Advertisement

ಮೀಟ್‌ ಮಿ.ಮುನ್ನಾ ಹವಾಲ್ದಾರ್‌! ಮೇಕೆ ನೇತೃತ್ವದಲ್ಲಿ ನಡೆಯಲಿದೆ ಪಥ ಸಂಚಲನ

12:37 AM Mar 27, 2021 | Team Udayavani |

ಲಕ್ನೋ: ಮಾ.30ರಂದು ಲಕ್ನೋದಲ್ಲಿರುವ “ಸೇನಾ ವೈದ್ಯಕೀಯ ಕಾರ್ಪ್ ಕೇಂದ್ರ’ (ಎಎಂಸಿ) ತನ್ನ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಕೇಂದ್ರದ ಸಿಬಂದಿಯು ಪಥಸಂಚಲನ ನಡೆ ಸಲಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ. ಅದೇನೆಂದರೆ, ಯೋಧರ ಪಥಸಂಚಲನದ ಮುಂದಾಳತ್ವವನ್ನು ನಾಲ್ಕು ಅಡಿ ಎತ್ತರದ ಮೇಕೆಯೊಂದು ವಹಿಸಿಕೊಳ್ಳಲಿದೆ! ಅದರ ಹೆಸರು ಮುನ್ನಾ ಹವಾಲ್ದಾರ್‌!

Advertisement

ಸೇನೆಯಲ್ಲಿ ಮೇಕೆ ಸೇರಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರವಿದೆ. 1951ರಲ್ಲಿ ಗ್ವಾಲಿಯರ್‌ನ ಮಹಾರಾಜ ಜೀವಾಜಿರಾವ್‌ ಸಿಂಧಿಯಾ ಅವರ ಸೇನೆ ಎಎಂಸಿಯಲ್ಲಿ ವಿಲೀನವಾಯಿತು. ಮಹಾರಾಜ ಸೇನೆಯಲ್ಲಿ ಕವಾಯತು ಪಡೆಯಲ್ಲಿ ಈ ಮೇಕೆ ಸೇವೆ ಸಲ್ಲಿಸುತ್ತಿತ್ತು. ಮೇಕೆ ಇರುವುದು ಅದೃಷ್ಟದ ಸಂಕೇತ ಎಂದು ನಂಬಿದ್ದ ರಾಜಾ ಸಿಂಧಿಯಾ, ತಮ್ಮಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಮೇಕೆಯನ್ನೂ ಎಎಂಸಿಯಲ್ಲಿ ಮುಂದುವರಿಸ ಬೇಕು ಎಂಬ ಬೇಡಿಕೆ ಇಟ್ಟಿದ್ದರು.

ಹಾಗಾಗಿ 1951ರ ಎ. 16ರಂದು ಅಧಿಕೃತವಾಗಿ ಎಎಂಸಿ ಸೇರಿದ, ಕಪ್ಪುಬಣ್ಣದ ಮರಾಠಿ ತಳಿಯ ಈ ಮೇಕೆ ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಂಡಿದೆ. ಆಗಿನಿಂದ ಇಲ್ಲಿಯವರೆಗೆ ಸುಮಾರು 70 ವರ್ಷಗಳ ಸುದೀರ್ಘ‌ ಸೇವೆಯಲ್ಲಿ ಒಂದು ದಿನವೂ ರಜೆ ಪಡೆಯದೇ ಸೇವೆ ಸಲ್ಲಿಸಿರುವುದು ಇದರ ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next