Advertisement
ಸುಮಾರು 14 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರೋಹಿತ್ ಮೋದಿ ಅವರು ಐಎಎಸ್ ಹುದ್ದೆ ತ್ಯಜಿಸಿ ನಂತರ ಪ್ರತಿಷ್ಠಿತ ಕಂಪನಿಗಳ ಸಿಇಒ ಆಗಿ ಯಶಸ್ಸು ಕಂಡವರಲ್ಲಿ ಒಬ್ಬರಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ನಂತರ ಪ್ರತಿಷ್ಠಿತ ಕಂಪನಿಗಳಾದ ಎಲ್ ಆ್ಯಂಡ್ ಟಿ ಐಡಿಪಿಲ್, ಸುಜ್ಲಾನ್ ಎನರ್ಜಿ, ಗ್ಯಾಮನ್ ಇಂಡಿಯಾ ಮತ್ತು ಎಸ್ಸೆಲ್ ಇನ್ಫ್ರಾ ಪ್ರಾಜೆಕ್ಟ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.
Related Articles
Advertisement
ಸುದೀರ್ಘ 14 ವರ್ಷಗಳ ಅವಧಿಯಲ್ಲಿ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇನ್ನುಳಿದಂತೆ ನಗರಾಭಿವೃದ್ಧಿ, ಜವಳಿ, ಇಂಡಸ್ಟ್ರಿ ಮತ್ತು ಫೈನಾನ್ಸ್, ಕಲ್ಲಿದ್ದಲು, ಮೂಲಸೌಕರ್ಯ, ರಸಗೊಬ್ಬರ ಇಲಾಖೆಯಲ್ಲಿ ರೋಹಿತ್ ಅವರು ಕರ್ತವ್ಯ ನಿರ್ವಹಿಸಿದ್ದರು.
ರೋಹಿತ್ ಮೋದಿ ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಜತೆ ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಐಎಂಎಫ್ ಮತ್ತು ಐಎಫ್ ಸಿ ಗಳಿಗೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
1999ರಲ್ಲಿ ಪ್ರತಿಷ್ಠಿತ ಐಎಎಸ್ ಅಧಿಕಾರಿ ಹುದ್ದೆಯನ್ನು ತ್ಯಜಿಸಿ ರೋಹಿತ್ ಮೋದಿ ಅವರು ಖಾಸಗಿ ಕಂಪನಿಯತ್ತ ಮುಖ ಮಾಡಿದ್ದರು. ಹೀಗೆ ಸುಮಾರು ಎರಡು ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ ರೋಹಿತ್ ಮೋದಿ ಅವರು ಮಹೀಂದ್ರ ಇಂಡಸ್ಟ್ರೀಯಲ್ ಪಾರ್ಕ್, ಸುಜ್ಲಾನ್ ಎನರ್ಜಿ, ಗ್ಯಾಮನ್ ಇಂಡಿಯಾ, ಎಲ್ ಆ್ಯಂಡ್ ಟಿ IDPL, ತಮಿಳುನಾಡು ರಸ್ತೆ ಅಭಿವೃದ್ಧಿ ಕಂಪನಿ(TNRDC) ಮತ್ತು ರಾಜಸ್ಥಾನ್ ರಸ್ತೆ ಅಭಿವೃದ್ಧಿ ಕಂಪನಿಗಳ ಸಿಇಒ ಹುದ್ದೆಗೇರಿದ್ದರು. ಇತ್ತೀಚೆಗಷ್ಟೇ ಪ್ರತಿಷ್ಠಿತ Essel Infra ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.