Advertisement

ಫ್ಲಿಪ್ ಕಾರ್ಟ್ ನಲ್ಲಿ ಔಷಧಿ ಖರೀದಿ ಸೌಲಭ್ಯಕ್ಕೆ ಚಾಲನೆ

02:57 PM Sep 21, 2022 | Team Udayavani |

ಬೆಂಗಳೂರು: ಭಾರತದಲ್ಲೇ ಹುಟ್ಟಿ, ಬೆಳೆದಿರುವ ಇ–ವಾಣಿಜ್ಯ ಮಾರುಕಟ್ಟೆ ವೇದಿಕೆಯಾಗಿರುವ ಫ್ಲಿಪ್‌ಕಾರ್ಟ್‌, ಫ್ಲಿಪ್‌ಕಾರ್ಟ್‌ ಹೆಲ್ತ್‌+ ನೆರವಿನಿಂದ ತನ್ನ ಆ್ಯಪ್‌ ಮೂಲಕವೇ ಔಷಧಗಳನ್ನು ಖರೀದಿಸುವ ಸೌಲಭ್ಯಕ್ಕೆ ಚಾಲನೆ ನೀಡಿದೆ. ಇದರಿಂದಾಗಿ ಗ್ರಾಹಕರಿಗೆ ಔಷಧಗಳು, ಆರೋಗ್ಯ ವರ್ಧಕ ಉತ್ಪನ್ನಗಳು, ಆರೋಗ್ಯಸೇವಾ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭ್ಯವಾಗಲಿವೆ.

Advertisement

ಫ್ಲಿಪ್‌ಕಾರ್ಟ್‌ನ ವಿಶ್ವಾಸಾರ್ಹ ವೇದಿಕೆಯ ಮೂಲಕ, ಈಚೆಗಷ್ಟೇ ಸುಧಾರಣೆ ತರಲಾಗಿರುವ, ಬಳಕೆದಾರ ಸ್ನೇಹಿ ಇಂಟರ್‌ಫೆಸ್ ನೆರವಿನಿಂದ ಗ್ರಾಹಕರು ಯಾವುದೇ ಅಡಚಣೆ ಇಲ್ಲದ ರೀತಿಯಲ್ಲಿ ಔಷಧಗಳನ್ನು ಮತ್ತು ಆರೋಗ್ಯಸೇವಾ ಉತ್ಪನ್ನಗಳನ್ನು ಖರೀದಿ ಮಾಡಬಹುದು. ಗ್ರಾಹಕರಿಗೆ ಅಸಲಿ ಹಾಗೂ ವಿಶ್ವಾಸಾರ್ಹ ಔಷಧ ಉತ್ಪನ್ನಗಳು ದೊರೆಯುವಂತೆ ಆಗಬೇಕು ಎಂಬ ಉದ್ದೇಶದಿಂದ ರೂಪಿಸಿರುವ ಫ್ಲಿಪ್‌ಕಾರ್ಟ್‌ ಹೆಲ್ತ್‌+ ಆ್ಯಪ್‌ನ ಕಾರಣದಿಂದಾಗಿ ಫ್ಲಿಪ್‌ಕಾರ್ಟ್‌ ವೇದಿಕೆಯ ಮೂಲಕ ಔಷಧಗಳು ಲಭ್ಯವಾಗುತ್ತಿವೆ. ಫ್ಲಿಪ್‌ಕಾರ್ಟ್‌ ಹೆಲ್ತ್‌+ ತನ್ನ ಮೂಲಕ ಔಷಧ ಮಾರಾಟ ಮಾಡುವವರು ಅವುಗಳ ಗುಣಮಟ್ಟವನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಬೇಕು ಎಂದು ತಾಕೀತು ಮಾಡಿದೆ.

ಇಷ್ಟೇ ಅಲ್ಲ, ಆರೋಗ್ಯಸೇವಾ ವಲಯದಲ್ಲಿ ಬಳಕೆದಾರರ ದತ್ತಾಂಶವನ್ನು ಸುರಕ್ಷಿತವಾಗಿ ಇರಿಸುವುದು ಬಹಳ ಮುಖ್ಯ ಅಂಶವೆಂದು ಪರಿಗಣಿಸಿ, ಬಹುಹಂತಗಳ ನಿಯಂತ್ರಣ ವ್ಯವಸ್ಥೆ ಮತ್ತು ಗೌಪ್ಯತೆಯನ್ನು ಕಾಪಾಡುವ ವ್ಯವಸ್ಥೆಯ ಮೂಲಕ ದತ್ತಾಂಶದ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಾಯಿಲೆಗೆ ತುತ್ತಾಗಿರುವವರು ಹಾಗೂ ಅವರ ಆರೈಕೆಯ ಹೊಣೆ ಹೊತ್ತಿರುವವರು ಈಗ ವೈದ್ಯರ ಸಲಹೆ ಆಧರಿಸಿದ 48 ಸಾವಿರಕ್ಕೂ ಹೆಚ್ಚಿನ ಔಷಧಗಳನ್ನು ತರಿಸಿಕೊಳ್ಳಬಹುದು. ವೈದ್ಯರು ನೀಡಿದ ಶಿಫಾರಸು ಚೀಟಿಗಳನ್ನು ಬಹಳ ಸುಲಭವಾಗಿ ಅಪ್‌ಲೋಡ್ ಮಾಡಬಹುದು, ಅಗತ್ಯ ಔಷಧಗಳ ಚೆಕ್‌ಔಟ್‌ ಪ್ರಕ್ರಿಯೆ ಬಹಳ ಸರಳವಾಗಿದೆ, ಹಣ ಪಾವತಿಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ, ಫ್ಲಿಪ್‌ಕಾರ್ಟ್‌ ಹೆಲ್ತ್‌+ ವಾಲೆಟ್‌ ಸೌಲಭ್ಯವನ್ನೂ ನೀಡಲಾಗಿದೆ. ಇವುಗಳ ಜೊತೆಯಲ್ಲೇ, ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರು ತಮ್ಮ ಸೂಪರ್‌ಕಾಯಿನ್‌ಗಳನ್ನು ಬಳಸಿ ಆಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಬಹುದು.

ಇಂಟರ್ನೆಟ್‌ ಸಂಪರ್ಕ ಹೆಚ್ಚಾಗುತ್ತಿರುವ ಕಾರಣ, ಗ್ರಾಹಕರು ಸ್ಮಾರ್ಟ್‌ಫೋನ್‌ಅನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ದೇಶದಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯ ಉತ್ತಮವಾಗಿರುವ ಕಾರಣದಿಂದ ಮತ್ತು ಸರ್ಕಾರದ ಹಲವು ಉಪಕ್ರಮಗಳಿಂದಾಗಿ ಇ–ಫಾರ್ಮಸಿ ಉದ್ಯಮವು ದೇಶದಲ್ಲಿ ಶೇಕಡ 40–45ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರದಲ್ಲಿ (ಸಿಎಜಿಆರ್‌) ಬೆಳೆಯುವ ನಿರೀಕ್ಷೆ ಇದೆ. ಜಾಗತಿಕ ಮಟ್ಟದಲ್ಲಿ ಇ–ಫಾರ್ಮಸಿ ಮಾರುಕಟ್ಟೆಯ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು ಅಂದಾಜು ಶೇ 15ರಿಂದ ಶೇ 20ರಷ್ಟು ಇದೆ (ಆಧಾರ: ಐಬಿಇಎಫ್‌).

Advertisement

‌ ಹೊಸ ತಂತ್ರಜ್ಞಾನದ ಮೂಲಕ ನಾವು ಕೈಗೆಟಕುವ ಬೆಲೆ ಜೊತೆಗೆ ಗ್ರಾಹಕರಿಗೆ ಈ ಬಾರಿಯ ಬಿಗ್‌ ಬಿಲಿಯನ್ ಡೇ ಸಂದರ್ಭದಲ್ಲಿ ಅಸಲಿ ಔಷಧಗಳು ಮತ್ತು ಆರೋಗ್ಯಸೇವಾ ಉತ್ಪನ್ನಗಳಿಗೆ ಅತ್ಯುತ್ತಮ ಹಾಗೂ ಆಕರ್ಷಕ ಕೊಡುಗೆಗಳು ಸಿಗಲಿವೆ’ ಎಂದು ಫ್ಲಿಪ್‌ಕಾರ್ಟ್‌ ಹೆಲ್ತ್‌+ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ್ ಜಾವೇರಿ ಹೇಳಿದ್ದಾರೆ.

‘ದೇಶದ ಅತ್ಯಂತ ವಿಶ್ವಾಸಾರ್ಹ ಪೂರೈಕೆ ವ್ಯವಸ್ಥೆಯಾಗಿ ಇಕಾರ್ಟ್‌ ಈಗಾಗಲೇ ಹೆಸರು ಮಾಡಿದೆ. ಫ್ಲಿಪ್‌ಕಾರ್ಟ್‌ ಮೂಲಕ ಔಷಧ ಖರೀದಿಸಲು ಅವಕಾಶ ಕಲ್ಪಿಸುವ ಮೂಲಕ, ನಾವು ನಮ್ಮ ಪೂರೈಕೆ ವ್ಯವಸ್ಥೆಯ ಮೂಲಕ ಟಾಪ್ 100 ನಗರಗಳ ಆಚೆಗಿನ ಗ್ರಾಹಕರಿಗೂ ಅಸಲಿ ಔಷಧಗಳು ಸಿಗುವಂತೆ ಮಾಡಲಿದ್ದೇವೆ. ದೇಶದ ಪ್ರತಿ ಮನೆಯ ಬಾಗಿಲಿಗೆ ಔಷಧಗಳು ಹಾಗೂ ಆರೋಗ್ಯಸೇವಾ ಉತ್ಪನ್ನಗಳನ್ನು ತಲುಪಿಸುತ್ತೇವೆ ಎಂದು ಫ್ಲಿಪ್‌ಕಾರ್ಟ್‌ನ ಪೂರೈಕೆ ವ್ಯವಸ್ಥೆಯ ಮುಖ್ಯಸ್ಥ ಹಾಗೂ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next