Advertisement
ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಸಮಿತಿ ಶನಿ ವಾರ ಆಯೋಜಿಸಿದ್ದ ಮೊದಲ “ವಿಶ್ವ ಧ್ಯಾನ ದಿನ’ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಪ್ರಶಾಂತವಾದ ಮನಸ್ಸು ಇತರ ನೂರು ಜನರಿಗೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಬಲ್ಲದು. ಧ್ಯಾನವು ಪ್ರತಿಯೊಂದು ವ್ಯಕ್ತಿಗೂ, ಪ್ರತಿಯೊಂದು ಮನೆಗೂ ತಲುಪಬೇಕು. ಇದು ಆಧುನಿಕ ದಿನದ ಸವಾಲುಗಳಾದ ಆತಂಕ, ಕೌಟುಂಬಿಕ ಹಿಂಸಾಚಾರ, ಮಾದಕ ಚಟಗಳಿಂದ ಹೊರಬರುವ ದಾರಿಯಾಗಿದೆ. ಧ್ಯಾನವು ಧರ್ಮಗಳನ್ನು, ಭೂಮಿಯ ಗಡಿಗಳನ್ನು, ವಯೋಮಿತಿಗಳನ್ನು ಮೀರಿರುವಂತದ್ದು. ಇದರಿಂದಾಗಿ ಧ್ಯಾನವು ಜಾಗತಿಕವಾಗಿ ಪ್ರಸಕ್ತವಾಗಿದೆ. ಪ್ರತಿಯೊಂದು ರಾಷ್ಟ್ರವೂ ಸಹ ತನ್ನ ಪ್ರಜೆಗಳಿಗೆ ಹೇಗೆ ವಿಶ್ರಮಿಸುವುದು, ತಮ್ಮ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಪ್ರಶಿಕ್ಷಣವನ್ನು ನೀಡಿದರೆ, ಈ ಜಗತ್ತು ಬಹಳ ಉತ್ತಮವಾದ ಸ್ಥಳವಾಗುತ್ತದೆ” ಎಂದು ಹೇಳಿದರು. ಜತೆಗೆ, ಧ್ಯಾನವು ಈಗ ಆಯ್ಕೆ ಯಾಗಿ ಉಳಿ ದಿಲ್ಲ. ಅದು ಅಗತ್ಯತೆ ಯಾಗಿ ಮಾರ್ಪಾಡಾಗಿದೆ ಎಂದೂ ಅವರು ನುಡಿ ದ ರು.
Related Articles
ಪ ಟ್ಟಿ ದ್ದಾ ರೆ. “ಧ್ಯಾನ ಎಂಬುದು ಧರ್ಮ, ಗಡಿ, ಸಮಯದ ರೇಖೆಯನ್ನು ಮೀರುವ ಶಕ್ತಿ ಹೊಂದಿದೆ. ಒಂದು ಕ್ಷಣ ನಿಲ್ಲಲು ಎಲ್ಲರಿಗೂ ಇದು ಅವಕಾಶ ಒದಗಿಸುತ್ತದೆ. ಈ ಮೂಲಕ ನಾವು ಮತ್ತೂಬ್ಬರನ್ನು ಆಲಿಸ
ಬಹುದು ಅಥವಾ ನಮ್ಮನ್ನೇ ಕೇಳಿಕೊಳ್ಳಬಹುದು’ ಎಂದು ವಿಶ್ವಸಂಸ್ಥೆಯ 79ನೇ ಕಲಾಪದ ಅಧ್ಯಕ್ಷ ಫಿಲೆಮಾನ್ ಯಾಂಗ್ ಹೇಳಿದರು.
Advertisement