Advertisement

ಡಿ.19ರಂದು ಮೆಗಾ ಲೋಕ ಅದಾಲತ್‌: ನ್ಯಾ|ಅಂಬಲಿ

03:39 PM Nov 12, 2020 | Suhan S |

ಭಾಲ್ಕಿ: ಭಾಲ್ಕಿಯ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಡಿ.19ರಂದು ಮೆಗಾ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗುವುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಹೇಳಿದರು.

Advertisement

ಪಟ್ಟಣದ ಕೋರ್ಟ್‌ ಸಭಾಭವನದಲ್ಲಿ ನಡೆದ ಮೆಗಾ ಲೋಕ ಅದಾಲತ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದು.

ಮೆಗಾ ಲೋಕ ಅದಾಲತ್‌ನಲ್ಲಿ ಬ್ಯಾಂಕ್‌ನಲ್ಲಿ ಸಾಲ ಪಡೆದ ಸುಸ್ತಿ ಸಾಲಗಾರರು ಬ್ಯಾಂಕ್‌ ವ್ಯವಸ್ಥಾಪಕರನ್ನುಸಂಪರ್ಕಿಸಿ ಕಾನೂನು ಸೇವೆಯೊಂದಿಗೆ ಸಾಲ ಮರು ಪಾವತಿ ಮಾಡಿದ್ದಲ್ಲಅಂಥವರ ಮೇಲಿನ ವ್ಯಾಜ್ಯ ಸಂಪೂರ್ಣ  ಮುಕ್ತಗೊಳಿಸಲಾಗುವುದು. ಯಾವುದೇ  ತರಹದ ಹಣಕಾಸಿನ ವ್ಯವಹಾರ ಕಾನೂನು ರೀತಿಯಲ್ಲಿ ಬಗೆಹರಿಸಲುಮೆಗಾ ಲೋಕ ಅದಾಲತ್‌ ಸಹಾಯ ಪಡೆಯಬಹುದು ಎಂದರು.

ಕಾರ್ಮಿಕರ ತಕರಾರು ಕಾನೂನು ರೀತಿಯಲ್ಲಿ ಯಾವುದೇ ಶುಲ್ಕವಿಲ್ಲದೇ ಬಗೆಹರಿಸಲು ಅದಾಲತ್‌ಸಹಕಾರಿಯಾಗಿದೆ. ವಿದ್ಯುತ್‌ ಮತ್ತು ನೀರಿನ ಬಿಲ್‌ ಪೆಂಡಿಂಗ್‌ ಪಾವತಿಗಳಿಗೆ ಸಂಬಂಧಿಸಿದ ವ್ಯಾಜ್ಯ ಸೇರಿದಂತೆ ಇತರೆ ಯಾವುದೇ ಪ್ರಕಾರದ ಕಾನೂನು ವ್ಯಾಜ್ಯಗಳನ್ನು ಉಚಿತವಾಗಿ ಬಗೆಹರಿಸಿಕೊಳ್ಳಬಹುದು ಎಂದರು.

ಈ ವೇಳೆ ನ್ಯಾಯಮೂರ್ತಿ ಪ್ರಶಾಂತ ಬಾದವಾಡಗಿ, ಸರ್ಕಾರಿ ಅಭಿಯೋಜಕ ಶಿವರಾಜ ಶಟಕಾರ, ಡಿವೈಎಸ್‌ಪಿ ಡಾ| ದೇವರಾಜ.ಬಿ, ಉಪ ತಹಶೀಲ್ದಾರ್‌ ಗೋಪಾಲ ಹಿಪ್ಪರಗಿ, ತಾಪಂ ಸಹಾಯಕ ನಿರ್ದೇಶಕಿ ಶಿವಲೀಲಾ, ಎಸ್‌ಬಿಐ ವ್ಯವಸ್ಥಾಪಕನವೀನ ಕುಮಾರ ಇತರರು ಇದ್ದರು.

Advertisement

ಪ್ರಬುದ್ಧ  ಸಮಾಜಕ್ಕಾಗಿ ಪಾದಯಾತ್ರೆ’ :

ಬೀದರ: ಪ್ರಬುದ್ಧ ಸಮಾಜ ನಿರ್ಮಾಣಕ್ಕಾಗಿ ಬೆಂಗಳೂರಿನ ವಿವೇಕಾನಂದ ಎಚ್‌.ಕೆ ಜಿಲ್ಲೆಯ ವನಮಾರಪಳ್ಳಿಯಿಂದ ನ. 1ರಿಂದ ಆರಂಭಿಸಿರುವ ಪಾದಯಾತ್ರೆ ಭಾಲ್ಕಿ, ಹುಮನಾಬಾದದಿಂದ ಬೀದರಗೆ ಬರುವಹಾದಿಯಲ್ಲಿ ಆಣದೂರ ಹತ್ತಿರ ಜಿಲ್ಲಾ ಕಸಾಪ ಸಾಥ್‌ ನೀಡಿತು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟಿx, ಸಂಚಾಲಕ ಶಿವಶಂಕರ ಟೋಕರೆ, ಉಪಾಧ್ಯಕ್ಷ ವಿಜಯಕುಮಾರ ಗೌರೆ ಅವರು ವಿವೇಕಾನಂದ ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು. ಅವರ ಜೊತೆಯಲ್ಲಿ ಕಾರ್ಯದರ್ಶಿ ಮಹೇಶ ಗೋರನಾಳಕರ್‌, ಸಂತೋಷ ಬೋರಾ, ಸಂದೀಪ ಕಾಟೆ ಇಸ್ಲಾಂಪುರ ಸಾಥ್‌ ನೀಡಿದರು.

ವಿವೇಕಾನಂದ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಸುಧಾರಣೆ ಹೇಳುವುದಕ್ಕಿಂತ ಸ್ವತಃ ಮಾಡಿ ತೋರಿಸುವುದು ಲೇಸು. ಇಂದು ನಾನು ಕಲ್ಯಾಣ ನಾಡಿನಿಂದ ಪ್ರಾರಂಭಿಸಿದ ಪಾದಯಾತ್ರೆ ಬೆಂಗಳೂರಿನ ತನಕ ಹೋಗಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶ ನನ್ನದಾಗಿದೆ ಎಂದರು.

ಸುರೇಶ ಚೆನ್ನಶೆಟ್ಟಿ ಮಾತನಾಡಿ, ಇಂದು ಯುವ ಜನಾಂಗ ಎಚ್ಚೆತ್ತು ಸಮಾಜ ಶುದ್ಧೀಕರಣಗೊಳ್ಳಲು ತಮ್ಮ ಪಾದಯಾತ್ರೆ ಒಂದು ಪ್ರೇರಣೆ. ನಮ್ಮಲ್ಲಿ ಉಪದೇಶ ಪುಕ್ಕಟೆ ಇದೆ. ಆದರೆ, ಅನುಷ್ಠಾನ ಶೂನ್ಯ. ಶರಣರ ಕರ್ಮಭೂಮಿಯಿಂದ ಪ್ರಾರಂಭಿಸಿದ ಜ್ಞಾನ ದೀಕ್ಷೆ ಪಾದಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಶಿವಶಂಕರ ಟೋಕರೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next