Advertisement

ವಿದ್ಯುತ್‌ ತೊಂದರೆಯಾದರೆ ಗಮನಕ್ಕೆ ತನ್ನಿ : ಕಾಶಿನಾಥ

06:19 PM Dec 14, 2020 | Suhan S |

ಬೀಳಗಿ: ವಿದ್ಯುತ್‌ ಗ್ರಾಹಕರಿಗೆ ತೊಂದರೆ ಆಗದಂತೆ ಹೆಸ್ಕಾಂ ಇಲಾಖೆ ಅಧಿಕಾರಿಗಳುಕಾರ್ಯನಿರ್ವಹಿಸಬೇಕು. ವಿದ್ಯುತ್‌ ಸಮಸ್ಯೆ ಬಂದಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ವಿದ್ಯುತ್ಛಕ್ತಿ ಜಿಲ್ಲಾ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ಸ್ಥಳೀಯ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಎಲ್‌ಬಿಸಿ ಪ್ರವಾಸಿ ಮಂದಿರದಸಭಾ ಭವನದಲ್ಲಿ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ, ಕಾರ್ಯ ಮತ್ತು ಪಾಲನೆಉಪವಿಭಾಗ ಬೀಳಗಿ ಇವರ ಆಶ್ರಯದಲ್ಲಿ ನಡೆದಗ್ರಾಹಕರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿನ ಉದ್ಯಮಿಗಳಿಗೆ ತೊಂದರೆ ಆಗದಂತೆ 24×7 ವಿದ್ಯುತ್‌ ಸಂಪರ್ಕ ಒದಗಿಸಲಾಗುವುದು. ಗ್ರಾಮೀಣ ಭಾಗದಲ್ಲಿರೈತರಿಗೆ 7 ತಾಸು ತ್ರೀ ಫೇಸ್‌ ವಿದ್ಯುತ್‌ಒದಗಿಸಲಾಗುವುದು. ರೈತರು ಸಹಕಾರನೀಡಬೇಕು. ಗ್ರಾಹಕರು ವಿದ್ಯುತ್‌ ಬಳಕೆಯಬಿಲ್ಲನ್ನು ಸಕಾಲದಲ್ಲಿ ಮರುಪಾವತಿಸಬೇಕು. ನಿಮ್ಮ ಯಾವುದೇ ಕೆಲಸಗಳು ವಿಳಂಬವಾದಲ್ಲಿ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.

ಉದ್ಯಮಿ ಪ್ರಕಾಶ ಅಂತರಗೊಂಡ ಮಾತನಾಡಿ, ಬೀಳಗಿ ಪಟ್ಟಣದಿಂದ ಬೀಳಗಿ ಕ್ರಾಸ್‌ವರೆಗೆ ಸಣ್ಣ-ಪುಟ್ಟ ಉದ್ಯೋಗಿಗಳು ಇದ್ದಾರೆ. ಅವರಿಗೆವಿದ್ಯುತ್‌ ಅವಶ್ಯವಿದ್ದು ಪದೆಪದೇ ವಿದ್ಯುತ್‌ವ್ಯತ್ಯಯದಿಂದಾಗಿ ತೊಂದರೆಯಾಗುತ್ತಿದೆ.ವಿದ್ಯುತ್‌ ಸರಬರಾಜಿನಲ್ಲಿ ತೊಂದರೆಯಾಗದಂತೆಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸಮರ್ಪಕವಿದ್ಯುತ್‌ ಸರಬರಾಜಿನಿಂದ ಇಲಾಖೆಗೂಉತ್ತಮ ಆದಾಯ ಬರಲಿದೆ. ಕಾರಣ, ಕೂಡಲೆ ಅಧಿಕಾರಿಗಳು ಸಮರ್ಪಕ ವಿದ್ಯುತ್‌ ಒದಗಿಸುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಬೇಕೆಂದು ಸಭೆಗೆ ಸಲಹೆ ನೀಡಿದರು.

ಯತ್ನಟ್ಟಿ ಗ್ರಾಮದ ರಾಜೇಂದ್ರ ಬಾರಕೇರ ಮಾತನಾಡಿ, ಯತ್ನಟ್ಟಿ ಪುನರ್ವಸತಿ ಕೇಂದ್ರದಲ್ಲಿ ವಿದ್ಯುತ್‌ ಕಂಬಗಳಲ್ಲಿನ ವೈರ್‌ಗಳು ಜೋತು ಬಿದ್ದಿವೆ. ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಕೂಡಲೆ ಕಾಮಗಾರಿ ಮಾಡಿ ಅಪಾಯ ತಪ್ಪಿಸಿಎಂದರು. ಈಗಾಗಲೆ ದುರಸ್ತಿ ಕಾಮಗಾರಿಗಳಿಗೆಟೆಂಡರ್‌ ಆಗಿದೆ ಎಂದು ಹೇಳಿದ ಜಿಲ್ಲಾ ಅಧೀಕಕ್ಷಕ ಅಭಿಯಂತರರು, ಶೀಘ್ರ ಕಾಮಗಾರಿ ಕೈಗೊಳ್ಳಲು ಸ್ಥಳದಲ್ಲಿದ್ದ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಗ್ರಾಹಕರಿಂದ ಅಹವಾಲು ಸ್ವೀಕರಿಸಿದರು.

Advertisement

ಗ್ರಾಹಕರಾದ ವಿ.ಜಿ.ರೇವಡಿಗಾರ, ಬಸವರಾಜಉಮಚಗಿಮಠ, ವಿರೂಪಾಕ್ಷಯ್ಯ ಹಿರೇಮಠಹಲವು ವಿಷಯಗಳ ಕುರಿತು ಸಭೆಯಗಮನಕ್ಕೆ ತಂದರು. ಮುಧೋಳ ಹೆಸ್ಕಾಂ ಇಇಗಂಗಾಧರ ಲೋಣಿ, ಬೀಳಗಿ ಹೆಸ್ಕಾಂ ಎಇಇ ವಿಜಯಕುಮಾರ ಚೌಹಾಣ್‌, ಬೀಳಗಿ ಶಾಖೆಯ ಎಸ್‌ಒ ಮಹಾಂತೇಶ ಹೊನ್ನಿಹಾಳ, ಅನಗವಾಡಿಎಸ್‌ಒ ವಿ.ಎಸ್‌.ಅಗಸಿಮುಂದಿನ, ಕಾತರಕಿಎಸ್‌ಒ ಕೃಷ್ಣಾ ನಾಯಕ, ಗಲಗಲಿ ಶಾಖೆಯ ಎಸ್‌ಒ ಡಿ.ಎ.ಕಿಲ್ಲೇದಾರ, ಎಎಒ ಬಿ.ಎನ್‌. ಮಠಪತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next