Advertisement

SBI to SC : 2019 ಎ ರಿಂದ 2024 ಫೆ 15ರವರೆಗೆ 22,217 ಚುನಾವಣ ಬಾಂಡ್‌ಗಳ ಖರೀದಿ

10:17 PM Mar 13, 2024 | Team Udayavani |

ಹೊಸದಿಲ್ಲಿ: 2019 ಎಪ್ರಿಲ್ 1 ರಿಂದ 2024 ಫೆ ಫೆಬ್ರವರಿ 15 ರ ನಡುವೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣ ಬಾಂಡ್‌ಗಳನ್ನು ಖರೀದಿಸಿದ್ದು, ಅವುಗಳಲ್ಲಿ 22,030 ಅನ್ನು ರಿಡೀಮ್ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Advertisement

ನ್ಯಾಯಾಲಯದ ನಿರ್ದೇಶನದಂತೆ ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅನುಸರಣೆ ಅಫಿಡವಿಟ್‌ನಲ್ಲಿ ಈ ವಿವರ ಬಹಿರಂಗವಾಗಿದೆ. ಮಾರ್ಚ್ 12 ರಂದು ವ್ಯವಹಾರದ ಅವಧಿಯನ್ನು ಮುಕ್ತಾಯಗೊಳಿಸುವ ಮೊದಲು ಚುನಾವಣ ಬಾಂಡ್‌ಗಳ ವಿವರಗಳನ್ನು ಭಾರತದ ಚುನಾವಣ ಆಯೋಗಕ್ಕೆ ಲಭ್ಯವಾಗಿಸಿದೆ.

ಪ್ರತಿ ಚುನಾವಣ ಬಾಂಡ್‌ಗಳ ಖರೀದಿ ದಿನಾಂಕ, ಖರೀದಿದಾರರ ಹೆಸರುಗಳು ಮತ್ತು ಖರೀದಿಸಿದ ಬಾಂಡ್‌ಗಳ ಮುಖಬೆಲೆ ಸೇರಿದಂತೆ ವಿವರಗಳನ್ನು ಒದಗಿಸಲಾಗಿದೆ ಎಂದು ಎಸ್ ಬಿಐ ಹೇಳಿದೆ.

ಚುನಾವಣ ಬಾಂಡ್‌ಗಳನ್ನು ನಗದೀಕರಿಸಿದ ದಿನಾಂಕ, ಕೊಡುಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಬಾಂಡ್‌ಗಳ ಮುಖಬೆಲೆಯಂತಹ ವಿವರಗಳನ್ನು ಬ್ಯಾಂಕ್ ಇಸಿಗೆ ಒದಗಿಸಿದೆ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರು ಸಲ್ಲಿಸಿರುವ ಅಫಿಡವಿಟ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next