Advertisement

ಚುನಾವಣೆ ಅಕ್ರಮ ನಿಗಾ ವಹಿಸಲು ಎಂಸಿಸಿ ತಂಡ ಭೇಟಿ

04:03 PM Dec 15, 2020 | Suhan S |

ಹಾವೇರಿ: ಜಿಲ್ಲೆಯ ಗ್ರಾಪಂಗಳಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ನಿಗಾವಹಿಸಲು ಇಂದಿನಿಂದಲೇ ಎಂಸಿಸಿ ತಂಡ ಗ್ರಾಮಗಳಿಗೆ ಭೇಟಿ ನೀಡಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಗ್ರಾಪಂ ಚುನಾವಣಾ ವೀಕ್ಷಕರಾದ ನಾಗೇಂದ್ರ ಹೊನ್ನಾಳಿ ಸೂಚನೆ ನೀಡಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಹಾಗೂ ಚುನಾವಣೆಗೆ ನಿಯೋಜಿತ ವಿವಿಧ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಮೊದಲ ಹಂತದ ಚುನಾವಣೆ ಸ್ಪರ್ಧಿ ಗಳು ಅಂತಿಮಗೊಂಡ ತಕ್ಷಣವೇ ಕಡ್ಡಾಯವಾಗಿ ಈ ಅಭ್ಯರ್ಥಿಗಳ ಸಭೆ ನಡೆಸಿ ಗ್ರಾಪಂ ಚುನಾವಣೆ ಮಾದರಿ ನೀತಿ ಸಂಹಿತೆ ಕುರಿತಂತೆ ಮಾಹಿತಿ ನೀಡಬೇಕು. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರತಿ ನೀಡಿ ಸಹಿ ಪಡೆಯಿರಿ ಎಂದು ಸಲಹೆ ನೀಡಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳು, ಕೋವಿಡ್‌ ಮುನ್ನೆಚ್ಚರಿಕೆ ಮಾರ್ಗಸೂಚಿಗಳ ಪಾಲನೆಯಲ್ಲಿ ಅಭ್ಯರ್ಥಿಗಳು ವಹಿಸಬೇಕಾದಮುನ್ನೆಚ್ಚರಿಕೆ ಕ್ರಮಗಳು, ಯಾವ ಕೆಲಸ ಕಾನೂನು ಬಾಹೀರ, ಯಾವುದೂ ಸಮ್ಮತ ಎಂಬ ಮಾಹಿತಿ ಕುರಿತಂತೆ ಅಭ್ಯರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೊದಲ ಹಂತದ ನಾಮಪತ್ರ ಸಲ್ಲಿಕೆ ಹಾಗೂಪರಿಶೀಲನೆ ಕಾರ್ಯ ಮುಕ್ತಾಯವಾಗಿದೆ. ನಿಯಮಾವಳಿ ಅನುಸಾರ ನಮೂನೆಗಳಲ್ಲಿ ತಿರಸ್ಕೃತ, ಪುರಸ್ಕೃತ, ಅವಿರೋಧ ಆಯ್ಕೆ ಹಾಗೂ ಕಣದಲ್ಲಿರುವ ಅಂತಿಮ ಸ್ಪ ರ್ಧಿಗಳ ಮಾಹಿತಿ ಸಲ್ಲಿಸಬೇಕು. ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಹೆಸರು ಮತಪತ್ರದಲ್ಲಿ ದೋಷರಹಿತವಾಗಿ ಮುದ್ರಣ ಮಾಡಲು ಎಚ್ಚರಿಕೆ ವಹಿಸಬೇಕು. ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾದ ಚಿಹ್ನೆಗಳು, ಬ್ಯಾಲೆಟ್‌ ಪೇಪರ್‌ ಗಳಲ್ಲಿ ಸಮಾನ ಅಳತೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಮುದ್ರಣಗೊಳ್ಳುವಂತೆ ಗರಿಷ್ಠ ಎಚ್ಚರಿಕೆ ವಹಿಸಬೇಕು.ಅವಿರೋಧವಾಗಿ ಆಯ್ಕೆಗೊಂಡವರ ಹೆಸರುಗಳು ಮತಪತ್ರದಲ್ಲಿ ಮುದ್ರಿಸಬಾರದು ಎಂದು ಸೂಚನೆ ನೀಡಿದರು.

ಚುನಾವಣೆ ಪ್ರಚಾರ ಕಾರ್ಯದಲ್ಲಿ ಆಮಿಷ, ಒತ್ತಡಗಳು ಏರದಂತೆ ಸೂಕ್ತ ನಿಗಾವಹಿಸಬೇಕು. ಪೊಲೀಸ್‌, ಅಬಕಾರಿ ಹಾಗೂ ಎಂಸಿಸಿ ನೋಡಲ್‌ ಅಧಿಕಾರಿಗಳ ತಂಡ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ನಿಗಾವಹಿಸಬೇಕು. ಪಕ್ಷಾತೀತ ಚುನಾವಣೆ ಕಾರಣ ಅಭ್ಯರ್ಥಿಗಳ ಪ್ರಚಾರ ಸಾಮಗ್ರಿಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ, ಪಕ್ಷಗಳ ಚಿಹ್ನೆ ಹಾಗೂ ರಾಜಕೀಯ ಮುಖಂಡರ ಹೆಸರು ಬಳಸುವಂತಿಲ್ಲ. ಈ ರೀತಿ ಬಳಕೆ ಮಾಡಿದರೆ ತಕ್ಷಣ ಆಯೋಗದ ಮಾರ್ಗಸೂಚಿಯಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

Advertisement

ಅಂಚೆ ಮತದಾನ, ಸೇವಾ ಮತದಾನ, ಮತಗಟ್ಟೆಗಳ ಸಿದ್ಧತೆ, ವಿಕಲಚೇತನ ಮತದಾರರಿಗೆ ಸೌಲಭ್ಯ, ಕೌಂಟಿಂಗ್‌ ಸೆಂಟರ್‌ಗಳ ಸಿದ್ಧತೆಗಳ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಡಿಸಿ ಸಂಜಯ ಶೆಟ್ಟೆಣ್ಣವರ, ಎಸ್ಪಿ ಕೆ.ಜಿ. ದೇವರಾಜು, ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಮಾತನಾಡಿದರು. ಈ ವೇಳೆ ಉಪವಿಭಾಗಾಧಿಕಾರಿ ಡಾ| ದಿಲೀಷ್‌ ಶಶಿ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ, ತಹಶೀಲ್ದಾರ್‌ ಜಿ.ಎಸ್‌. ಶಂಕರ್‌, ಹಾವೇರಿ ತಾಪಂ ಇಒ ಬಸವರಾಜಪ್ಪ, ವಿವಿಧ ಅಧಿಕಾರಿಗಳು ಇದ್ದರು. ವಿಡಿಯೋಸಂವಾದದ ಮೂಲಕ ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮತ್ತು ಜಿಲ್ಲೆಯ ಎಲ್ಲ ತಹಶೀಲ್ದಾರಗಳು, ತಾಪಂ ಇಒಗಳು, ಇತರ ಅಧಿಕಾರಿಗಳು ಭಾಗವಹಿಸಿದ್ದರು.

ತರಬೇತಿ ಮುಂದೂಡಿಕೆ :  ಗ್ರಾಪಂ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಜರುಗಲಿರುವ ಹಾವೇರಿ, ರಾಣಿಬೆನ್ನೂರು, ಹಿರೇಕೆರೂರು ಹಾಗೂರಟ್ಟಿಹಳ್ಳಿ ತಾಲೂಕುಗಳಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾದ ಧಿಕಾರಿ ಮತ್ತುಸಿಬ್ಬಂದಿಗಳಿಗೆ ಡಿ.15ರಂದು ಆಯೋಜಿಸಲಾದತರಬೇತಿಯನ್ನು ಡಿ.16ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಡಿ.15ರಂದು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯುತ್ತಿರುವ ಕಾರಣ ಕರ್ನಾಟಕ ರಾಜ್ಯಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಮನವಿ ಹಿನ್ನೆಲೆಯಲ್ಲಿ ತರಬೇತಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next