Advertisement

ಸ್ವೀಡನ್‌ ವಿಜ್ಞಾನಿ ಸ್ವಾಂಟೆ ಪಾಬೊಗೆ ನೊಬೆಲ್‌

07:59 PM Oct 03, 2022 | Team Udayavani |

ಸ್ಟಾಕ್‌ಹೋಮ್‌: ಸ್ವೀಡಿಷ್‌ ವಿಜ್ಞಾನಿ ಸ್ವಾಂಟೆ ಪಾಬೊ ನಡೆಸಿದ ಮಾನವ ವಿಕಾಸದ ಕುರಿತ ಸಂಶೋಧನೆಗಳಿಗಾಗಿ ಅವರಿಗೆ ವೈದ್ಯಕೀಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್‌ ಪ್ರಶಸ್ತಿ ಸಂದಾಯವಾಗಿದೆ.

Advertisement

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್‌ನಲ್ಲಿ ನೊಬೆಲ್‌ ಕಮಿಟಿ ಕಾರ್ಯದರ್ಶಿ ಥಾಮಸ್‌ ಪೆರ್ಲಮೆನ್‌ ಅವರು ಈ ವರ್ಷದ ಮೊದಲ ಕಂತಿನ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಿದರು. ಪ್ರಶಸ್ತಿಯು 10 ಮಿಲಿಯನ್‌ ಸ್ವೀಡಿಷ್‌ ಕ್ರೌನರ್‌(900,357 ಅಮೆರಿಕನ್‌ ಡಾಲರ್‌) ಮೊತ್ತ ಒಳಗೊಂಡಿದೆ.

ಆಧುನಿಕ ಮಾನವರ ಜೀನೋಮ್‌ ಮತ್ತು ನಮ್ಮ ಹತ್ತಿರದ ಅಳಿವಿನಂಚಿನಲ್ಲಿರುವ ನಿಯಾಂಡರ್ತಲ್‌ ಮತ್ತು ಡೆನಿಸೋವನ್ಸ್‌ಗಳ ಜೀನೋಮ್‌ಗಳನ್ನು ಹೋಲಿಸುವ ಸಂಶೋಧನೆಯನ್ನು ಸ್ವಾಂಟೆ ಪಾಬೊ ಮಾಡಿದ್ದಾರೆ. ಸಂಶೋಧನೆಗಳ ಪ್ರಕಾರ ಈ ಎರಡು ಜಾತಿಗಳ ನಡುವೆ ಮಿಶ್ರಣವಿದೆ ಎಂಬುದು ಕಂಡುಬಂದಿದೆ.

ಈ ವಾರ ಉಳಿದ ವಿಭಾಗಗಳ ನೊಬೆಲ್‌ ಪ್ರಶಸ್ತಿಗಳು ಪ್ರಕಟವಾಗಲಿದೆ. ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ 2022ರ ನೊಬೆಲ್‌ ಶಾಂತಿ ಪುರಸ್ಕಾರ ಹಾಗೂ ಅ.10ರಂದು ಅರ್ಥಶಾಸ್ತ್ರ ವಿಭಾಗದಲ್ಲಿ 2022ರ ನೊಬೆಲ್‌ ಪ್ರಶಸ್ತಿಗಳು ಘೋಷಣೆಯಾಗಲಿದೆ ಎಂದು ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next