Advertisement

ನಾಟಿ ಔಷಧ ಬಂದ್‌; ರೋಗಿಗಳ ಪರದಾಟ

09:50 PM Mar 26, 2021 | Team Udayavani |

ಆನಂದಪುರ: ಕೋವಿಡ್‌ ಹಿನ್ನೆಲೆಯಲ್ಲಿ ನರಸೀಪುರ ನಾಟಿ ಔಷಧ ನೀಡುವುದು ಬಂದ್‌ ಮಾಡುವಂತೆ ಗ್ರಾಮಾಡಳಿತದಿಂದ ನಾಟಿವೈದ್ಯರಿಗೆ ನೋಟಿಸ್‌ ನೀಡಲಾಗಿದೆ. ವಿಷಯತಿಳಿಯದೆ ಸ್ಥಳಕ್ಕಾಗಮಿಸಿದ ಸಾವಿರಾರು ಮಂದಿ ರೋಗಿಗಳು ಪರದಾಡಿದರು.

Advertisement

ಆನಂದಪುರ ಹಾಗೂ ಸುತ್ತಮುತ್ತಈಗಾಗಲೇ ನಾಲ್ಕೈದು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆಸಾರ್ವಜನಿಕರ ದೂರಿನ ಮೇರೆಗೆ ಗ್ರಾಮಾಡಳಿತ ಆನಂದಪುರ ಸಮೀಪದ ಶಿವಗಂಗೆಯಲ್ಲಿ ನೀಡುತ್ತಿದ್ದ ನಾಟಿ ಔಷಧಿಯನ್ನು ತಾತ್ಕಾಲಿಕವಾಗಿ ಬಂದ್‌ಮಾಡುವಂತೆ ಗ್ರಾಮಾಡಳಿತ ನೋಟಿಸುನೀಡಿದೆ. ಹೊರ ರಾಜ್ಯದಿಂದ ಬಹುತೇಕರೋಗಿಗಳು ಬರುವುದರಿಂದ ರೋಗಉಲ್ಬಣವಾಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಔಷಕೊಡುವುದನ್ನು ಬಂದ್‌ ಮಾಡುವಂತೆ ಗ್ರಾಮಾಡಳಿತ ನೋಟಿಸ್‌ನಲ್ಲಿ ತಿಳಿಸಿದೆ. ಅಲ್ಲದೆ ಆನಂದಪುರ ವ್ಯಾಪ್ತಿಯಲ್ಲಿನ ಎಲ್ಲಾ ಶುಂಠಿ ಕಣಗಳಿಗೆ ಮಹಾರಾಷ್ಟ್ರದಿಂದ ಶುಂಠಿ ಬರುತ್ತಿದ್ದು ಇಲ್ಲಿ ಬರುವಂತಹ ಚಾಲಕರು ಮತ್ತು ಕ್ಲೀನರ್‌ಗಳು ಯಾವುದೇ ಪರೀಕ್ಷೆಗೆಒಳಪಡದೆ ಬರುತ್ತಿದ್ದಾರೆ. ಅವರಿಂದ ಎಲ್ಲಾದರೂ ಸೋಂಕು ಕಂಡು ಬಂದರೆ ಈ ಭಾಗಕ್ಕೆ ರೋಗ ಹರಡುವ ಸಂಭವ ಇರುವುದರಿಂದ ಶುಂಠಿ ಕಣದವರು ಮಹಾರಾಷ್ಟ್ರದ ವಾಹನವನ್ನು ಶುಂಠಿ ಕಣಕ್ಕೆ ತರಬಾರದು ಎಂದು ಶುಂಠಿ ಕಣದ ಮಾಲೀಕರಿಗೂ ಕೂಡ ನೋಟಿಸ್‌ ನೀಡಿರುವುದಾಗಿ ಗ್ರಾಪಂ ಅಧ್ಯಕ್ಷೆ ನವೀನರವೀಂದ್ರ, ಉಪಾಧ್ಯಕ್ಷ ಮೋಹನ್‌ ಕುಮಾರ್‌ಹಾಗೂ ಪಂಚಾಯತ್‌ ಅಭಿವೃದ್ಧಿ ಅ ಧಿಕಾರಿಇಂದಿರಾ ಜ್ಯೋತಿ ಅವರು ಪತ್ರಿಕೆಗೆತಿಳಿಸಿದ್ದಾರೆ.

ರೋಗಿಗಳ ಪರದಾಟ: ಔಷಧಿಗಾಗಿ ಬುಧವಾರ ರಾತ್ರಿಯೇ ಅನೇಕಪ್ರದೇಶಗಳಿಂದ ಸಾವಿರಾರು ರೋಗಿಗಳು ಬಂದಿದ್ದು ಔಷಧ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಆದೇಶದಂತೆ ಔಷಧ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ನಾಟಿ ವೈದ್ಯರು ರೋಗಿಗಳಿಗೆ ತಿಳಿಸಿದರು. ತಕ್ಷಣ ರೋಗಿಗಳುಆನಂದಪುರ ಗ್ರಾಪಂಗೆ ಧಾವಿಸಿದರು. ಇಲ್ಲಿನಗ್ರಾಪಂ ಅಧಿಕಾರಿ ಹಾಗೂ ಪ್ರತಿನಿಧಿ ಗಳ ಮನವೊಲಿಸಲು ರೋಗಿಗಳು ಪ್ರಯತ್ನಪಟ್ಟರೂ ´ವಿಫಲವಾಯಿತು.

ನಾಟಿವೈದ್ಯರನ್ನು ಸಂಪರ್ಕಿಸಿ ಕೊರಿಯರ್‌ ಮೂಲಕ ಔಷಧಿ ಪಡೆದುಕೊಳ್ಳುವಂತೆ ರೋಗಿಗಳಿಗೆ ಪಂಚಾಯತ್‌ ಆಡಳಿತ ತಿಳಿಸಿತು. ಗ್ರಾಪಂಮುಂದೆ ಜಮಾಯಿಸಿದ್ದ ರೋಗಿಗಳನ್ನು ಪೊಲೀಸರ ಸಹಕಾರದಿಂದ ಹಿಂದಕ್ಕೆಕಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next