Advertisement

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಔಷಧ ಪ್ಯಾಕೆಟ್‌ಗಳ ರಾಶಿ!

11:38 AM Apr 10, 2022 | Team Udayavani |

ನಂತೂರು: ಅವಧಿ ಮುಗಿದ ಅಥವಾ ನಿರುಪಯುಕ್ತ ಔಷಧವನ್ನು ವೈಜ್ಞಾನಿಕ ವಿಧಾನದ ಮುಖೇನ ವಿಲೇವಾರಿ ಮಾಡಬೇಕು ಎಂಬ ನಿಯಮ ಇದ್ದರೂ ನಗರದ ನಂತೂರಿನ ಕೆಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಔಷಧ ಪ್ಯಾಕೆಟ್‌ಗಳನ್ನು ಎಸೆಯಲಾಗಿದ್ದು, ಸಾರ್ವಜನಿಕರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕೆಪಿಟಿ ಜಂಕ್ಷನ್‌ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತೆಯೇ ಮರ-ಗಿಡ-ಪೊದೆಗಳಿಂದ ಕೂಡಿದ ಪ್ರದೇಶವಿದೆ. ಇಲ್ಲೇ ಪಕ್ಕದಲ್ಲಿ ಅನೇಕ ಔಷಧ ಪ್ಯಾಕೆಟ್‌ ರಾಶಿ ಹಾಕಲಾಗಿದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಪೌಷ್ಟಿಕಾಂಶ ಕೊರತೆಯನ್ನು ನಿವಾರಿಸಿಸುವ ಸುಮಾರು 100ಕ್ಕೂ ಮಿಕ್ಕಿ ಔಷಧ ಹೊಂದಿದ ಪೊಟ್ಟಣ ಹಾಗೂ ಎದೆನೋವು, ಅಧಿಕ ರಕ್ತದೊತ್ತಡ, ಸಹಿತ ಹೃದಯ ಸಂಬಂಧಿ ಕಾಯಿಲೆಗೆ ಬಳಕೆ ಮಾಡುವ ಔಷಧ ಇದಾಗಿದೆ.

ಮತ್ತೂಂದೆಡೆ ಹೆದ್ದಾರಿ ಪಕ್ಕದಲ್ಲಿ ಗಲೀಜು ಸ್ಥಳವಾಗಿ ಮಾರ್ಪಾಡಾಗಿ ಬ್ಲ್ಯಾಕ್‌ಸ್ಪಾಟ್‌ ನಿರ್ಮಾಣವಾಗುತ್ತಿದೆ. ಹೆದ್ದಾರಿ ಪಕ್ಕ ಕಸ-ಕಡ್ಡಿ, ಬಿಯರ್‌ ಬಾಟಲಿ ರಾಶಿ ಹಾಕಲಾಗಿದ್ದು, ಇದನ್ನು ನಿಯಂತ್ರಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿಲ್ಲ. ಕೂಳೂರು ಕಡೆಯಿಂದ ನಂತೂರುವರೆಗೆ ಹೆದ್ದಾರಿ ಯುದ್ದಕ್ಕೂ ಇಕ್ಕೆಲಗಳಲ್ಲಿ ಗಲೀಜು ಇದೆ.

ಇನ್ನು, ಅನೇಕ ಕಡೆಗಳಲ್ಲಿ ಬಿಯರ್‌ ಬಾಟಲಿ ಕಾಣುತ್ತಿದ್ದು, ಕುಡು ಕರ ಅಡ್ಡೆಯಾಗಿ ಬದಲಾಗುತ್ತಿದೆ. ಅಡ್ಯಾರು ಬಳಿ ಈ ಹಿಂದೆ ರಸ್ತೆ ಬದಿ ಕಸ ಎಸೆಯು ವವರನ್ನು ಗುರುತಿಸಿ, ಅಲ್ಲಿ ಗ್ರಾ.ಪಂ.ನಿಂದ ದಂಡ ಹಾಕಲಾಗಿತ್ತು. ಆ ರೀತಿಯ ಕಾರ್ಯಾಚರಣೆ ಮಂಗಳೂರಿನಲ್ಲಿ ನಡೆಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಸಿಸಿ ಕೆಮರಾ ಅಳವಡಿಸಿ ಸ್ಥಳೀಯರಾದ ಮನೋಜ್‌ ಅವರು ‘ಉದಯವಾಣಿ ಸುದಿನ’ ಕ್ಕೆ ಪ್ರತಿಕ್ರಿಯಿಸಿ, ‘ನಗರದಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಬದಿ ಕಸ ಎಸೆಯಲಾಗುತ್ತಿದೆ. ಅದಲ್ಲಿಯೂ ಇದೀಗ ಔಷಧಗಳನ್ನು ಕೂಡ ಎಸೆಯುತ್ತಿದ್ದು, ಇದನ್ನು ಗುರುತಿಸಲು ರಸ್ತೆ ಬದಿಗಳಲ್ಲಿ ಸಿಸಿ ಕೆಮರಾ ಇಲ್ಲ. ಸಂಬಂಧಪಟ್ಟ ಇಲಾಖೆ ಗಮನಿಸಿ, ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ.

Advertisement

ನಿಯಮ ಪ್ರಕಾರವೇ ವಿಲೇವಾರಿ ಮಾಡಬೇಕು

ದ.ಕ. ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಶಂಕರ್‌ ನಾೖಕ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಯಾವುದೇ ನಿರುಪಯುಕ್ತ ಅಥವಾ ಬಳಕೆಯಾಗದ ಔಷಧ ಪ್ಯಾಕೆಟ್‌ಗಳನ್ನು ರಸ್ತೆ ಬದಿ ಎಸೆಯುವಂತಿಲ್ಲ. ಔಷಧ ವಿಲೇವಾರಿಗೆ ಪ್ರತ್ಯೇಕ ಮಾದರಿ ಇದೆ. ಕೆಲವೊಂದು ಔಷಧ ಕಂಪೆನಿಗಳು ಅವಧಿ ಪೂರ್ಣಗೊಳ್ಳುವ ಸುಮಾರು 3 ತಿಂಗಳುಗಳೇ ಮೊದಲೇ ಔಷಧ ಹಿಂಪಡೆದುಕೊಳ್ಳುತ್ತವೆ. ಕೆಲವೊಂದು ಕಡೆಗಳಲ್ಲಿ ಬಯೋ ಮೆಡಿಕಲ್‌ ವಿಧಾನದ ಮುಖೇನ ವಿಲೇವಾರಿ ಮಾಡಲಾಗುತ್ತದೆ. ನಿಯಮದ ಪ್ರಕಾರ ಔಷಧ ವಿಲೇವಾರಿ ಮಾಡಬೇಕೇ ವಿನಾ ಈ ರೀತಿ ರಸ್ತೆ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಎಸೆಯುವಂತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next