related Articles
Advertisement
ಕನಸು ನನಸು: ಕಳೆದ 10 ವರ್ಷದ ಹಿಂದೆ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಬಸವನಬಾಗೇವಾಡಿ ಪಟ್ಟಣದಲ್ಲಿ ಸುಸಜ್ಜಿತ ಮತ್ತು ಬೃಹತ್ ಮೆಗಾ ಮಾರುಕಟ್ಟೆ ನಿರ್ಮಿಸಬೇಕೆಂಬ ಮಹದಾಸೆಯೊಂದಿಗೆ ಯೋಜನೆ ರೂಪಿಸಿದ್ದರು. ಆದರೆ ಅನೇಕ ಕಾರಣಗಳಿಂದ ಈ ಯೋಜನೆ ಮುಂದೂಡುತ್ತ ಬರಲಾಯಿತು. ಆದರೆ ಹಟ ಬಿಡದ ಶಾಸಕರು ಕೊಟ್ಟ ಮಾತಿನಂತೆ ಬಸವನಬಾಗೇವಾಡಿ ತಾಲೂಕಿನ ವ್ಯಾಪಾರಸ್ಥರಿಗೆ ದೊಡ್ಡ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಭೇಟಿ ನೀಡಿ ಮಾರುಕಟ್ಟೆ ವೀಕ್ಷಿಸಿ ಜನತೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಇಂತಹ ಕಾರ್ಯ ಮಾಡುತ್ತಿರುವುದನ್ನು ಮೆಚ್ಚಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾ ನಗರಗಳಲ್ಲಿ ನೋಡುತ್ತಿದ್ದ ಇಂತಹ ಮಾರುಕಟ್ಟೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಕೊರೊನಾ ಮಹಾಮಾರಿ ಅನೇಕ ಜನಪರ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದು, ಯೋಜನೆಗಳು ಕಾರ್ಯರೂಪಕ್ಕೆ ಬರಲು ಹಿನ್ನಡೆಯಾಗುತ್ತಿದೆ.ಶಿವಪ್ರಕಾಶ ಶಿವಾಚಾರ್ಯ ಶ್ರೀ, ಹಿರೇಮಠ ಮೆಗಾ ಮಾರುಕಟ್ಟೆ ಎರಡನೇ ಅಂತಸ್ತಿನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣದ ವಸ್ತುಗಳು ಹಾಗೂ ಕಾರ್ಮಿಕರ ಕೊರತೆಯಿಂದ ಲೋಕಾರ್ಪಣೆಗೆ ತಡೆಯಾಗಿದೆ.
ಬಿ.ಎ. ಸೌದಾಗರ, ಪುರಸಭೆ ಮುಖ್ಯಾಧಿಕಾರಿ ಪಟ್ಟಣದಲ್ಲಿ ನಿಮಾರ್ಣವಾಗುತ್ತಿರುವ ಮೆಗಾ ಮಾರುಕಟ್ಟೆಯಲ್ಲಿ ಎಲ್ಲ ತರಹದ ವ್ಯವಸ್ಥೆ ಇರುವುದರಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಾಸಕ ಶಿವಾನಂದ ಪಾಟೀಲರ ಕಾರ್ಯ ಶ್ಲಾಘನೀಯ.
ಮುತ್ತು ಕಿಣಗಿ, ವ್ಯಾಪಾರಸ್ಥ ಪ್ರಕಾಶ ಬೆಣ್ಣೂರ