Advertisement

ಶಾಸಕ ಹಾಲಾಡಿ, ಸಹಾಯಕ ಆಯುಕ್ತರ ಭೇಟಿ

12:26 AM Jun 03, 2020 | Sriram |

ಕೋಟ: ಕೋವಿಡ್-19 ಸೋಂಕಿಗೊಳಗಾಗಿ ಇದೀಗ ಗುಣಮುಖ ವಾಗಿರುವ ಬ್ರಹ್ಮಾವರ ಪೊಲಿಸ್‌ ಠಾಣೆಯ ಹೆಡ್‌ ಕಾನ್ಸ್‌ಟೆಬಲ್‌ ವಾಸವಿದ್ದ ವಡ್ಡರ್ಸೆ ಎಂ.ಜಿ. ಕಾಲನಿ ಹಾಗೂ ಯಾಳಕ್ಲು ಪ್ರದೇಶಕ್ಕೆ ಜೂ. 2ರಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸಹಾಯಕ ಆಯುಕ್ತ ರಾಜು ಅವರು ಭೇಟಿ ನೀಡಿದರು.

Advertisement

ಗ್ರಾಮಸ್ಥರ ಮನವಿಯಂತೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ 1 ಕಿ.ಮೀ. ವ್ಯಾಪ್ತಿಯ ಸೀಲ್‌ಡೌನ್‌ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಹೆಡ್‌ ಕಾನ್ಸ್‌ಟೆಬಲ್‌ ವಾಸವಿದ್ದ ಸುತ್ತಲಿನ ಮೂರು ಮನೆ ಗಳನ್ನು ಕಂಟೈನ್ಮೆಂಟ್‌ ಝೋನ್‌ ಆಗಿ ಪರಿವರ್ತಿಸಲಾಯಿತು. ಸುಮಾರು 10 ದಿನ 200ಕ್ಕೂ ಹೆಚ್ಚು ಮನೆಗಳಿಗೆ ಸಂಚಾರ ಸ್ಥಗಿತಗೊಂಡಿದ್ದು, ನಿತ್ಯ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಇನ್ನಿತರರಿಗೆ ಸಾಕಷ್ಟು ಸಮಸ್ಯೆಯಾಯಿತು.

ಸೋಂಕಿತರು ಗುಣಮುಖರಾಗಿ ಕುಟುಂಬದವರಿಗೂ ಸಮಸ್ಯೆ ಇಲ್ಲ ಎನ್ನುವುದು ದೃಢಪಟ್ಟಿದ್ದರಿಂದ ಸೀಲ್‌ಡೌನ್‌ ತೆರವುಗೊಳಿಸಿ ಸಹಜ ಜೀವನಕ್ಕೆ ಸಹಕರಿಸಬೇಕು ಎಂದು ಸ್ಥಳೀಯರು ಮನವಿ ಸಲ್ಲಿಸಿದ್ದರು. ಹೀಗಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾ.ಪಂ.ನಲ್ಲಿ ಸಭೆ ನಡೆಸಿ ಕಂದಾಯ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.ಇದೀಗ ಶಾಸಕರ ಉಪಸ್ಥಿತಿಯಲ್ಲಿ ಸೀಲ್‌ಡೌನ್‌ ತೆರವುಗೊಂಡಿದೆ. ಸೀಲ್‌ಡೌನ್‌ ತೆರವಿನಿಂದ ಸ್ಥಳೀಯರು ಸಂತಸಗೊಂಡಿದ್ದಾರೆ. ಸುಮಾರು ಹತ್ತು ದಿನಗಳ ಅನಂತರ ಈ ಭಾಗದಲ್ಲಿ ಚಟುವಟಿಕೆಗಳು ಮತ್ತೆ ಆರಂಭಗೊಂಡಿದೆ.

ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ ಹಾಗೂ ಕೋಟ ಕಂದಾಯ ಅಧಿಕಾರಿ ರಾಜು, ಕಂದಾಯ ಇಲಾಖೆಯ ಅಧಿಕಾರಿಗಳು, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮಾ, ಸ್ಥಳೀಯ ವಾರ್ಡ್‌ ಸದಸ್ಯ ಕೋಟಿ ಪೂಜಾರಿ, ಗ್ರಾ.ಪಂ. ಪಿಡಿಒ ಉಮೇಶ್‌, ಆಶಾ, ಆರೋಗ್ಯ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next