Advertisement

ಮೀರಾ-ಭಾಯಂದರ್‌ ಪಾಲಿಕೆ ಚುನಾವಣೆ : 3 ಕನ್ನಡಿಗರಿಗೆ ಜಯ

02:38 PM Aug 23, 2017 | |

ಮುಂಬಯಿ: ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಕನ್ನಡಿಗರು ಜಯಭೇರಿ ಬಾರಿಸಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಅರವಿಂದ ಶೆಟ್ಟಿ 
ಶುಭಾರಂಭ್‌ ಹೊಟೇಲ್ಸ್‌  ಆ್ಯಂಡ್‌ ರೆಸಾರ್ಟ್ಸ್  ಪ್ರೈವೇಟ್‌ ಲಿಮಿಟೆಡ್‌,  ಶುಭಾರಂಭ್‌ ಕನ್‌ಸ್ಟ್ರಕ್ಷನ್‌, ಎಲೈನ್ಸ್‌ ಇನ್‌ಫ್ರಾ ಸ್ಟ್ರಕ್ಚರ್‌ ಆ್ಯಂಡ್‌ ರಿಲೇಟರ್  ಪ್ರೈವೇಟ್‌ ಲಿಮಿಟೆಡ್‌  ಮೊದ ಲಾದ ವಾಣಿಜ್ಯ ಸಂಕೀರ್ಣಗಳ ನಿರ್ದೇಶಕ, ಭಾಯಂದರ್‌ ಹನು ಮಾನ್‌ ಭಜನಾ ಮಂಡ ಳಿ ಯಲ್ಲಿ ಹಲ ವಾರು ವರ್ಷಗ ಳಿಂದ ಗೌರವಾಧ್ಯಕ್ಷರಾಗಿ,  ಮೀರಾ ಡಹಣೂ ಬಂಟ್ಸ್‌ ಇದರ ನೂತನ ಅಧ್ಯಕ್ಷರಾಗಿ, ಬಿಜೆ ಪಿಯ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಪ್ರಸ್ತುತ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ್‌ ಶೆಟ್ಟಿ ಅವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿದ್ದಾರೆ.

ತುಳು ಕನ್ನಡಿಗರ ಹಲವಾರು ಸಂಸ್ಥೆಗಳ ಆಶ್ರಯದಾತರಾಗಿ ಪ್ರಸಿದ್ಧರಾಗಿರುವ ಇವರು ಮೀರಾ-ಭಾಯಂದರ್‌ ಗೋಲ್ಡನ್‌ ನೆಸ್ಟ್‌  ಪರಿ ಸ ರದ ವಾರ್ಡ್‌ ಕ್ರಮಾಂಕ  12ರಲ್ಲಿ ಸ್ಪರ್ಧಿಸಿ 3317 ಮತ ಗ ಳನ್ನು ಗಳಿಸಿ ಪ್ರತಿ ಸ್ಪರ್ಧಿ ಶಿವ ಸೇನಾ ಅಭ್ಯರ್ಥಿ ಜಂಗಮ್‌ ಅವರನ್ನು 168 ಮತ ಗ ಳಿಂದ ಸೋಲಿ ಸಿ  ವಿಶೇಷ ಸಾಧನೆಗೈದಿದ್ದಾರೆ.  ದಿ| ಆನಂದ ಶೆಟ್ಟಿ ಹಾಗೂ ಲಕ್ಷ್ಮೀ ದಂಪ ತಿಯ ಪುತ್ರರಾಗಿರುವ ಇವರು ಮೀರಾ-ಭಾಯಂದರ್‌ ಮಹಾ ನ ಗರ ಪಾಲಿ ಕೆ ಯಲ್ಲಿ ಬಂಟ ಸಮು ದಾ ಯದ ಪ್ರಥಮ ನಗರ ಸೇವ ಕ ನಾಗಿ ಆಯ್ಕೆ ಯಾಗಿರುವುದು ಉಲ್ಲೇ ಖ ನೀಯ.

ಬಿಜೆಪಿ ಅಭ್ಯರ್ಥಿ ಗಣೇಶ ಗೋಪಾಲ್‌ ಶೆಟ್ಟಿ  
ಮೂಲತಃ ಸಫ‌ಲಿಗ ಕುಟುಂಬದವರಾಗಿದ್ದರೂ ಶೆಟ್ಟಿ ಎಂಬ ಶಿರೋನಾಮೆಯಲ್ಲಿಯೇ ಹೆಸರು ವಾಸಿಯಾಗಿದ್ದ ಗಣೇಶ್‌ ಗೋಪಾಲ್‌ ಶೆಟ್ಟಿ  ಕಳೆದ ಬಾರಿ ಮನಸೇ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಗಳಿಸಿದ್ದಾರೆ. ಈ ಬಾರಿ ಬಿಜೆಪಿ ಪಕ್ಷಕ್ಕೆ ಸೇರಿ ಭಾಯಂದರ್‌ ನವ ಘರ್‌ ರೋಡ್‌ ಪರಿಸರದ ವಾರ್ಡ್‌ ಕ್ರಮಾಂಕ 3 ರಿಂದ ಸ್ಪರ್ಧಿಸಿ ತನ್ನ ಪ್ರತಿ ಸ್ಪರ್ಧಿ ಶಿವಸೇನೆಯ ರಾಜು ಎತೋಸ್ಕರ್‌ ಅವರನ್ನು 169 ಮತಗಳಿಂದ ಸೋಲಿ ಸಿ ದ್ದಾರೆ. ಎರಡು ಬಾರಿ ನಗರ ಸೇವಕರಾಗಿ ಆಯ್ಕೆಯಾಗಿರುವ ಇವರು, ಮೂಲತಃ ಮುಂಡ್ಕೂರಿನ ಗೋಪಾಲ್‌ ಶ್ರೀಯಾನ್‌ ಮತ್ತು  ತಾಯಿ ವಾರಿಜಾ ಶ್ರೀಯಾನ್‌ ದಂಪತಿಯ ಪುತ್ರ.

ಕಾಂಗ್ರೆಸ್‌ನ ಮರ್ಲಿನ್‌ ಡೇಸಾ ಫೆರ್ನಾಂಡಿಸ್‌ 
ಮೂಲತಃ  ಉರ್ವದ  ಕ್ಸೇವಿ ಯರ್‌ ಮುಸ್ಕಾ ಯಿತ್‌ ಮತ್ತು  ಜುಲಿನಾ ಮುಸ್ಕಾ ಯಿತ್‌ ದಂಪ ತಿ ಯ ಪುತ್ರಿ ಮರ್ಲಿನ್‌ ಸಮಾಜ ಸೇವಕಿಯಾಗಿ ಪ್ರಸಿದ್ಧರಾಗಿದ್ದಾರೆ. ದ್ವಿತೀಯ ಬಾರಿಗೆ ಕಾಂಗ್ರೆಸ್‌ ಟಿಕೆ ಟಿ ನಲ್ಲಿ ಮೀರಾ ರೋಡ್‌ ಶೀತಲ್‌ ನಗ ರದ ವಾರ್ಡ್‌ ಕ್ರಮಾಂಕ 19ರಿಂದ ಸ್ಪರ್ಧಿಸಿ ಎದು ರಾ ಳಿ  ಬಿಜೆಪಿ ಸ್ಪರ್ಧಿಯ ನ್ನು 869 ಮತ ಗ ಳಿಂದ ಸೋಲಿ ಸಿದ್ದಾರೆ.  ಮರ್ಲಿನ್‌ ಅವರು ಇಲ್ಲಿನ ರಾಯನ್‌  ಇಂಟರ್‌ನ್ಯಾ ಶ ನಲ್‌ ಸ್ಕೂಲ್‌ ಆ್ಯಂಡ್‌ ಜ್ಯೂನಿ ಯರ್‌ ಕಾಲೇ ಜಿನ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿ ಸಿ ದ್ದ ರು.  ದ್ವಿತೀಯ ಬಾರಿಗೆ ಕಾಂಗ್ರೆಸ್‌ ಪಕ್ಷದಿಂದ ಗೆದ್ದ  ಮೊದಲ ತುಳು 
ಕನ್ನ ಡಿ ಗ ಮಹಿಳೆ ಇವರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next