Advertisement

ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಮೀರಾ ಡಿ’ಸಿಲ್ವ ಸೋಲು

09:39 PM May 22, 2022 | Team Udayavani |

ಮಂಗಳೂರು: ಆಸ್ಟ್ರೇಲಿಯಾದ ಫೆಡರಲ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸುದ್ದಿಯಾಗಿದ್ದ ಮಂಗಳೂರು ಮೂಲದ ಮೀರಾ ಡಿ’ಸಿಲ್ವ ಸೋಲು ಅನುಭವಿಸಿದ್ದಾರೆ.

Advertisement

ಶನಿವಾರ ಫೆಡರಲ್‌ ಚುನಾವಣೆಯ ಮತ ಎಣಿಕೆ ನಡೆದಿದ್ದು, ಅವರು ತಮ್ಮ ಪ್ರತಿಸ್ಪರ್ಧಿ ಬಿಲ್‌ ಶಾರ್ಟನ್‌ ವಿರುದ್ಧ ಪರಾಜಯ ಅನುಭವಿಸಬೇಕಾಯಿತು.

ಮೀರಾ ಡಿ’ಸಿಲ್ವ ಅವರು ಆಡಳಿತಾರೂಢ ಲಿಬರಲ್‌ ಪಾರ್ಟಿಯನ್ನು ಪ್ರತಿನಿಧಿಸಿ ವಿಕ್ಟೋರಿಯಾದ ಮೆರಿಬಿರ್ನಾಂಗ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಲೇಬರ್‌ ಪಾರ್ಟಿ ಇದುವರೆಗೆ ಸೋಲು ಕಾಣದ ಕ್ಷೇತ್ರ ಇದಾಗಿದ್ದು, ಅದರಿಂದ ಸ್ಪರ್ಧಿಸಿರುವ ಶಾರ್ಟನ್‌ ಜಯ ಗಳಿಸಿದ್ದಾರೆ.

ಮೀರಾ ಅವರ ಹೆತ್ತವರು ಕುಲಶೇಖರದವರಾಗಿದ್ದು, ಆಕೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. 2004ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿ ಯಶಸ್ವಿ ಉದ್ಯಮಿಯಾದವರು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next