Advertisement
“ನನ್ನ ಪ್ರಾಣ ಹೋದರೂ ಕನಕಪುರಕ್ಕೆ ಮಂಜೂರಾಗಿ ರುವ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಬೇರೆಗೆ ಹೋಗಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಧ್ಯೆ “ವೈದ್ಯಕೀಯ ಕಾಲೇಜು-ಆಸ್ಪತ್ರೆ ಮಂಜೂ ರಾಗುವುದು ಪ್ರಾಣ ಉಳಿಸಲು. ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಸಿಗದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳು ತ್ತೇನೆ ಎಂದು ಡಾ. ಕೆ.ಸುಧಾಕರ್ ಹೇಳಿದರು.
Related Articles
Advertisement
ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಅನರ್ಹತೆಗೊಂಡಿರುವ ಶಾಸಕ ಸುಧಾಕರ್ ಸ್ಥಳಾಂತರ ಮಾಡಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಯಾರು ಸುಧಾಕರ್? ಅವರ ಕ್ಷೇತ್ರಕ್ಕೆ ಬೇಕಾಗಿದ್ದು ಮನವಿ ಮಾಡಿ ಪಡೆದುಕೊಳ್ಳಲಿ. ಅದು ಅವರ ಹಕ್ಕು, ಆದರೆ, ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದು ಪಡೆಯಲು ನಾನು ಬಿಡುವುದಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಕಬ್ಬಾಳಮ್ಮ ದೇವಾಲಯಕ್ಕೆ ಬಂದು ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಮಾತು ಕೊಟ್ಟಿದ್ದರು, ಕಾರಣಾಂತರಗಳಿಂದ ಮಂಜೂರು ಮಾಡಲು ಆಗಿರಲಿಲ್ಲ, ಸಮ್ಮಿಶ್ರ ಸರ್ಕಾರ ದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಲಾಯಿತು. ಇದನ್ನು ಬಿಡಲು ಆಗುತ್ತಾ? ಜನರ ಜತೆ ಮಾತನಾಡಿ, ಸಿಎಲ್‌ಪಿ ನಾಯಕರು ಸೇರಿ ಪಕ್ಷದ ನಾಯಕರಿಗೆ ಮಾಹಿತಿ ನೀಡಿ ವೈಯಕ್ತಿಕವಾಗಿಯೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಲು ಡಿ.ಕೆ.ಶಿವಕುಮಾರ್ ಯಾರು? ಅವರದು ಹೊಡಿ, ಬಡಿ, ಕಡಿ ಸಂಸ್ಕೃತಿ. ಅವರ ಮಾತು ಅವರ ಸಂಸ್ಕೃತಿ ತಿಳಿಸುತ್ತದೆ. ನನಗೆ ಉತ್ತಮ ಸಂಸ್ಕಾರ, ಸಾಮಾಜಿಕ ಕಾಳಜಿಯಿದೆ. ನಾನು ನನ್ನ ಕ್ಷೇತ್ರದ ವೈದ್ಯಕೀಯ ಕಾಲೇಜು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. -ಡಾ.ಕೆ.ಸುಧಾಕರ್, ಅನರ್ಹ ಶಾಸಕ