Advertisement

ಜಗದ ಕವಿಯ ಧ್ಯಾನ

08:32 PM Dec 27, 2019 | Lakshmi GovindaRaj |

“ಯುಗದ ಕವಿ, ಜಗದ ಕವಿ’ಯೆಂದೇ ಬಣ್ಣಿಸಲ್ಪಟ್ಟ ಕುವೆಂಪು ಅವರ ಜನ್ಮದಿನ ಡಿಸೆಂಬರ್‌ 29. ಇದು ಅವರ 115ನೇ ಜನುಮ ದಿನ. ಕಾವ್ಯ, ಕಾದಂಬರಿಗಳೊಂದಿಗೆ ನಮ್ಮೊಂದಿಗೆ ಜೀವಂತವಾಗಿರುವ ಅವರನ್ನು ಕರುನಾಡು ಎಂದಿಗೂ ಮರೆಯದು. ಅದರಂತೆ, ರಾಜಧಾನಿಯ ಹಲವೆಡೆಗಳಲ್ಲೂ ಕುವೆಂಪು ಜನ್ಮದಿನ ಆಚರಣೆಗೊಳ್ಳುತ್ತಿದೆ…

Advertisement

ವಿಶ್ವಮಾನವ ದಿನ
ಕನ್ನಡ ಸಂಘರ್ಷ ಸಮಿತಿಯು, ಕುವೆಂಪು ಅವರ 116ನೇ ಹುಟ್ಟುಹಬ್ಬವನ್ನು ವಿಶ್ವಮಾನವ ದಿನಾಚರಣೆಯಾಗಿ ಆಚರಿಸುತ್ತಿದೆ. ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾಪೌರರಾದ ಎಂ. ಗೌತಮ್‌ ಕುಮಾರ್‌, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ.ಸಾ.ಪ ಮಾಜಿ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌, ಪಾಲಿಕೆ ಸದಸ್ಯೆ ವಾಣಿ ವಿ.ರಾವ್‌, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಭಾಗವಹಿಸಲಿದ್ದಾರೆ. ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ಅಧ್ಯಕ್ಷತೆ ವಹಿಸುವರು. ಕವಯಿತ್ರಿ ಡಾ. ವರದಾ ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಗೀತೆಗಳ ಗಾಯನ ನಡೆಯಲಿದೆ.

ಎಲ್ಲಿ?: ಲಾಲ್‌ಬಾಗ್‌ ಪಶ್ಚಿಮ ದ್ವಾರ
ಯಾವಾಗ?: ಡಿ. 29, ಭಾನುವಾರ ಬೆಳಗ್ಗೆ 8.30

ಕುವೆಂಪು ಗೀತೆಗಳ ಗಾಯನ ಸ್ಪರ್ಧೆ
ಕನ್ನಡ ಸಂಘರ್ಷ ಸಮಿತಿಯ ವತಿಯಿಂದ, ಕುವೆಂಪು ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಿದೆ. ಜನವರಿ 5ರಂದು, ಬೆಳಗ್ಗೆ 10 ಗಂಟೆಗೆ ಇಸ್ರೊ ಬಡಾವಣೆ ಬಸ್‌ ನಿಲ್ದಾಣದ ಹತ್ತಿರದ ಶ್ರೀಶಾರದಾ ವಿದ್ಯಾನಿಕೇತನ (ಎಸ್‌ಎಸ್‌ವಿಎನ್‌) ಶಾಲೆಯ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಹತ್ತು ವರ್ಷದೊಳಗಿನ ಮಕ್ಕಳ ವಿಭಾಗ, ಹದಿನೆಂಟು ವರ್ಷದೊಳಗಿನ ಕಿರಿಯರ ವಿಭಾಗ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರ ವಿಭಾಗ- ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಉದಯೋನ್ಮುಖ ಕಲಾವಿದರಿಗೆ ಮಾತ್ರ ಅವಕಾಶ.

ವಿವರಗಳಿಗೆ: 94488 51781, ಶುಲ್ಕ: 50 ರೂ.

Advertisement

ಕುವೆಂಪು ಜನ್ಮದಿನ
ರಂಗದರ್ಶನ ಪ್ರದರ್ಶನ ಕಲಾಕೇಂದ್ರದ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆ ಪ್ರಯುಕ್ತ, “ಜಲ ಗಾರ’ ನಾಟಕದ ವಿಡಿಯೊ ಚಿತ್ರ ಪ್ರದರ್ಶನ ನಡೆಯಲಿದೆ. ನಿರ್ಮಾಣ ಬಿ.ಕೆ. ಶ್ರೀಧರ್‌, ನಿರ್ದೇಶನ ಮೈಕೋ ಶಂಕರ್‌ ಅವರದ್ದು.

ಎಲ್ಲಿ?: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆ, 2ನೇ ಅಡ್ಡರಸ್ತೆ, 1ನೇ ಬ್ಲಾಕ್‌, ಎಚ್‌ಎಂಟಿ ಬಡಾವಣೆ, ವಿದ್ಯಾರಣ್ಯಪುರ
ಯಾವಾಗ?: ಡಿ.30, ಸೋಮವಾರ, ಸಂಜೆ 6.15

Advertisement

Udayavani is now on Telegram. Click here to join our channel and stay updated with the latest news.

Next