Advertisement

ಅನಧಿಕೃತ ಲೇಔಟ್‌ ಮಾಲೀಕರೇ ಜೋಕೆ

02:56 PM Nov 14, 2020 | Suhan S |

ಹುಬ್ಬಳ್ಳಿ: ಅವಳಿನಗರದಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತುತ್ತಿದ್ದು, ಇಂಥವುಗಳ ಉತಾರದಲ್ಲಿ ಕರ್ನಾಟಕ ಭೂ ಸುಧಾರಣೆ (ಕೆಎಲ್‌ಆರ್‌) ಕಾಯ್ದೆ ಅಡಿ ಸರ್ಕಾರದ ಹೆಸರು ನಮೂದಿಸಲು ಚಿಂತನೆ ನಡೆದಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಡಾದಿಂದ ಇತ್ತೀಚೆಗೆ ಸರ್ವೇ ಮಾಡಿದಾಗ ಅವಳಿನಗರದಲ್ಲಿ ಸುಮಾರು 177 ಅನಧಿಕೃತ ಲೇಔಟ್‌ಗಳಿದ್ದು, ಈಗಾಗಲೇ ಇವುಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಅವರು ಇವನ್ನು ಅಧಿಕೃತಗೊಳಿಸಿಕೊಳ್ಳದಿದ್ದರೆ ಕಂದಾಯ ಇಲಾಖೆಯ ಕೆಎಲ್‌ಆರ್‌ ಕಾಯ್ದೆಯಡಿ ಸರ್ಕಾರದ ಹೆಸರು ನಮೂದಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಹುಡಾದಿಂದ ಈ ಮೊದಲು 57 ಅನಧಿಕೃತ ಲೇಔಟ್‌ಗಳಿಗೆ ನೀಡಲಾಗಿದ್ದ ನೋಟಿಸ್‌ನಲ್ಲಿ 42 ಲೇಔಟ್‌ಗಳವರು ನಿಯಮಾವಳಿ ಅನುಸಾರ ಶೇ.45 ನಾಗರಿಕ ಬಳಕೆ ನಿವೇಶನ (ಸಿಎ ಲ್ಯಾಂಡ್‌), ಶೇ. 10 ಗಾರ್ಡನ್‌ ಹಾಗೂ 9 ಮೀಟರ್‌ರಸ್ತೆ ಬಿಡದೆ ಲೇಔಟ್‌ ನಿರ್ಮಿಸಿದ್ದರಿಂದ ಅವುಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ತಿಂಗಳ ಹಿಂದೆ ಮತ್ತೆ ಸರ್ವೇ ಮಾಡಿದಾಗ 120 ಅನಧಿಕೃತ ಲೇಔಟ್‌ಗಳು ಕಂಡುಬಂದಿದ್ದು, ಅವುಗಳಿಗೂ ನೋಟಿಸ್‌ ನೀಡಲಾಗಿದೆ. ಇನ್ನು 8-10 ದಿನಗಳೊಳಗೆ ಅನಧಿಕೃತ ಲೇಔಟ್‌ಗಳ ಮೇಲೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದರು.

ಲಾಟರಿ ಎತ್ತಿ ಆಯ್ಕೆ: ಹುಡಾದಿಂದ ಲಕಮನಹಳ್ಳಿ ಹಾಗೂ ತಡಸಿನಕೊಪ್ಪದಲ್ಲಿ ನಿರ್ಮಿಸಿದ ಬಡಾವಣೆಗಳಲ್ಲಿನ ನಿವೇಶನಗಳ ಹಂಚಿಕೆಗೆ ಆಹ್ವಾನಿಸಲಾಗಿತ್ತು. ಕಮನಹಳ್ಳಿ ಬಡಾವಣೆಗೆ 328 ಅರ್ಜಿಗಳು ಬಂದಿದ್ದು, 62 ಅರ್ಜಿದಾರರಿಗೆ ಹಾಗೂ ತಡಸಿನಕೊಪ್ಪ ಬಡಾವಣೆಗೆ 3178 ಅರ್ಜಿಗಳು ಬಂದಿದ್ದು, 275 ಅರ್ಜಿದಾರರಿಗೆ ಮುಂದಿನ ತಿಂಗಳು ಲಾಟರಿ ಎತ್ತಿ ಹಂಚಿಕೆ ಮಾಡಲಾಗುವುದು. ಹುಡಾ ವ್ಯಾಪ್ತಿಯಲ್ಲಿ ಅಂದಾಜು 1200 ಬಿಡಿ ಮತ್ತು ಮೂಲೆ ನಿವೇಶನಗಳಿದ್ದು, ತಿಂಗಳಿಗೊಮ್ಮೆ 100 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಕಳೆದ ತಿಂಗಳು ನಡೆಸಿದ 196 ಬಿಡಿ ಮತ್ತು ಮೂಲೆ ನಿವೇಶನಗಳಿಗೆ ಹುಡಾದಿಂದ 7 ಕೋಟಿ ರೂ.ಗಿಂತ ಅಧಿಕ ಬಿಡ್‌ ನಿರೀಕ್ಷಿಸಲಾಗಿತ್ತು. ಆದರೆ 10 ಕೋಟಿಗೂ ಅಧಿಕ ಬಿಡ್‌ಗೆ ಹಂಚಿಕೆಯಾಗಿವೆ ಎಂದು ತಿಳಿಸಿದರು.

2019ರಲ್ಲಿ ಸರ್ಕಾರದಿಂದ ಅವಳಿನಗರದ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ)ಗೆ ಅನುಮೋದನೆ ಆಗಿದ್ದು, ಇದರಲ್ಲಿನ ಸಣ್ಣ-ಪುಟ್ಟ ಬದಲಾವಣೆಗಾಗಿ ಪರಿಷ್ಕರಣೆಗೆ ಅನುಮೋದನೆ ಸಿಕ್ಕಿದೆ.ಜಿಐಎಸ್‌ ಆಧಾರಿತ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲಾಗುತ್ತಿದ್ದು, ಇಜಿಐಎಸ್‌ಕಂಪನಿಗೆ ಟೆಂಡರ್‌ ಆಗಿದೆ. ಅದು ಭೂಮಿ ಬಳಕೆ ಜೊತೆ ನೀರು, ಒಳಚರಂಡಿ ಸೇರಿಮೂಲಸೌಕರ್ಯ ಹಾಗೂ ಆಸ್ತಿ ತೆರಿಗೆ ಬಗ್ಗೆ ಜಿಐಎಸ್‌ ಆಧಾರಿತ ಮೂಲ ನಕ್ಷೆ ಸರ್ವೇ ಮಾಡುತ್ತದೆ. ಆಸ್ತಿ ತೆರಿಗೆಗೆ ಸಂಬಂಧಿಸಿ ಪಾಲಿಕೆಯಲ್ಲಾದ ತಪ್ಪುಗಳನ್ನುಸರಿಪಡಿಸಲಾಗುವುದು. ಕಂಪನಿಸರ್ವೇಯನ್ನು 2021ರ ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳಿಸಲಿದೆ. ಆಗ ಪರಿಷ್ಕೃತ 3ನೇ ಹಂತದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಂದ ಅನುಮೋದನೆ ಸಿಕ್ಕು ಜಾರಿಯಾದರೆ ಆಗ ಮುಂದಿನ 10 ವರ್ಷಗಳ ವರೆಗೆಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.

Advertisement

ಹುಡಾದಿಂದ ಇದುವರೆಗೆ ಒಟ್ಟು 359 ನಾಗರಿಕ ಬಳಕೆ ನಿವೇಶನ ಹಂಚಿಕೆ ಮಾಡಲಾಗಿದೆ. 10-15 ವರ್ಷದಿಂದ ಅವನ್ನು ಬಳಸಿಕೊಂಡಿಲ್ಲ. ಬಳಸದ ನಿವೇಶನಗಳನ್ನು ಹಿಂಪಡೆಯಲು ನೋಟಿಸ್‌ ನೀಡಲಾಗುವುದು. ನಾಗೇಶ ಕಲಬುರ್ಗಿ, ಹುಡಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next