Advertisement

ಆಸ್ಪತ್ರೆಗೆ ಸತ್ಯಶೋಧನಾ ಬಿಜೆಪಿ ಸಮಿತಿ ಭೇಟಿ

11:41 AM Sep 20, 2017 | Team Udayavani |

ದಾವಣಗೆರೆ: ರಾಜ್ಯದಲ್ಲಿ ಈಚೆಗೆ ಸಂಭವಿಸುತ್ತಿರುವ ಶಿಶುಗಳ ಸಾವಿಗೆ ವಾಸ್ತವಿಕ ಅಂಶಗಳ ಅಧ್ಯಯನಕ್ಕಾಗಿ
ರಚಿತಗೊಂಡಿರುವ ಬಿಜೆಪಿಯ ಸತ್ಯಶೋಧನಾ ಸಮಿತಿಯ ಶಾಸಕ ಎಸ್‌. ಸುರೇಶ್‌ಕುಮಾರ್‌, ವಿಧಾನ ಪರಿಷತ್‌
ಮಾಜಿ ಸದಸ್ಯ ಅಶ್ವತ್‌ ನಾರಾಯಣ್‌ ಮಂಗಳವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement

ತುರ್ತು ನಿಗಾ ಘಟಕಕ್ಕೆ ಭೇಟಿ ನೀಡಿದ ಇಬ್ಬರು, ಅಲ್ಲಿನ ವಾತಾವರಣ, ನೀಡಲಾಗುತ್ತಿರುವ ಚಿಕಿತ್ಸೆ, ವೈದ್ಯಕೀಯ
ಮತ್ತು ವೈದ್ಯಕೀಯೇತರ ಸಿಬ್ಬಂದಿ ಇತರೆ ವಿಚಾರಗಳ ಬಗ್ಗೆ ಆಸ್ಪತ್ರೆ ಅಧೀಕ್ಷಕಿ ಡಾ| ಎಚ್‌ .ಡಿ. ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ಎಂ.ಎಸ್‌. ರಾಘವೇಂದ್ರಸ್ವಾಮಿ ಅವರಿಂದ ಮಾಹಿತಿ ಪಡೆದರು.

ತರುವಾಯ ಹೆರಿಗೆ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದ ಅವರು, ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿರುವ ಮಹಿಳೆಯರಿಂದ ಚಿಕಿತ್ಸೆ ಕೊಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಶೌಚಾಲಯ ಪರಿಶೀಲಿಸಿದ ಅವರು, ಸ್ವತ್ಛತೆ
ಕಾಪಾಡಿಕೊಳ್ಳುವಂತೆ ತಿಳಿಸಿದರು.

ನವಜಾತಶಿಶು ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ, ಹಾಸಿಗೆ, ವೆಂಟಿಲೇಟರ್‌, ಅತಿ ಕಡಿಮೆ ತೂಕ ಇರುವ ಮಕ್ಕಳಿಗೆ ನೀಡಲಾಗುವ ಸರ್ಫೆಕ್ಟಟೆಂಟ್‌ (Surfictanant)  ಇಂಜೆಕ್ಷನ್‌ ಲಭ್ಯತೆ ಬಗ್ಗೆ ಮಾಹಿತಿ ಪಡೆದರು. ಆ ಇಂಜೆಕ್ಷನ್‌
ಈವರೆಗೆ ಬಳಕೆ ಮಾಡದೇ ಇರುವ ವಿಚಾರ ಕೇಳಿ ಆಂತಕ ಮತ್ತು ಅಚ್ಚರಿ ವ್ಯಕ್ತಪಡಿಸಿದರು. ಬಹು ಸಮಯದ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಪರಿಶೀಲನೆ ನಡೆಸಿ, ಉತ್ತಮ ರೀತಿಯ ಚಿಕಿತ್ಸೆ ಕೊಡುವಂತೆ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್ಚಾಗಿ ಸಂಭವಿಸುತ್ತಿರುವ ನವಜಾತ ಹಾಗೂ ಶಿಶುಗಳ ಮರಣಕ್ಕೆ
ಕಾರಣ, ಮರಣ ಪ್ರಮಾಣ ತಡೆಗಟ್ಟುವ ಕುರಿತಂತೆ ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರಚಿಸಿರುವ ಸಮಿತಿಯ ಸದಸ್ಯರಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದಾಗಿ ತಿಳಿಸಿದರು.

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಎಚ್‌.ಎನ್‌. ಶಿವಕುಮಾರ್‌, ಸಿ. ರಮೇಶ್‌ನಾಯ್ಕ, ಸಿ.ಪಿ. ಅನಿತಾ, ರವಿ, ಗೌತಮ್‌ ಜೈನ್‌, ಧನುಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next