ಕುರುಗೋಡು :ಇತ್ತೀಚೆಗೆ ಕುರುಗೋಡು ತಾಲೂಕಿನ ಬಹಳಷ್ಟು ರೈತರು ತಾವು ಇಂಫ್ಯಾಕ್ಟ್ – ಡಿ ಎನ್ನುವ ಕಳಪೆ ಕ್ರಿಮಿನಾಶಕವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಅಂಗಡಿಗಳ ವಿರುದ್ಧ ರೈತರು ಆಕ್ರೋಶಗೊಂಡು ತಹಶೀಲ್ದಾರ್ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿತ್ತು.ಇದರ ಪರಿಣಾಮ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಕೃಷಿ ಅಧಿಕಾರಿಗಳಾದ ಯೋಗಿಶ್,ತೋಟಗಾರಿಕೆ ತಾಲೂಕು ಅಧಿಕಾರಿಗಳು, ದಯಾನಂದ.ಕೃಷಿ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಸಮ್ಮುಖದಲ್ಲಿ ರೈತರ ಮತ್ತು ಗೊಬ್ಬರ ಅಂಗಡಿ ಮಾಲೀಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿಕೃಷಿ ಉಪನಿರ್ದೇಶಕ ಚಂದ್ರಶೇಖರ ಮಾತನಾಡಿ, ನಕಲಿ ಗೊಬ್ಬರ ಮತ್ತು ಔಷಧಿ ವಿಚಾರಣೆಯಿಂದ ಜಿಲ್ಲೆಯ ಅಲವಾರು ಕಡೆ ಜಮೀನುಗಳಲ್ಲಿ ಸಿಂಪಡಿಸಿದ ನಂತರ ರೈತರಿಗೆ ಅದ ಅನಾನುಕೂಲದ ಬಗ್ಗೆ ವಿಸ್ಕ್ರತವಾಗಿ ಚರ್ಚಿಸಲಾಗಿದೆ.ಅಲ್ಲದೇ ಇಂದಿನಿಂದಲೇ ತಾಲೂಕಿನ ಡೀಲರ್ ಗಳು ರೈತರಿಗೆ ವಿತರಿಸುವ ಅಲವಾರು ಕ್ರೀಮಿನಾಶಕಗನ್ನು ಮಾರುವಾಗ ಅದರ ಬಗ್ಗೆ ರೈತರಿಗೆ ಕಡ್ಡಾಯವಾಗಿ ಮಾಹಿತಿ ನೀಡಿಬೇಕು.
ರೈತರಿಗೆ ಯಾವುದೇ ಸಮಯದಲ್ಲಿ ತಮ್ಮ ಬೆಳೆಗಳಿಗೆ ಬಂದಿರುವುದು ರೋಗವೋ ಅಥಾವ ಬೇರೆನೋ ಎಂದು ಗೊತ್ತಾಗುವುದಿಲ್ಲ ಇದನ್ನು ನೀವು ಗಮನದಲ್ಲಿಟ್ಟುಕೊಂಡು ವಿತರಿಸಬೇಕು ಎಂದರು.
ಗೊಬ್ಬರ ಅಂಗಡಿ ಗಳ ಮಾಲೀಕರ ಮತ್ತು ರೈತರ ನಡುವೆ ಕೆಲಕಾಲ ವಾಗ್ವಾದ ನೆಡೆಯಿತು.ಸಭೆಯಲ್ಲಿ ರೈತರು ತಾವು ಖರೀದಿಸಿದ ಕೃಷಿ ಕ್ರೀಮಿ ನಾಶಕ ಮತ್ತು ಗೊಬ್ಬರ ಗಳಿಗೆ ದುಪ್ಪಟ್ಟು ಬೆಲೆ ಹಾಕಿ ಮದ್ದಿನ ಕಂಪನಿಗಳು ಹಾಗಲು ದರೋಡೆ ನೆಡೆಸುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಆಗಿಲ್ಲ.ರೈತರ ಒಗ್ಗಟ್ಟಿನ ಕೊರತೆಯೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಸಭೆಯಲ್ಲಿದ್ದ ಸಂತ್ರಸ್ತ ರೈತರು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್, ರೈತರು ಈ ಕ್ರೀಮಿ ನಾಶಕ ಸಿಂಪಡನೆಯಿಂದ ಬೆಳೆಗಳಿಗೆ ಇರುವ ರೋಗದ ಸಮಸ್ಯೆ ಕುರಿತು ಜಮೀನುಗಳಿಗೆ ಭೇಟಿ ನೀಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗೊಣ ರೈತರು ಯಾವುದೇ ಧೃತಿಗೆಡೆದೆ ತಾಳ್ಮೆಯಿಂದ ಸಹಕರಿಸಿ ಎಂದು ಹೇಳಿದರು.ಅಲ್ಲದೇ ಈಗ ಸದ್ಯಕ್ಕೆ ಇಂತಹ ಅನಾನುಕೂಲ ಮಾಡುವಂತಹ ಕ್ರೀಮಿ ನಾಶಕಗಳನ್ನು ಮಾರುವಂತಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಮತ್ತು ಪೋಲೀಸ್ ಇಲಾಖೆಯ ಸಿಬಂದಿಗಳು ಪರಿಸ್ಥಿತಿ ತಿಳಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿ ಅಧಿಕಾರಿಗಳಾದ ಯೋಗಿಶ್,ತೋಟಗಾರಿಕೆ ತಾಲೂಕು ಅಧಿಕಾರಿ ದಯಾನಂದ, ಕೃಷಿ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮತ್ತು ತಾಲೂಕಿನಲ್ಲಿ ಬೆಳೆ ಹಾಳಾದ ಸಂತ್ರಸ್ತ ರೈತರು ಮತ್ತು ಗೊಬ್ಬರ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.