Advertisement

ಮೆಗಾ ಆರೋಗ್ಯ ಮೇಳ: ಸಿದ್ಧತೆ ವೀಕ್ಷಿಸಿದ ಡೀಸಿ

02:45 PM Feb 26, 2022 | Team Udayavani |

ಕೆ.ಆರ್‌.ಪೇಟೆ: ಪಟ್ಟಣದಲ್ಲಿ ಮಾ.5 ರಂದು ಬೃಹತ್‌ ಆರೋಗ್ಯ ಮೇಳವು ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರು ಶುಕ್ರವಾರ ಆರೋಗ್ಯ ಮೇಳವುನಡೆಯಲಿರುವ ಕೆ.ಆರ್‌.ಪೇಟೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಅಧಿಕಾರಿಗಳತಂಡದೊಂದಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

Advertisement

ಆರೋಗ್ಯ ಮೇಳದಲ್ಲಿ ಕನಿಷ್ಠ 15 ರಿಂದ 20ಸಾವಿರ ಜನರು ಪಾಲ್ಗೊಂಡು ಪರೀಕ್ಷೆಗೆ ದಾಖಲಾಗಲಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪಗಳಾಗದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು.

ತಜ್ಞ ವೈದ್ಯರ ತಂಡ: ಆದಿಚುಂಚನಗಿರಿ ವೈದ್ಯಕೀಯವಿಜ್ಞಾನ ಸಂಸ್ಥೆಯ ಕಾಲೇಜು ಮತ್ತು ಆಸ್ಪತ್ರೆಯಆರೋಗ್ಯ ತಜ್ಞರು, ತಜ್ಞ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಬಿಜಿಎಸ್‌ ಅಪೊಲೊ ಆಸ್ಪತ್ರೆ, ಮಂಡ್ಯದ ಮಿಮ್ಸ್‌ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್‌ ಗ್ರಂಥಿ ಆಸ್ಪತ್ರೆ, ನಾರಾಯಣ ನೇತ್ರಾಲಯ, ಬೆಂಗಳೂರಿನಜಯದೇವ ಹೃದ್ರೋಗ ಆಸ್ಪತ್ರೆ ಸೇರಿದಂತೆ ವಿವಿಧಆಸ್ಪತ್ರೆಗಳಿಂದ ತಜ್ಞ ವೈದ್ಯರ ತಂಡವೇ ಆರೋಗ್ಯ ಮೇಳದಲ್ಲಿ ಭಾಗವಹಿಸಲಿದೆ ಎಂದರು.

ಸದ್ಬಳಕೆಗೆ ಮನವಿ: ಆರೋಗ್ಯ ಪರೀಕ್ಷೆ, ಔಷಧ ಮಾತ್ರೆಗಳು, ಕನ್ನಡಕಗಳ ವಿತರಣೆ, ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಕೊಡುವಂತೆತಿಳಿಸಿರುವ ಕ್ಷೇತ್ರದ ಶಾಸಕರಾದ ಸಚಿವನಾರಾಯಣಗೌಡ ಅವರ ಆಶಯದಂತೆ ಈ ಮೆಗಾಆರೋಗ್ಯ ಮೇಳವನ್ನು ನಡೆಸಲಾಗುತ್ತಿದೆ. ಆಸಕ್ತ ಜನರು ಹಾಗೂ ಯುವ ಜನರು ಆರೋಗ್ಯಮೇಳದಲ್ಲಿ ಪಾಲ್ಗೊಂಡು ಆರೋಗ್ಯ ಸಂವರ್ಧನೆಗೆ ಮುಂದಾಗಬೇಕು ಎಂದು ಅಶ್ವಥಿ ಮನವಿ ಮಾಡಿದರು.

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ,ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀ ಲ್ದಾರ್‌ ಎಂ.ವಿ.ರೂಪಾ, ತಾಪಂಇಒ ಚಂದ್ರಶೇಖರ್‌, ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪ ರ್ಕಾಧಿಕಾರಿ ಧರ್ಮಂದ್ರ, ಸರ್ಕಾರಿ ಎಂಜಿನಿ ಯರಿಂಗ್‌ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್‌.ದಿನೇಶ್‌, ಸರ್ಕಾರಿ ಪಾಲಿಟೆಕ್ನಿಕ್‌ ಪ್ರಾಂಶುಪಾಲೆ ಆಶಾಕಾಮತ್‌, ಪುರಸಭೆ ಮುಖ್ಯಾಧಿಕಾರಿ ಕುಮಾರ್‌ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

100 ಕೌಂಟರ್‌ ಆಯೋಜನೆ: ಆರೋಗ್ಯ ಮೇಳದಲ್ಲಿ ಭಾಗವಹಿಸಲು ಆಗಮಿಸುವವರು ಆಧಾರ್‌ ಕಾರ್ಡ್‌ಹಾಗೂ ಮೊಬೈಲ್‌ ನಂಬರ್‌ನೊಂದಿಗೆ ಆಗಮಿಸಿ ಹೆಸರನ್ನು ಪ್ರತ್ಯೇಕವಾಗಿ ನೋಂದಣಿಮಾಡಿಸಿಕೊಳ್ಳಬೇಕು. ಹೆಸರು ನೋಂದಣಿಗೆ 25ಕೌಂಟರ್‌, ಹƒದ್ರೋಗ, ರಕ್ತದೊತ್ತಡ ಮತ್ತು ಶುಗರ್‌ ತಪಾಸಣೆಗೆ 25 ಕೌಂಟರ್‌ ಸೇರಿದಂತೆ ಔಷಧಗಳನ್ನುಪಡೆದುಕೊಳ್ಳಲು 25 ಕೌಂಟರ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಮಹಿಳೆಯರು, ಯುವಜನರು ಶಿಬಿರದಸದುಪಯೋಗ ಪಡಿಸಿಕೊಂಡು ಆರೋಗ್ಯದ ಬಗ್ಗೆಕಾಳಜಿ ವಹಿಸಬೇಕು ಎಂದು ತಹಶೀಲ್ದಾರ್‌ ಎಂ.ವಿ.ರೂಪಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next