Advertisement

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

02:56 PM Sep 21, 2023 | Team Udayavani |

ಮುಂಬಯಿ: ಸಿನಿಮಾ ಎನ್ನುವ ಬಣ್ಣದ ಲೋಕದಲ್ಲಿ ಅವಕಾಶ ಸಿಗುವುದೇ ಕಷ್ಟ. ಕೆಲವರಿಗೆ ಅಂಥ ಅವಕಾಶಗಳು ಸಿಗುತ್ತದೆ. ಆದರೆ ಆ ಅವಕಾಶದ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಒಮ್ಮೆ ಯಶಸ್ಸು ಸಿಕ್ಕರೆ, ಮತ್ತೊಮ್ಮೆ ಸೋಲು ಎದುರಾಗುತ್ತದೆ. ಯಶಸ್ಸು – ಸೋಲು ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆಯಿಡಬೇಕಾಗುತ್ತದೆ.

Advertisement

ಅತೀ ಸಣ್ಣ ವಯಸ್ಸಿನಲ್ಲಿ ಸಿನಿಮಾ ಲೋಕದಲ್ಲಿ ಮಿಂಚಿದ ನಟಿಯಲ್ಲಿ ನಿರ್ದೇಶಕ ಮಹೇಶ್‌ ಭಟ್‌ ಅವರ ಪುತ್ರಿ ಪೂಜಾ ಭಟ್‌ ಕೂಡ ಒಬ್ಬರು. ಪೂಜಾ ಭಟ್‌ ಅವರ ವೃತ್ತಿ ಜೀವನದಲ್ಲಿ ಯಶಸ್ಸಿನೊಂದಿಗೆ ವಿವಾದ ಕೂಡ ಸಮಾನವಾಗಿ ಕೇಳಿ ಬಂದಿದೆ ಬಂದಿದೆ.

ಇತ್ತೀಚೆಗೆ ನಟಿ ಪೂಜಾ ಭಟ್‌ ಬಿಗ್‌ ಬಾಸ್‌ ಓಟಿಟಿ-2 ನಲ್ಲಿ ಸ್ಪರ್ಧಿಯಾಗಿ ಭಾಗಿದ್ದರು. ಆದಾದ ಬಳಿಕ ಅವರು ಹಲವು ಸಂದರ್ಶನವನ್ನು ಕೊಟ್ಟಿದ್ದು, ಇದರಲ್ಲಿ ವೃತ್ತಿ ಹಾಗೂ ವೈಯಕ್ತಿಕ ಜೀವನದ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 25 ರ ವಯಸ್ಸಿನಲ್ಲಿ ವೃತ್ತಿ ಜೀವನ ಉತ್ತುಂಗದಲ್ಲಿರುವಾಗಲೇ ನಟನೆ ತೊರೆದ ಬಗ್ಗೆ ಪೂಜಾ ಭಟ್‌ ಮಾತನಾಡಿದ್ದಾರೆ.

ಪೂಜಾ ಭಟ್‌ ತನ್ನ 17 ರ ವಯಸ್ಸಿನಲ್ಲಿ ʼಡ್ಯಾಡಿʼ ಸಿನಿಮಾದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವನ್ನು ಅವರ ತಂದೆ ಮಹೇಶ್‌ ಭಟ್‌ ಅವರೇ ನಿರ್ದೇಶನ ಮಾಡಿದ್ದರು.

ಈ ಬಗ್ಗೆ ಮಾತನಾಡುವ ನಟಿ ಪೂಜಾ ಭಟ್‌, “ಡ್ಯಾಡಿ, ದಿಲ್ ಹೈ ಕಿ ಮಾಂತಾ ನಹಿ” ನಂತರ “ಸಡಕ್” ಹ್ಯಾಟ್ರಿಕ್ ಹಿಟ್ ಆಗಿತ್ತು. 19 ನೇ ವಯಸ್ಸಿನಲ್ಲಿ ನಾನು ಸೂಪರ್ ಸ್ಟಾರ್ ಆದೆ. ಆದರೆ 24 ನೇ ವಯಸ್ಸಿನಲ್ಲಿ ಇಂಡಸ್ಟ್ರಿ ಮುಗಿದಿದೆ ಎಂದು ಹೇಳಿದಾಗ ನಾನು ‘ಯೇ ಹೈ ದುನಿಯಾ’ ಎಂದು ಹೇಳಿದೆ. 24 ನೇ ವಯಸ್ಸಿನಲ್ಲಿ, ಹೆಚ್ಚಿನ ಜನರು ವೃತ್ತಿ ಪ್ರಾರಂಭಿಸುತ್ತಿರುವಾಗ‌, ಸಣ್ಣ ವಯಸ್ಸಿನಲ್ಲಿ ಸ್ಟಾರ್‌ಡಮ್‌ ಉತ್ತುಂಗಕ್ಕೇರುವ ಭಾರತದ ಏಕೈಕ ಉದ್ಯಮ ಇದಾಗಿದೆ” ಎಂದಿದ್ದಾರೆ.

Advertisement

25 ರ ವಯಸ್ಸಿನಲ್ಲಿ ನಾನು ನಟನೆ ಬಿಟ್ಟು, ಪ್ರೊಡಕ್ಷನ್‌ ಹೌಸ್‌ ಆರಂಭಿಸಿದೆ. ʼತಮನ್ನಾʼ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದರಿಂದ ನನಗೆ ಮೊದಲ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಆಗ ನನಗೆ ಆತ್ಮ ತೃಪ್ತಿಯ ಅನುಭವವಾಯಿತು. ನಾನು ದೇಶಾದ್ಯಂತ ಜನರನ್ನು ಭೇಟಿ ಮಾಡಿದ್ದೆ. ಆ ಸಿನಿಮಾದ ಹಣವನ್ನು ಚಾರಿಟಿಗೆ ದಾನವಾಗಿ ನೀಡಲಾಯಿತು. ನಂತರ ನಾನು ಕಾಜೋಲ್ ಜೊತೆ ʼದುಷ್ಮನ್ʼ ಸಿನಿಮಾ ಮಾಡಿದೆ ಆ ಬಳಿಕ ʼಝಖ್ಮ್ʼ ಸಿನಿಮಾವನ್ನು ನಿರ್ದೇಶಿಸಿದೆ” ಎಂದರು.

“ನಾನು 21 ಕ್ಯಾಮರಾವನ್ನು ಫೇಸ್‌ ಮಾಡಿಲ್ಲ. ಬರೀ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿದೆ. ಆ ವೇಳೆ ನನಗೆ ನನ್ನ ಸ್ಟಾರ್‌ ಡಮ್‌ ಮುಗಿಯಿತು. ಇದು ನನ್ನ ಹೊಸ ಅಧ್ಯಾಯವೆಂದು ಅನ್ನಿಸಿತು” ಎಂದು ಹೇಳಿದ್ದಾರೆ.

ಪೂಜಾ ಭಟ್‌ ಕೊನೆಯ ಬಾರಿ ನಿರ್ಮಾಪಕಿಯಾಗಿ ʼಜಿಸ್ಮ್ 2ʼ ಮಾಡಿದ್ದರು. ಇದು ಸನ್ನಿ ಲಿಯೋನ್‌ ಅವರ  ಚೊಚ್ಚಲ ಬಾಲಿವುಡ್‌ ಸಿನಿಮಾವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next