Advertisement

ವೈದ್ಯಕೀಯ ಸೇವೆ ಮಹತ್ವದ್ದು

06:36 AM Jul 02, 2020 | Lakshmi GovindaRaj |

ಚನ್ನಪಟ್ಟಣ: ವೈದ್ಯಕೀಯ ಸೇವೆ ಎಲ್ಲ ಸೇವೆಗಳಿಗಿಂತ ಅನನ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ತಿಳಿಸಿದರು. ತಾಲೂಕಿನ ಬೇವೂರು ಶ್ರೀ ಸಿದ್ಧರಾಮೇಶ್ವರ ಕಾಲೇಜಿನ ಆವರಣದಲ್ಲಿ  ವೈದ್ಯರ ದಿನದ ಪ್ರಯುಕ್ತ ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶ್ವೇತಾ ಅವರನ್ನು ಸನ್ಮಾನಿಸಿ ಮಾತನಾಡಿದರು.

Advertisement

ಅನಾದಿ ಕಾಲದಿಂದಲೂ ವೈದ್ಯಕೀಯ ಸೇವೆಯಿದ್ದು, ಕಾಲ ಬದಲಾದಂತೆ ವೈದ್ಯಕೀಯ ಸೇವೆಯಲ್ಲಿ ಮಹತ್ತರ ಬದ ಲಾವಣೆಗಳಾಗಿವೆ. ಸದ್ಯ ಅಧುನಿಕ ರೀತಿ ಯಲ್ಲಿ ವೈದ್ಯಕೀಯ ಸೌಲಭ್ಯಗಳು ದೊರೆ ಯುತ್ತಿರುವುದರಿಂದ ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತನಾಗುತ್ತಿದ್ದಾನೆ. ಕೋವಿಡ್‌ 19 ಹಿನ್ನೆಲೆಯಲ್ಲಿ ನಮ್ಮ ತಾಲೂ ಕಿನ ವೈದ್ಯರು  ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದ್ದು, ಗ್ರಾಮದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ವೈದ್ಯೆ ಶ್ವೇತಾ ಸೇವೆ ಅನನ್ಯ ಎಂದರು.

ಸಿದ್ಧರಾಮೇಶ್ವರ ವಿದ್ಯಾ ಸಂಸ್ಥೆ ನಿರ್ದೆಶಕ ರೇವಣ್ಣ ಸಿದ್ದಪ್ಪ ಮಾತನಾಡಿ, ಬೇವೂರು ಗ್ರಾಮದ  ಆಸ್ಪತ್ರೆಯಲ್ಲಿ ಹಿಂದೆ ಬಾಲಕೃಷ್ಣ ಮತ್ತು ಮಾರುತಿ ಎಂಬ ವೈದ್ಯರು ಈ ಭಾಗದ ಜನರಿಗೆ ತಮ್ಮದೇ ರೀತಿಯಲ್ಲಿ ಸೇವೆ ನೀಡಿದ್ದಾರೆ. ಶ್ವೇತಾ ಕೂಡ ಅವರಂತೆಯೇ ಒಳ್ಳೆಯ ಹೆಸರು ಪಡೆಯಲಿ ಎಂದು ಆಶಿಸಿದರು. ಕಾಳೇಗೌಡ, ಗ್ರಾಪಂ ಸದಸ್ಯ  ಮಧು ಸೂದನ್‌, ಭೈರನಾಯ್ಕನಹಳ್ಳಿ ಗಂಗಾ ಧರ್‌, ಹರ್ಷಿತ್‌ಗೌಡ, ಶಿವಕುಮಾರ್‌, ಟೈಲರ್‌ ರಾಜು, ಪುಟ್ಟಲಿಂಗಯ್ಯ, ರೇಣುಕಾ, ಗೌಡಗೆರೆ ಗಂಗಾಧರ್‌, ಮಠದ ರಾಜು, ಪುಷ್ಪಲತಾ, ಪ್ರಮೀಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next