ನವದೆಹಲಿ : ಮನುಷ್ಯನ ಜೀವನವೇ ಹಾಗೆ, ಎಲ್ಲವನ್ನೂ ಕೊಟ್ಟು ನಂತ್ರ ಏನೂ ಬಿಡದಂತೆ ಕಿತ್ತಕೊಳ್ಳುತ್ತದೆ. ನಮ್ಮ ಕಣ್ಣ ಮುಂದೆಯೇ ಅದೆಷ್ಟೋ ಇಂತಹ ಉದಾಹರಣೆಗಳು ಇವೆ. ಆದ್ರೆ ಕೋಟ್ಯಾಧಿಪತಿಯಾಗಿದ್ದ ವ್ಯಕ್ತಿ ಒಂದೇ ರಾತ್ರಿಗೆ ಭಿಕ್ಷುಕನಾಗುತ್ತಾನೆ ಅಂದ್ರೆ ನೀವು ನಂಬುತ್ತೀರ? ನಂಬಲೇ ಬೇಕು ಯಾಕಂದ್ರೆ ಇದು ಯಾವುದೋ ಕಾಲ್ಪನಿಕ ಕಥೆಯಲ್ಲ, ಬದಲಿಗೆ ನಿಜ ಕಥೆ.
ಹೌದು ಹಿಂದೊಮ್ಮೆ ಕೋಟಿ ಕೋಟಿ ದುಡ್ಡು, ಐಷಾರಾಮಿ ಕಾರು, ಬಂಗಲೆ, ಆಳು ಕಾಳುಗಳು ಇದ್ದ ರಮೇಶ್ ಯಾದವ್ ಎಂಬ ಶ್ರೀಮಂತ ವ್ಯಕ್ತಿ ತನ್ನ ಮನೆಯವರಿಗೇ ಬೇಡವಾಗಿ ರಾತ್ರೋ ರಾತ್ರಿ ಮನೆಯಿಂದ ದೂಡಲ್ಪಡುತ್ತಾನೆ. ನಂತ್ರ ತಾನು ಭಿಕ್ಷುಕನಾಗಿ ಜೀವನ ಸಾಗಿಸುತ್ತಿರುವ ಸತ್ಯ ಕಥೆ.
ಎರಡು ವರ್ಷಗಳಿಂದ ಮಧ್ಯಪ್ರದೇಶದ ಇಂಧೋರ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ರಮೇಶ್ ಯಾದವ್‌ನನ್ನು ಅಲ್ಲಿನ ಎನ್‌ಜಿಒ ಸಂಸ್ಥೆ ಕೇಂದ್ರ ಸರ್ಕಾರದ ದೀನಬಂಧು ಪುನರ್ವಸತಿ ಯೋಜನೆಯಡಿ ನಿರ್ಗತಿಕರಿಗೆ ತೆರೆದಿರುವ ಶಿಬಿರದಲ್ಲಿ ಪತ್ತೆ ಹಚ್ಚಿದೆ. ಈ ವೇಳೆ ರಮೇಶ್ ಯಾದವ್ ಹೇಳಿರುವ ಕಥೆ ಕೇಳಿದ ಅಲ್ಲಿನವರು ಆಶ್ಚರ್ಯ ಚಕಿತರಾಗಿದ್ದಾರೆ. ಹಾಗಾದ್ರೆ ಆ ರಮೇಶ್ ಯಾದವ್ ಏನಾಗಿದ್ರು ಗೊತ್ತಾ..?
ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ರಮೇಶ್ ಅವರನ್ನು ಪ್ರಶ್ನೆ ಮಾಡಿದಾಗ ಆ ಕುಬೇರನ ಜೀವನದ ಸತ್ಯ ಹೊರ ಬಿದ್ದಿದೆ. ರಮೇಶ್ ಓರ್ವ ಶ್ರೀಮಂತ ವ್ಯಕ್ತಿಯಾಗಿದ್ದು ಕುಡಿತದ ದಾಸನಾಗಿರುತ್ತಾನೆ. ಇದ್ರಿಂದ ಬೇಸತ್ತ ಅವರ ಮನೆಯವರೇ ಆತನನ್ನು ಮನೆಯಿಂದ ಹೊರ ಹಾಕುತ್ತಾರೆ. ನಂತ್ರ ಆ ರಮೇಶ್ ಕುಡಿತಕ್ಕಾಗಿ ಎಲ್ಲರ ಬಳಿ ಹಣವನ್ನು ಭಿಕ್ಷೆ ಬೇಡುತ್ತಿದ್ದಾನೆ. ಈ ವಿಚಾರವನ್ನ ಸ್ವತಃ ರಮೇಶ್ ಯಾದವ್ ಹೇಳಿದ್ದಾರೆ.
ಇನ್ನ ತನ್ನ ಮನೆಯಲ್ಲಿ ತನಗೆ ಏನೆಲ್ಲ ಬೇಕೋ ಅದೆಲ್ಲ ತನ್ನ ಕೊಠಡಿಯಲ್ಲೇ ಸಿಗುವಂತೆ ವ್ಯವಸ್ಥೆ ಮಾಡಿಸಿಕೊಂಡಿದ್ದನಂತೆ ಈ ರಮೇಶ್. ಈತನಿಂದ ಮಾಹಿತಿ ಪಡೆದ ಎನ್‍ಜಿಒ ಅಧಿಕಾರಿಗಳು ಆತನ ಮನೆಗೆ ಭೇಟಿ ಕೊಟ್ಟಾಗ ರಮೇಶ್ ಹೇಳಿದ ರೀತಿಯಲ್ಲೇ ಮನೆ ಇರುವುದು ಗೊತ್ತಾಗಿ ಆಶ್ಚರ್ಯ ಪಟ್ಟಿದ್ದಾರೆ.
ಮತ್ತೊಂದು ಮಾಹಿತಿ ಅಂದ್ರೆ ರಮೇಶ್ ಮನೆಯವರು ಒಂದು ಮಾತನ್ನು ಹೇಳಿದ್ದು, ರಮೇಶ್ ಈಗಲೂ ಕುಡಿತವನ್ನು ಬಿಟ್ಟರೆ ನಾವು ಮನೆಗೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.