Advertisement

ಗ್ಯಾರಂಟಿಗಳಿಂದ ದೇಶ ದಿವಾಳಿ ಎನ್ನುವವರಿಗೆ ಸಂಸತ್ತಿನಲ್ಲೇ ಉತ್ತರ: ಜಯಪ್ರಕಾಶ ಹೆಗ್ಡೆ

12:50 AM Apr 14, 2024 | Team Udayavani |

ಕಾರ್ಕಳ: ಜನರಿಂದ ಚುನಾಯಿಸಲ್ಪಟ್ಟು ಕೇವಲ ಸಂಸತ್‌ ಸದಸ್ಯನಾದರಷ್ಟೇ ಸಾಲದು. ಆತ ಓರ್ವ ಸಮರ್ಥ ಸಂಸದೀಯ ಪಟುವಾಗಿ ಸಂಸತ್ತಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಜನರ ಧ್ವನಿಯಾಗಬೇಕು. ಆಗಲಷ್ಟೆ ಸಂಸತ್‌ ಸದಸ್ಯತ್ವಕ್ಕೆ ಮೌಲ್ಯ ಬರುತ್ತದೆ ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

Advertisement

ನಂದಳಿಕೆ ಗ್ರಾ.ಪಂ. ವ್ಯಾಪ್ತಿಯ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಸಾಧಿಸುವ ಛಲ ಮತ್ತು ಸಾಧನೆಯ ಹಿನ್ನೆಲೆ ಉಳ್ಳವನಿಗೆ ಯಾರಧ್ದೋ ಹೆಸರು ಹೇಳಿ ಮತಯಾಚಿಸುವ ಅಗತ್ಯ ಬರುವುದಿಲ್ಲ ಎಂದು ಪರೋಕ್ಷ ತನ್ನ ಎದುರಾಳಿಯನ್ನು ಟೀಕಿಸಿದ ಅವರು ಜನಪ್ರತಿನಿಧಿಯಾಗಿದ್ದ ಅವಧಿಯಲ್ಲಿ ನಾನು ಮಾಡಿದ ಜನಪರ ಕೆಲಸಗಳ ತಳಹದಿಯ ಮೇಲೆ ಹೆಮ್ಮೆಯಿಂದ ನಿಮ್ಮ ಮುಂದೆ ಬಂದಿದ್ದೇನೆ. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎನ್ನುವವರಿಗೆ ಪಾರ್ಲಿಮೆಂಟಿನಲ್ಲಿಯೇ ಉತ್ತರಿಸಲಿ ದ್ದೇನೆ ಎಂದರು.

ಹಿಂದುಳಿದ ವರ್ಗಕ್ಕೂ ಉತ್ತಮ
ಭವಿಷ್ಯ ಕಲ್ಪಿಸಿದ ಕಾಂಗ್ರೆಸ್‌
ಕಾಂಗ್ರೆಸ್‌ ಜಿಲ್ಲಾ ವಕ್ತಾರ ಬಿಪಿನ್‌ ಚಂದ್ರಪಾಲ್‌ ನಕ್ರೆ ಪ್ರಸ್ತಾವನೆಗೆ„ದು ಮಾತನಾಡಿ, ಸಿಇಟಿ ಮುಖಾಂತರ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೂ ಉತ್ತಮ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಬಹಳಷ್ಟು ಜನರಿಗೆ ಸೇವೆ ನೀಡಿದೆ. ಜಾತಿಗಣತಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಂಡಿಸಿದ್ದ ವರದಿಯಲ್ಲಿನ ಎಲ್ಲ ಅಂಶಗಳು ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಆದ್ಯತೆಯಾಗಿ ಜಾರಿಗೆ ಬರಲಿದೆ. ಮೀಸಲಾತಿ ಪ್ರವರ್ಗ 1 ಎ ಮತ್ತು 2 ಎನಲ್ಲಿ 197 ಜಾತಿಯಿದೆ. ಈಗ ಕೇವಲ 25ರಿಂದ 30ರಷ್ಟು ಜಾತಿಗಳಿಗಷ್ಟೇ ಮೀಸಲಾತಿ ಇರುವುದು ಎಂದರು.

ಈ ಸಂದರ್ಭ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಮಹಿಳಾಧ್ಯಕ್ಷೆ ಅನಿತಾ ಡಿಸೋಜ, ಗ್ರಾಮ ಸಮಿತಿ ಅಧ್ಯಕ್ಷೆ ಜೋಯ್ಸ ಟೆಲ್ಲಿಸ್‌ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ ಸ್ವಾಗತಿಸಿ, ವಂದಿಸಿದರು.

ನಾರಿ ನ್ಯಾಯ: ಮಹಿಳೆಯರಿಗೆ
ವಾರ್ಷಿಕ 1ಲಕ್ಷ ರೂ. ಸಹಾಯ
ಕಾಂಗ್ರೆಸ್‌ ನಾಯಕ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮಾತನಾಡಿ, “ನಮ್ಮ ಬೂತ್‌ ನಮ್ಮ ಹೆಮ್ಮೆ’ ಎಂಬ ಮಹತ್ತರವಾದ ಉದ್ದೇಶ ಇಟ್ಟುಕೊಂಡು ಪ್ರತೀ ಬೂತ್‌ನಲ್ಲೂ ಕಾರ್ಯಕರ್ತರು ಶ್ರಮ ಪಡುವ ಮೂಲಕ ಕಾಂಗ್ರೆಸನ್ನು ವಿಜಯದತ್ತ ಕೊಂಡೊಯ್ಯಬೇಕು. ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಜನರ ಬದುಕು ಕಟ್ಟಲು ಪ್ರಯತ್ನ ಪಟ್ಟ ಪಕ್ಷ. ಈ ಪಕ್ಷದ ಯೋಜನೆಗಳ ವಿಚಾರಗಳನ್ನು ಗ್ರಾಮೀಣ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಆಗಬೇಕು. ರಾಜ್ಯದ ಐದು  ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿರುವ ಎಲ್ಲ ಗ್ಯಾರಂಟಿಗಳು ಕಾರ್ಯಗತಕ್ಕೆ ಬರಲಿದೆ. ಯುವ ನ್ಯಾಯದ ಮೂಲಕ 30 ಲಕ್ಷ ಉದ್ಯೋದ ಸೃಷ್ಟಿಯಾ ಗ ಲಿ ದೆ. ನಾರಿ ನ್ಯಾಯದ ಮೂಲಕ ಮಹಿಳೆಯರಿಗೆ ವಾರ್ಷಿಕ 1ಲಕ್ಷ ಸಹಾಯ ಸಿಗಲಿದೆ. ರೈತರು ಸಹಿತ ಸರ್ವ ಜನತೆಗೂ ನ್ಯಾಯ ಸಿಗಲಿದೆ ಎಂದರು.

Advertisement

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶಕ್ಕೆ ಕಾಂಗ್ರೆಸ್‌ ಆಡಳಿತದ ಅಗತ್ಯವಿದೆ. ಬಹುಶ ಬಂಡವಾಳಶಾಹಿಗಳ ಸಾಲ ಮನ್ನಾಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳಿ ಚುನಾವಣ ಬಾಂಡ್‌ ಮೂಲಕ ತಮ್ಮ ಪಕ್ಷವನ್ನು ಶ್ರೀಮಂತಗೊಳಸಿಕೊಂಡವರಿಗೆ ಸಂವಿಧಾನದ ಅಗತ್ಯವಿಲ್ಲ. ಪುನಃ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಹಿಂದುಳಿದ ವರ್ಗಕ್ಕೆ ನೀಡುವ ಎಲ್ಲ ಯೋಜನೆಗಳನ್ನು ರದ್ದತಿ ಮಾಡುತ್ತಾರೆ. ಜನರು ಜಾಗೃತರಾಗಿರಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next