Advertisement
2016ರ ಡಿಸೆಂಬರ್ ಅಂತ್ಯಕ್ಕೆ 20,366 ಕೋ. ರೂ. ಠೇವಣಿ, 9,750 ಕೋ. ರೂ. ಮುಂಗಡ ಹೊಂದಿವೆ. ವಾರ್ಷಿಕ ಠೇವಣಿಯಲ್ಲಿ ಶೇ. 17.88 ಹಾಗೂ ಮುಂಗಡದಲ್ಲಿ ಶೇ. 12.03 ಅಭಿವೃದ್ಧಿ ಹೊಂದಿದೆ. ಸಾಲ ಠೇವಣಿ ಅನುಪಾತ ಡಿಸೆಂಬರ್ ಅಂತ್ಯಕ್ಕೆ ಶೇ. 47.9 ಆಗಿದ್ದು ಸೆಪ್ಟಂಬರ್‌ಗೆ ಹೋಲಿಸಿದಾಗ ಶೇ. 4.2 ಇಳಿಕೆ ಕಂಡಿದೆ. ನೋಟು ಅಪಮೌಲ್ಯಗೊಳಿಸಿದ ಸಮಯದಲ್ಲಿ ಹೆಚ್ಚಿನ ಠೇವಣಿ ಹರಿದುಬಂದಿದ್ದು, ಇದಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಸಿಂಡಿಕೇಟ್ ಬ್ಯಾಂಕ್ ವಿಭಾಗೀಯ ಕ್ಷೇತ್ರೀಯ ಪ್ರಬಂಧಕ ಎಸ್.ಎಸ್. ಹೆಗಡೆ ಅಭಿಪ್ರಾಯಪಟ್ಟರು.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಬಂಧಕಿ ಸುಜಾತಾ ಶ್ರೀಕಂಠಯ್ಯ, ಇತ್ತೀಚೆಗೆ ಹೊರಡಿಸಿದ ವಿವಿಧ ಸುತ್ತೋಲೆಗಳ ಮಾಹಿತಿ ನೀಡಿದರು. ಭಾರತ ಸರಕಾರ ಹಾಗೂ ಆರ್‌ಬಿಐ ಮಹತ್ವಾಕಾಂಕ್ಷಿ ಯೋಜನೆಯಾದ ವಿತ್ತೀಯ ಸೇರ್ಪಡೆ ಕಾರ್ಯಕ್ರಮದಂತೆ ಎಲ್ಲ ಹಳ್ಳಿಗಳಿಗೂ ಬ್ಯಾಂಕ್‌ನ ಸೇವೆ ಸಿಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಡಿಜಿಟಲ್ ಬ್ಯಾಂಕ್‌ನ ಕುರಿತು ಗ್ರಾಹಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದರು.
Related Articles
ಮುಂದಿನ ವರ್ಷ ವಿವಿಧ ಇಲಾಖೆಗಳು ಆದಷ್ಟು ಬೇಗ ವಿವಿಧ ಸರಕಾರಿ ಯೋಜನೆಗಳ ಎಲ್ಲ ಅರ್ಜಿ ಬ್ಯಾಂಕ್‌ಗೆ ಕಳುಹಿಸಬೇಕು. ಇದರಿಂದ ಮಾರ್ಚ್ ಕೊನೆ ಒಳಗೆ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಸಭೆ ನಿರ್ವಹಿಸಿದ ಅಗ್ರಣಿ ಜಿಲ್ಲಾ ಮುಖ್ಯ ಪ್ರಬಂಧಕ ಫ್ರಾನ್ಸಿಸ್ ಬೋರ್ಜಿಯಾ ತಿಳಿಸಿದರು.
Advertisement