Advertisement

ಔಷಧ ಅಂಗಡಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

06:15 AM Sep 29, 2018 | |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಇ ಫಾರ್ಮಸಿ ವ್ಯವಸ್ಥೆಯನ್ನು ವಿರೋಧಿಸಿ ಅಖೀಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ದೇಶಾದ್ಯಂತ ಕರೆ ಕೊಟ್ಟಿದ್ದ ಔಷಧ ಅಂಗಡಿಗಳ ಬಂದ್‌ಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಗುರುವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದ್ದ ಬಂದ್‌, ಶುಕ್ರವಾರ ಮಧ್ಯರಾತ್ರಿವರೆಗೂ ಜಾರಿಯಲ್ಲಿತ್ತಾದರೂ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ನಗರದ ಬಹುತೇಕ ಮಳಿಗೆಗಳು ತೆರೆದಿದ್ದವು. ಇನ್ನು ದೇಶಾದ್ಯಂತ 8.5 ಲಕ್ಷ, ರಾಜ್ಯದಲ್ಲಿ 24 ಸಾವಿರ ಹಾಗೂ ಬೆಂಗಳೂರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಔಷಧಿ ಮಳಿಗೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಬಂದ್‌ ಹಿನ್ನೆಲೆ ರಾಜ್ಯದಲ್ಲಿ 100 ಕೋಟಿಯಷ್ಟು ಮೌಲ್ಯದ ಔಷಧಿ ವ್ಯಾಪಾರ ಖೋತಾ ಆಗಿದೆ ಎಂದು ಕರ್ನಾಟಕ ಕೆಮಿಸ್ಟ್‌ ಆ್ಯಂಡ್‌ ಡ್ರಗಿಸ್ಟ್‌ ಅಸೋಸಿಯೇಷನ್‌ ತಿಳಿಸಿದೆ.

ಬಂದ್‌ನಿಂದ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನಗರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ಗಳ ಬಳಿಯ ಔಷಧಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ, ಜಿಲ್ಲಾ, ತಾಲೂಕು, ಸಾರ್ವಜನಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ಪ್ರಮಾಣದ ಜೀವರಕ್ಷಕ ಔಷಧ ದಾಸ್ತಾನು
ಮಾಡಿಕೊಳ್ಳಲಾಗಿತ್ತು. ಹೀಗಾಗಿ, ರೋಗಿಗಳಿಗೆ ಔಷಧಿ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗಲಿ, ಔಷಧ ದೊರೆಯದೆ ಪರದಾಡಬೇಕಾದ ಪರಿಸ್ಥಿತಿಯಾಗಲಿ ನಿರ್ಮಾಣವಾಗಿಲ್ಲ. ಮನೆ ಹತ್ತಿರದ ಔಷಧಿ ಮಳಿಗೆಗಳು ಬಂದ್‌ ಆಗಿದ್ದರಿಂದ ಜನರು ಅಗತ್ಯ ಔಷಧಿಗಳಿಗಾಗಿ ಆಸ್ಪತ್ರೆಗಳ ಬಳಿ ಇರುವ ಔಷಧಿ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು, ಔಷಧಿ ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next