ಕೀವ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹರ್ಯಾಣದ ಚಾರ್ಖಿ ದಾದ್ರಿ ಊರಿನವರಾದ ನೇಹಾ, ತಾನು ಭಾರತಕ್ಕೆ ಬರುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ. ಅದಕ್ಕೆ ಕಾರಣ, ಆ ಮೂವರು ಪುಟ್ಟ ಮಕ್ಕಳು!
2 ವರ್ಷದ ಹಿಂದೆ ನೇಹಾ, ವೈದ್ಯಶಾಸ್ತ್ರ ಓದಲು ಕೀವ್‌ಗೆ ಹೋದಾಗ ಆಕೆಗೆ ಹಾಸ್ಟೆಲ್ ಸೌಲಭ್ಯ ಸಿಗಲಿಲ್ಲ. ಹಾಗಾಗಿ, ಸಿವಿಲ್ ಇಂಜಿನಿಯರ್ ಒಬ್ಬರ ಮನೆಯಲ್ಲಿ ಪುಟ್ಟ ಮನೆಯನ್ನು ಬಾಡಿಗೆ ಪಡೆದು ನೆಲೆಸಿದ್ದಾರೆ.
ಈಗ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆದ ಹಿನ್ನೆಲೆಯಲ್ಲಿ ಆಕೆಯ ಮನೆ ಮಾಲೀಕ, ದೇಶಸೇವೆಗಾಗಿ ಉಕ್ರೇನ್ ಸೇನೆ ಸೇರಿ, ಮನೆ ಬಿಟ್ಟು ಹೊರಟು ಹೋಗಿದ್ದಾರೆ.
ಇದನ್ನೂ ಓದಿ:ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರಿಗೆ ಧೈರ್ಯ ಹೇಳಿದ ಸಿದ್ದು ಸವದಿ
ಹಾಗಾಗಿ, ನೇಹಾ ಆ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ. ನನ್ನ ತಂದೆಯೂ ಸೇನಾಧಿಕಾರಿಯಾಗಿ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಅವರ ರಕ್ತವೇ ನನ್ನಲ್ಲಿಯೂ ಹರಿಯುತ್ತಿದೆ. ನಾನು, ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಇರುವವರೆಗೂ ನನ್ನ ಮನೆ ಮಾಲೀಕರ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.