Advertisement

ಕೊಕ್ಕಡ ಎಂಡೋ ಕೇಂದ್ರಕ್ಕೆ ರಾಜ್ಯ ವಿಕಲ ಚೇತನ ಆಯುಕ್ತ ಭೇಟಿ

12:40 AM Feb 22, 2019 | |

ಕೊಕ್ಕಡ: ಎಂಡೋ ಸಂತ್ರಸ್ತರಿಗೆ ಸರಕಾರ ನೀಡಿದ ಸೌಲಭ್ಯಗಳು ಸರಿಯಾಗಿ ಅವರ ಮನೆಬಾಗಿಲಿಗೆ ತಲುಪುತ್ತಿಲ್ಲ ಎಂಬ ಎಂಡೋ ಹೋರಾಟಗಾರ ಸಂಜೀವ ಕಬಕ ಮತ್ತು ಕೊಕ್ಕಡದ ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರ ದೂರಿನ ಸತ್ಯಾ ಸತ್ಯತೆಯನ್ನು ತಿಳಿಯುವ ಸಲುವಾಗಿ ಕರ್ನಾಟಕ ರಾಜ್ಯ ವಿಕಲ ಚೇತನರ ಕಲ್ಯಾಣ ಇಲಾಖಾ ಆಯುಕ್ತ ವಿ.ಎಸ್‌.ಬಸವರಾಜು ಅವರು ಕೊಕ್ಕಡದ ಎಂಡೋಪಾಲನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Advertisement

ಈ ಸಂದರ್ಭ ಎಂಡೋಪಾಲನಾ ಕೇಂದ್ರದಲ್ಲಿ ಇರುವ ಹಲವು ಮಕ್ಕಳು ವಿದ್ಯಾರ್ಜನೆ ಮಾಡಲು ಶಕ್ತರಾಗಿದ್ದರೂ ಜಿಲ್ಲಾ ಶಿಕ್ಷಣ ಇಲಾಖೆ ಕಡೆಯಿಂದ ಪ್ರತೀ ಎಂಡೋ ಸಂತ್ರಸ್ತರನ್ನು ಕಲಿಕೆಗಾಗಿ ಪ್ರೇರೇಪಣೆ ನೀಡಲು ವಿಫ‌ಲವಾಗಿರುವುದನ್ನು ಆಯುಕ್ತರು ಪರಿಗಣಿಸಿದರು.. ಈ ಸಂದರ್ಭ ಶಿಕ್ಷಣ ಇಲಾಖಾ ಅಧಿಕಾರಿಗಳ ಜತೆ ಮಾತನಾಡಿದ ಆಯುಕ್ತರು, ಶಿಕ್ಷಣ ಇಲಾಖೆಯ ಮೂಲಕ ಪ್ರತೀ ಗ್ರಾಮಗಳ ಎಂಡೋ ಸಂತ್ರಸ್ತರ ಮನೆಗಳಿಗೆ ಭೇಟಿ ಮಾಡಿ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಆದೇಶಿಸಿದರು.

ಶಿಕ್ಷಣ ಇಲಾಖೆ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ, ಮುಂದಿನ ಸಭೆಗೆ ಸರಿಯಾದ ಅಂಕಿ ಅಂಶಗಳ ಸಹಿತ ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ಮೊಬೈಲ್‌ ಚಿಕಿತ್ಸಾ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಸರಕಾರದಿಂದ ಮಾಹಿತಿ ಹಕ್ಕಿನಲ್ಲಿ ನೀಡಿದ ವರದಿಯಲ್ಲಿ ಉಲ್ಲೇಖೀಸಿರುವಂತೆ ಪ್ರತೀ ಸಂತ್ರಸ್ತರಿಗೆ ಪಡಿತರ ಸರಬರಾಜು ಆಗುತ್ತಿಲ್ಲ ಎನ್ನುವ ದೂರಿಗೆ ಆಯುಕ್ತರು ಪರಿಶೀಲಿಸುವ ಭರವಸೆ ನೀಡಿದರು. 

ಈ ಸಂದರ್ಭ ರಾಜ್ಯ ವಿಕಲ ಚೇತನರ ಕಲ್ಯಾಣ ಇಲಾಖೆಯ ಅಸಿ ಸ್ಟೆಂಟ್‌ ಕಮಿಷನರ್‌ ಎಸ್‌.ಕೆ. ಪದ್ಮನಾಭ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ, ಜಿಲ್ಲಾ ಶಿಕ್ಷಣಾಧಿಕಾರಿ ಶಿವರಾಮಯ್ಯ, ತಾ.ಶಿಕ್ಷಣಾಧಿಕಾರಿ ತಾರಾಕೇಸರಿ, ಕಂದಾಯ ನಿರೀಕ್ಷಕ ಪ್ರತೀಕ್‌, ಗ್ರಾಮಕರಣಿಕ ರೂಪೇಶ್‌, ಸಾಮಾಜಿಕ ಹೋರಾಟಗಾರ ಸಂಜೀವ ಕಬಕ, ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಶಿ. ಇಲಾಖಾ ನೋಡೆಲ್‌ ಅಧಿಕಾರಿ ಗಳಾದ ಸೂರ್ಯನಾರಾಯಣ ಪುತ್ತೂ ರಾಯ, ಸೀತಾಕುಮಾರಿ, ದಿವ್ಯಾ  ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next