Advertisement

ಆರನೇ ತರಗತಿ ವಿದ್ಯಾರ್ಥಿನಿಯ ಬ್ಯಾಟಿಂಗ್ ವೈರಲ್‌: ಈಕೆಗೆ ಆ ಕ್ರಿಕೆಟರ್‌ನಂತೆ ಆಗಬೇಕಂತೆ

07:54 PM Oct 16, 2022 | Team Udayavani |

ಲಡಾಖ್:‌ಸೋಶಿಯಲ್‌ ಮೀಡಿಯಾದಲ್ಲಿ ದಿನ ಹತ್ತಾರು ವಿಡಿಯೋಗಳು ವೈರಲ್‌ ಆಗುತ್ತವೆ. ಇತ್ತೀಚೆಗೆ ಬೆಂಗಳೂರಿನ ಯುವಕನೊಬ್ಬ ಸಂಸ್ಕೃತ ಕಾಮೆಂಟರಿ ಮಾಡಿದ ವಿಡಿಯೋ ನೆಟ್ಟಿಗರನ್ನು ಸೆಳೆದಿತ್ತು. ಇದೀಗ ಲಡಾಖ್‌ ನ ಬಾಲಕಿಯೊಬ್ಬಳು ಕ್ರಿಕೆಟ್‌ ಆಡಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಅದು ಶಾಲಾ ಸ್ನೇಹಿತೆಯರ ಗುಂಪು. ಅವರು ಬಿಡುವಿನ ವೇಳೆ ಕ್ರಿಕೆಟ್‌ ಆಡುತ್ತಿದ್ದಾರೆ. ಒಬ್ಬರಾದ ಮೇಲೊಬ್ಬರು ಬ್ಯಾಟ್‌ ಬೀಸಿ ಕ್ರಿಕೆಟ್‌ ಆಡುತ್ತಿರುವ ಗುಂಪಿನಲ್ಲಿ ಬಾಲಕಿಯೊಬ್ಬಳು ಬ್ಯಾಟ್‌ ಬೀಸಿರುವ ವಿಡಿಯೋ ನೆಟ್ಟಿಗರ ಕಣ್ಮನ ಸೆಳೆದಿದೆ.

ಮಕ್ಸೂಮ ಎನ್ನುವ 6 ತರಗತಿ ವಿದ್ಯಾರ್ಥಿನಿ ಒಬ್ಬ ಅನುಭವಿ ಬ್ಯಾಟರ್‌ ಬ್ಯಾಟ್‌ ಹಿಡಿದು ನಿಲ್ಲುವಂತೆ, ಸಿಕ್ಸರ್‌, ಬೌಂಡರಿ ಸಿಡಿಸುವಂತೆ ಆಡುತ್ತಿದ್ದಾಳೆ. ಈಕೆಯ ನಿಲುವು, ಬಾಲ್‌ ಹೊಡೆಯುವ ಭಂಗಿ, ರನ್‌ ಓಡುವುದು ಹಾಗೂ ಬೌಂಡರಿಗಳನ್ನು ಹೊಡೆಯವ ಸಾಮರ್ಥ್ಯವನ್ನು ನೋಡಿದರೆ ಒಬ್ಬ ಪಕ್ಕಾ ತರಬೇತು ಹೊಂದಿದ ಕ್ರಿಕೆಟಿಗ ಆಡಿದ ಹಾಗೆಯೇ ವಿಡಿಯೋದಲ್ಲಿ ಕಂಡುಬಂದಿದೆ.

ಇವಳ ಕ್ರಿಕೆಟ್‌ ಆಟದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗಿದೆ. ವಿಡಿಯೋ ವೈರಲ್‌ ಆಗಿದ್ದು, ಮಕ್ಸೂಮ ಈ ಬಗ್ಗೆ ಮಾತಾನಾಡಿದ್ದು, “ನನ್ನ ಮೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿ ನಾನು ಅವರಂತೆ ಆಡಲು ಬಯಸುತ್ತೇನೆ. ನಾನು ಎಂ.ಎಸ್‌.ಧೋನಿ ಅವರ ಹೆಲಿಕಾಪ್ಟರ್‌ ಶಾಟನ್ನು  ಕಲಿಯಬೇಕೆಂಡಿದ್ದೇನೆ” ಎಂದು ಹೇಳಿದ್ದಾಳೆ.

ಮನೆಯಲ್ಲಿ ನನ್ನ ತಂದೆ, ಶಾಲೆಯಲ್ಲಿ ನನ್ನ ಶಿಕ್ಷಕರು ಕ್ರಿಕೆಟ್‌ ಆಡಲು ಪ್ರೋತ್ಸಾಹ ನೀಡುತ್ತಾರೆ. ನಾನು ಕೊಹ್ಲಿಯಂತೆ ಆಡಲು ತುಂಬಾ ಶ್ರಮವಹಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next