Advertisement

ವಿಶ್ವಮಾತಾ ಗೋ ಶಾಲೆಗೆ ಸೇಡಂ ಭೇಟಿ

03:05 PM Jul 04, 2017 | |

ಶಹಾಪುರ: ಗೋವುಗಳನ್ನು ಪೂಜ್ಯನೀಯ ಬಾವದಿಂದ ಕಾಣಬೇಕು ಎಂದು ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ್‌ ಸೇಡಂ ಹೇಳಿದರು.

Advertisement

ನಗರದ ಬೆಟ್ಟದಡಿಯಲ್ಲಿರುವ ವಿಶ್ವಮಾತಾ ಗೋವು ಶಾಲೆಗೆ ಸೋಮವಾರ ಭೇಟಿ ನೀಡಿದ ಅವರು, ಗೋಶಾಲೆ ವೀಕ್ಷಿಸಿ ಆಗು ಹೋಗುಗಳನ್ನು ವಿಚಾರಿಸಿದರು. ಗೋವು ಶಾಲೆಯ ಮುಖ್ಯಸ್ಥ ಸಂಗಮೇಶ ಶಾಸ್ತ್ರೀಗಳ ಜೊತೆಗೆ ಮಾತುಕತೆ ನಡೆಸಿ ಅವರು, ಸೂಕ್ತ ಸಲಹೆ ಮಾರ್ಗದರ್ಶನ ನೀಡಿ, ಗೋವು ಶಾಲೆಯ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎಂದರು.

ಇದೇ ಸಂದರ್ಭದಲ್ಲಿ ಗೋವು ಶಾಲೆಯ ಹೊಸ ಪ್ರದೇಶವನ್ನು ಪರಿವೀಕ್ಷಣೆಗೆ ತೆರಳಿ ಪರಿಶೀಲಿಸಿದರು. ಸ್ಥಳದ ಮಾಹಿತಿ ಪಡೆದು ತಮ್ಮ ಸಲಹೆ ತಿಳಿಸಿದರು. ದತ್ತು ಪಡೆದಿದ್ದ ಗೋವು ಶಾಲೆಯ ಎರಡು ಹಸುಗಳ ಪಾಲನೆ ಪೋಷಣೆಗಾಗಿ ಬೇಕಾದ ಪ್ರತಿ ಮಾಸಿಕ ನೀಡುವ 5 ಸಾವಿರ ರೂ. ಚಕ್‌ನ್ನು ಶಾಸ್ತ್ರೀಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಶಾಸ್ತ್ರೀ, ಪಾಟೀಲ್‌ ಅವರ ಮಾರ್ಗದರ್ಶನ ಅತ್ಯಮೂಲ್ಯ. ಅವರ ಸಹಕಾರ ಮಾರ್ಗದರ್ಶನದಿಂದ ಇಂದು ಗೋವು ಶಾಲೆ ಅಭಿವೃದ್ಧಿ ಪಥದಲ್ಲಿ ನಡೆದಿದೆ. ಇಂತಹ ವಯಸ್ಸಿನಲ್ಲಿ ಅವರ ಕಾಳಜೀ ಸಹಕಾರ ಮೆಚ್ಚವಂತಹದ್ದು, ಪ್ರತಿ ವಾರಕ್ಕೊಮ್ಮೆ ಕರೆ ಮಾಡಿ ಇಲ್ಲಿನ ಬದಲಾವಣೆ ಹಾಗೂ ಗೋವು ಶಾಲೆ ಬಗ್ಗೆ ವಿಚಾರಿಸುತ್ತಾರೆ. ತಿಂಗಳಲ್ಲಿ ಎರಡು ಬಾರಿ ಗೋವು ಶಾಲೆಗೆ ಭೇಟಿ ನೀಡಿತ್ತಾರೆ. ಪ್ರಚಾರ ಪಡೆಯುವ ಜಾಯಮಾನ ಅವರದ್ದಲ್ಲ. ಅವರ ಉತ್ತಮ ಸಲಹೆ ಮಾರ್ಗದರ್ಶನ ನಮಗೆಲ್ಲ ಅತ್ಯಗತ್ಯವಿದ್ದು, ಯುವಕರು ಕೂಡ ಅವರ ಆದರ್ಶ ಬೆಳೆಸಿಕೊಳ್ಳಬೇಕು ಎಂದರು.

ಅಮೃತರಾವ್‌ ಮೂಲಗೆ, ಭೀಮರಡ್ಡಿ ಬೈರಡ್ಡಿ ಸೇರಿದಂತೆ ಸಂಸ್ಕೃತಿ ಪಾಠ ಶಾಲಾ ಮಕ್ಕಳು ಮತ್ತು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next