ಈ ಕುರಿತು ವಂಚನೆಗೊಳಗಾದ ನವ್ಯಾ ಎಂಬುವವರು ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆನಂದ್‌ರಾವ್,
ಮಧುಶಾ, ವಿನುತಾ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ಮೈಸೂರು ಮೂಲದ ವಿನುತಾ ಅವರ ಮಗನಿಗೆ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕಿಂಗ್ ಬರದಿದ್ದರಿಂದ ಸರ್ಕಾರಿ ಸೀಟು ಸಿಕ್ಕಿರಲಿಲ್ಲ. ಈ ಮಧ್ಯೆ ವಿನುತಾ ಅವರ ಮೊಬೈಲ್‌ಗೆ ಸಂದೇಶ ಬಂದಿದ್ದು //www.netcounselling.com/ ಮೆಡಿಕಲ್ ಸೀಟ್ಗೆ ಸಂಬಂಧಿಸಿದಂತೆ ಸಂಪರ್ಕಿಸಲು ಕೋರಲಾಗಿತ್ತು.
ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೊದಲು ನೋಂದಣಿ ಶುಲ್ಕವಾಗಿ 50 ಸಾವಿರ ರೂ. ಕಟ್ಟಿಸಿಕೊಂಡಿದ್ದರು. ಬಳಿಕ ಐದು ವರ್ಷಗಳ ಮೆಡಿಕಲ್ ಕೋರ್ಸ್‌ಗೆ 50 ಲಕ್ಷ ರೂ. ಎಂದು ತಿಳಿಸಿದ್ದರು.
Related Articles
Advertisement
ಇದಾದ ಬಳಿಕ ಜ.4ಕ್ಕೆ ಪುನಃ ನವ್ಯಾ ಅವರು ಬಂದಾಗ 10 ಲಕ್ಷ ರೂ. ನಗದನ್ನು ಆರೋಪಿಗಳು ಪಡೆದುಕೊಂಡು ಜ.15ರಂದು ಖಾಸಗಿ ಕಾಲೇಜಿನ ಬಳಿ ಮಗನ ದಾಖಲಾತಿ ಮಾಡಲು ಬರುವಂತೆ ಸೂಚಿಸಿದ್ದರು. ಹೀಗಾಗಿ, ನವ್ಯಾ ಅವರು ಜ.15ರಂದು ಕಾಲೇಜಿನ ಬಳಿ ವಿಚಾರಿಸಿದಾಗ ಯಾವುದೇ ಸೀಟ್ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಮಧುಶಾ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ನವ್ಯಾ ಅವರು ರೆಸಿಡೆನ್ಸಿ ರಸ್ತೆಯಲ್ಲಿರುವ ನೆಟ್‌ಕೌನ್ಸಿಲಿಂಗ್ ಕಚೇರಿ ಬಳಿ ಬಂದಾಗ ಕಚೇರಿಯೂ ಖಾಲಿಯಾಗಿರುವುದು ಗೊತ್ತಾಗಿದೆ. ಬಳಿಕ ತಾವು ಮೋಸಹೋಗಿದ್ದೇವೆ ಎಂದು ಅರಿತು ದೂರು ನೀಡಿದ್ದಾರೆ ಎಂದುಪೊಲೀಸರು ತಿಳಿಸಿದರು. 4 ಲಕ್ಷ ರೂ. ಪಡೆದು ವಂಚನೆ!: ಇನ್ನೊಂದು ಪ್ರಕರಣದಲ್ಲಿ ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 4 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ಪೂರ್ಣಿಮಾ ಎಂಬುವವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಹೈಫೈ ಎಂಬೆಸ್ಟಿಯಾ ಕಂಪನಿ ಹೆಸರಿನಲ್ಲಿ ಕರೆ ಮಾಡಿದ್ದ ಪ್ರತೀಕ್ಷಾ, ಭರತ್, ಕಿಶೋರ್ ಎಂಬುವವರು ಮಗಳಿಗೆ ಸೀಟು ಕೊಡಿಸುತ್ತೇವೆ ಎಂದು ನಂಬಿಸಿ ಅಡ್ವಾನ್ಸ್ ರೂಪದಲ್ಲಿ 4ಲಕ್ಷ ರೂ. ಪಡೆದಿದ್ದರು. ಬಳಿಕ ಜ.18ರಿಂದ ಕರೆ ಸ್ವೀಕರಿಸದೇ ವಂಚಿಸಿ
ದ್ದಾರೆ ಎಂದು ಪೂರ್ಣಿಮಾ ದೂರಿದ್ದಾರೆ. ಎರಡೂ ಪ್ರಕರಣಗಳ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.