Advertisement

Pain Killer injection: ವೈದ್ಯಕೀಯ ನಿರ್ಲಕ್ಷ್ಯಕ್ಕೆ ಹಸುಳೆ ಬಲಿ

12:12 PM Jan 20, 2018 | Team Udayavani |

ಹೊಸದಿಲ್ಲಿ : ತುಟಿಗಾದ ಗಾಯಕ್ಕೆ ಹೊಲಿಗೆ ಹಾಕಿದಾಗಿನ ನೋವನ್ನು ಶಮನಗೊಳಿಸಲು ಚುಚ್ಚು ಮದ್ದು ನೀಡಲ್ಪಟ್ಟ ನಾಲ್ಕು ತಿಂಗಳ ಮಗು ವೈದ್ಯಕೀಯ ನಿರ್ಲಕ್ಷ್ಯದ ಪರಿಣಾಮವಾಗಿ ಅಸು ನೀಗಿದ ಘಟನೆ ನಗರದ ಆಸ್ಪತ್ರೆಯೊಂದರಲ್ಲಿ ನಡೆದಿದೆ. 

Advertisement

ಕುಟುಂಬದವರು ಹೇಳಿರುವ ಪ್ರಕಾರ ಮಗವನ್ನು ಕಳೆದ ಜನವರಿ 17ರಂದು ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಜೈಪುರ ಗೋಲ್ಡನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ತುಟಿಗಾದ ಉಂಟಾದ ಗಾಯಕ್ಕೆ ಆಸ್ಪತ್ರೆಯಲ್ಲಿ ಹೊಲಿಗೆ ಹಾಕಲಾಗಿತ್ತು. 

ಮಗುವಿನ ತುಟಿಗೆ ಹೊಲಿಗೆ ಹಾಕಲು ಸಣ್ಣದೊಂದು ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿದೆ ಎಂದು ವೈದ್ಯರು ಹೇಳಿದಾಗ ಮನೆಯವರು ಅದಕ್ಕೆ ಒಪ್ಪಿದ್ದರು. ಶಸ್ತ್ರ ಚಿಕಿತ್ಸೆ ನಡೆದ ಅರ್ಧ ತಾಸಿನ ವರೆಗೂ ಮಗು ಜೋರಾಗಿ ಅಳುತ್ತಲೇ ಇತ್ತು. ಇದನ್ನು ವೈದ್ಯರ ಗಮನಕ್ಕೆ ತರಲಾಯಿತು. ಆಗ ವೈದ್ಯರು ಮಗುವನ್ನು ಒಯ್ದು ಅದಕ್ಕೆ ನೋವು ನಿವಾರಕ ಚುಚ್ಚು ಮದ್ದು ನೀಡಿದರು. ಒಡನೆಯೇ ಮಗು ಸಂಪೂರ್ಣವಾಗಿ ಸ್ತಬ್ಧವಾಯಿತು. ಅದರ ಚಲನವಲನಗಳು ನಿಂತು ಹೋದವು ಎಂದು ಮಗುವಿನ ಚಿಕ್ಕಪ್ಪ ಮನೀಶ್‌ ಕುಮಾರ್‌ ಹೇಳಿದರು. 

ಆ ಸ್ಥಿತಿಯಲ್ಲಿ ಮಗುವನ್ನು ವೈದ್ಯರು ಐಸಿಯುಗೆ ಒಯ್ದರು. ಆದರೆ ಮಗ ಔಷಧಿಯ ಅಡ್ಡ ಪರಿಣಾಮದಿಂದ ಮೃತಪಟ್ಟಿತೆಂದು ಮೆಡಿಕಲ್‌ ಸುಪರಿಂಟೆಂಡೆಂಟ್‌ ಅನಂತರ ಮನೆಯವರಿಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next