ಲಂಡನ್: ವಾಯು ಮಾಲಿನ್ಯದಿಂದ ಈ ಪರಿಸರವನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತರ ಲಂಡನ್‌ನ ಜೂಡ್ ವಾಕರ್ (17) ಎಂಬ ಬಾಲಕ, ಕಾಲ್ನಡಿಗೆಯಲ್ಲಿ ಜಾಥಾ ಹೊರಟಿದ್ದಾನೆ.
ವಾಹನಗಳಿಂದ ಹೊರಬರುವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ವಾಹನಗಳ ಮಾಲೀಕರಿಗೆ ಪ್ರತ್ಯೇಕವಾದ ಇಂಗಾಲ ತೆರಿಗೆ ವಿಧಿಸುವಂತೆ ಆತ ಆಗ್ರಹಿಸಿದ್ದು, ಅದರ ಜಾರಿಗಾಗಿ ಕಾಲ್ನಡಿಗೆ ಜಾಥಾ ಆರಂಭಿಸಿದ್ದಾರೆ.
ಈ ಹಿಂದೆ, ಮಳೆ-ಗಾಳಿ ಲೆಕ್ಕಿಸದೆ, ಬಯಲು, ಹುಲ್ಲುಗಾವಲು, ಬೆಟ್ಟ-ಗುಡ್ಡಗಳನ್ನು ಹತ್ತಿಳಿದು ಬ್ರಿಟನ್ ಸಂಸತ್ತಿನವರೆಗೆ ಕಾಲ್ನಡಿಗೆ ಜಾಥಾ ಹೋಗಿ, ಇಡೀ ವಿಶ್ವದ ಗಮನ ಸೆಳೆದಿದ್ದ ಗ್ರೆಟಾ ಥನºರ್ಗ್‌ಳನ್ನು ಸ್ಫೂರ್ತಿಯಾಗಿಟ್ಟುಕೊಂಡಿದ್ದಾನೆ.
ಇದನ್ನೂ ಓದಿ:ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು !
ಇತ್ತೀಚೆಗೆ, ವಿಶ್ವಸಂಸ್ಥೆಯ 195 ಪರಿಸರ ತಜ್ಞರು ಹಾಗೂ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹಲವಾರು ಕರಾವಳಿ ನಗರಗಳು ಈ ಶತಮಾನದ ಅಂತ್ಯದ ಹೊತ್ತಿಗೆ ಮುಳುಗುವ ಬಗ್ಗೆ ಹಾಗೂ ಜಗತ್ತಿನ ಹಲವಾರು ಕಡೆ ಹೆಚ್ಚು ಚಂಡಮಾರುತ, ಉಷ್ಣ ಗಾಳಿ ಬೀಸುವ ಬಗ್ಗೆ ಎಚ್ಚರಿಸಿದ್ದರು.