Advertisement
ಕೇಂದ್ರ ಸರಕಾರ ಮುಂದೆ ಅನುಸರಿಸ ಬೇಕಾದ ಮಾರ್ಗಸೂಚಿಗಳ ಬಗ್ಗೆ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಎಂಡಿ ಟಿ.ಗೌತಮ್ ಪೈ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ಸಾಹಿತಿ ಉದ್ಯಾವರ ಮಾಧವಾಚಾರ್ಯ, ಜಾದೂಗಾರ ಪ್ರೊ| ಶಂಕರ್, ಸಮಾಜಸೇವಕ ಹರಿಯಪ್ಪ ಕೋಟ್ಯಾನ್, ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನರೇಂದ್ರ ಮೋದಿ ಅವರು ಮುಂದಿನ ಹತ್ತು ವರ್ಷ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕು. ಕಾಶ್ಮೀರದ 379ನೇ ವಿಧಿ ರದ್ದತಿ ಸರಕಾರದ ಮಹತ್ವದ ಸಾಧನೆ. ಇತರರಿಂದ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇರುವವರಿಗೆ ಸಲಹೆ ಕೋಡಬೇಕಾದ ಆವಶ್ಯಕತೆಯಿಲ್ಲ. ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಉತ್ತಮ ಪರಿಹಾರ ನೀಡಬೇಕು ಎಂದು ಗೋವಿಂದಾಚಾರ್ಯ ತಿಳಿಸಿದರು. ಶಂಕರ್, ಹರಿಯಪ್ಪ ಕೋಟ್ಯಾನ್, ಡಾ| ಕೃಷ್ಣಪ್ರಸಾದ್ ಅವರು ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಜನಪರ ಕಾರ್ಯಕ್ರಮಗಳ ಬಗ್ಗೆ ಮನವಿ ಮಾಡಿದರು.
Related Articles
Advertisement
ರಾಜ್ಯಗಳನ್ನು ಕಡೆಗಣಿಸದಿರಿಉತ್ತಮ ಸಾಧನೆಗಳ ಉತ್ಸಾಹದಲ್ಲಿರುವ ಮೋದಿ, ರಾಜ್ಯಗಳಿಗೆ ಪರಿಹಾರವನ್ನು ನೀಡುವುದನ್ನು ಕಡೆಗಣಿಸಬಾರದು. ಜಮ್ಮು-ಕಾಶ್ಮೀರ ಪರಿಸ್ಥಿತಿಯಿಂದ ಬೇಸತ್ತು ವಿವಿಧ ಪ್ರದೇಶಗಳಿಗೆ ತೆರಳಿ ನೆಲೆ ಕಂಡುಕೊಂಡ ಮೂಲ ನಿವಾಸಿಗಳಿಗೆ ಮತ್ತೆ ಅಲ್ಲಿಯೇ ಜೀವನ ಕಟ್ಟಿಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎಂದು ಉದ್ಯಾವರ ಮಾಧವಾಚಾರ್ಯ ಮನವಿ ಮಾಡಿದರು.