ನಮ್ಮದೇ ಹಳೆಯ ಕತೆಗಳನ್ನು ಸಾಕ್ಷಿಗಳಿಲ್ಲದೆ ಪ್ರಸ್ತುತಿ ಪಡಿಸುವುದು ಹೇಗೆ? ಈ ಪ್ರಕ್ರಿಯೆಯಲ್ಲಿ ಕಲ್ಪನೆ ಮಿಶ್ರಿತಗೊಳ್ಳುವುದಿಲ್ಲವೆ? ಹಾಗಾದಾಗ ನಮ್ಮ ಹಳೆಯ ಘಟನೆಗಳನ್ನು ತಿರುಚಿದಂತಾಗುವುದಿಲ್ಲವೆ? ಇದೇ ಸಂದಿಗ್ಧತೆಯನ್ನು ಇಟ್ಟುಕೊಂಡು ವಿನೂತನ ಶೈಲಿಯ ಕಥಾನಕವೊಂದನ್ನು ನಾಟಕರೂಪದಲ್ಲಿ ಮೂಡಿಸುವ ಪ್ರಯತ್ನ “ಲೇಡಿ ಆನಂದಿ’. ಅವಳಿಗೆ ಮೀಸೆಯೆಂದರೆ ಇಷ್ಟ. ಮರಾಠಿ ರಂಗಭೂಮಿಯಲ್ಲಿ ಹೆಸರು ಮಾಡಿದ ನಾಟಕವಿದು. ಡಾಕ್ಯುಮೆಂಟರಿ ಶೈಲಿಯ ನಾಟಕವೆಂದೇ ಹೆಸರಾದ ಲೇಡಿ ಆನಂದಿ ನಗರದಲ್ಲಿ ಪ್ರದರರ್ಶನ ಕಾಣುತ್ತಿದೆ.
ಎಲ್ಲಿ?: ಗೋಯೆಥ್ ಇನ್ಸ್‌ಟಿಟ್ಯೂಟ್
ಯಾವಾಗ?: ಜನವರಿ 13, ಸಂಜೆ 7