Advertisement

Medical negligence: ಮಗು ಸಾವು; ಟೈರ್ ಗೆ ಬೆಂಕಿ ಹಚ್ಚಿ ವೈದ್ಯೆ ವಿರುದ್ಧ ಪ್ರತಿಭಟನೆ

03:09 PM Aug 08, 2023 | keerthan |

ಇಂಡಿ (ವಿಜಯಪುರ): ಜ್ವರದ ಕಾರಣಕ್ಕೆ ಇಂಡಿ ಪಟ್ಟಣದ ಖಾಸಗಿ ಅಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿಗೆ ಚಿಕಿತ್ಸೆ ನೀಡಿದ್ದು, ಗರ್ಭದಲ್ಲಿ ಮಗು ಮೃತಪಟ್ಟ ಘಟನೆ ನಡೆದಿದೆ. ವಿಷಯ ತಿಳಿದು ಉದ್ರಿಕ್ತರಾದ ಬಂಧುಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

22 ವರ್ಷದ ಕವಿತಾ ಧರ್ಮರಾಜ ದಶವಂತ್ ಎಂಬ ಗರ್ಭಿಣಿ ಜ್ವರದ ಕಾರಣಕ್ಕೆ ಸೋಮವಾರ ಬೆಳಿಗ್ಗೆ ಇಂಡಿ ಪಟ್ಟಣದಲ್ಲಿರುವ ಗಜಾಕೋಶ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ವೈದ್ಯರ ಚಿಕಿತ್ಸೆ ಬಳಿಕ ಮಂಗಳವಾರ ನಸುಕಿನಲ್ಲಿ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾಗಿದೆ.

ವಿಷಯ ತಿಳಿದ ಕುಟುಂಬದ ಸದಸ್ಯರು ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ನೀಡಿದ ವೈದ್ಯ ಡಾ.ಭಾರತಿ ಗಜಾಕೋಶ ಇವರಿಗೆ ಕತೆ ಮಾಡಿ, ತುರ್ತಾಗಿ ರೊಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ವೈದ್ಯೆ ಭಾರತಿ ತುರ್ತಾಗಿ ಆಸ್ಪತ್ರೆಗೆ ಆಗಮಿಸಿ ರೋಗಿ ಕವಿತಾ ಇವರ ಆರೋಗ್ಯ ವಿಚಾರಿಸದೇ, ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಬೇಜವಾಬ್ದಾರಿ ಉತ್ತರ ನೀಡಿ, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ.

ವೈದ್ಯೆ ಭಾರತಿ ಅವರ ಪ್ರತಿಕ್ರಿಯೆಯಿಂದ ಕಂಗಾಲದ ರೋಗಿಯ ಮನೆಯವರು, ಕೂಡಲೇ ವಿಜಯಪುರ ನಗರದ ಡಾ. ಸಾಸನೂರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಕವಿತಾಳನ್ನು ಪರೀಕ್ಷಿಸಿದ ವೈದ್ಯರು, ರೋಗಿಯ ಗಂಭೀರ ಸ್ಥಿತಿ ಅರಿತು ಕೂಡಲೇ ಗರ್ಭದಲ್ಲಿರುವ ಮಗುವನ್ನು ಶಸ್ತ್ರಚಿಕಿತ್ಸೆ ಮಾಡಿ, ಮಗುವನ್ನು ಹೊರ ತೆಗೆದಿದ್ದಾರೆ. ಆದರೆ ತಾಯಿಯ ಗರ್ಭದಲ್ಲೇ ಒಂದು ಗಂಟೆ ಹಿಂದೆಯೇ ಮಗು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

Advertisement

ಇದರಿಂದ ರೊಚ್ಚಿಗೆದ್ದ ಕವಿತಾಳ ಸಂಬಂಧಿ ಅಮರೇಶ ದಶವಂತ ನೇತೃತ್ವದಲ್ಲಿ ಸುಮಾರು 150 ಕ್ಕೂ ಹೆಚ್ಚು ಜನರು ಇಂಡಿ ಪಟ್ಟಣದ ಡಾ.ಗಜಾಕೋಶ ಆಸ್ಪತ್ರೆಗೆ ತೆರಳಿ ವೈದ್ಯೆ ಭಾರತಿ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರೂ ಉದ್ರಿಕ್ತರು ಸಮಾಧಾಗೊಂಡಿಲ್ಲ.

ಆಸ್ಪತ್ರೆಯ ಹೊರಭಾಗದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ವೈದ್ಯೆಯ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ಹಂತದಲ್ಲಿ ಸ್ಥಳಕಯಧಾವಿಸಿದ ಇಂಡಿ ತಹಶಿಲ್ದಾರ ನಾಗಯ್ಯ ಹಿರೇಮಠ, ಗ್ರಾಮೀಣ ಪಿಎಸ್ಐ ಸೋಮೇಶ ಗೆಜ್ಜೆ ಪ್ರತಿಭಟನಾಕಾರರ ಮನವೊಲಿಸಲು ನಡೆಸಿದ ಪ್ರಯತ್ಗಲು ವಿಫಲವಾಗಿವೆ. ಹೀಗಾಗಿ ಆಸ್ಪತ್ರೆ ಎದುರು ಪ್ರತಿಭಟನೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next