Advertisement

ರಫೇಲ್‌ ಕಿಕ್‌ಬ್ಯಾಕ್‌ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ

07:18 PM Nov 08, 2021 | Team Udayavani |

ನವದೆಹಲಿ: ರಫೇಲ್‌ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.”ಭಾರತಕ್ಕೆ 36 ರಫೇಲ್‌ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಅನುವಾಗುವಂತೆ ಫ್ರಾನ್ಸ್‌ನ ವಿಮಾನ ತಯಾರಕ ಕಂಪನಿ ಡಸಾಲ್ಟ್ ಕನಿಷ್ಠ 7.5 ದಶಲಕ್ಷ ಯೂರೋ(650 ದಶಲಕ್ಷ ರೂ.)ಗಳನ್ನು ಮಧ್ಯವರ್ತಿಗೆ ಲಂಚ ನೀಡಿತ್ತು. ಇದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಈ ಬಗ್ಗೆ ತನಿಖೆ ನಡೆಸುವಲ್ಲಿ ಭಾರತದ ತನಿಖಾ ಸಂಸ್ಥೆ ಸಿಬಿಐ ವಿಫ‌ಲವಾಗಿದೆ’ ಎಂದು ಫ್ರಾನ್ಸ್‌ನ  ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್‌ ವರದಿ ಮಾಡಿದೆ.

Advertisement

59 ಸಾವಿರ ಕೋಟಿ ರೂ.ಗಳ ರಫೇಲ್‌ ಒಪ್ಪಂದದಲ್ಲಿ ಆಗಿದೆಯೆನ್ನಲಾದ ಭ್ರಷ್ಟಾಚಾರದ ಆರೋಪವನ್ನು ಈ ಆನ್‌ಲೈನ್‌ ಜರ್ನಲ್‌ ತನಿಖೆ ನಡೆಸುತ್ತಿದೆ.

ಮಧ್ಯವರ್ತಿ ಸುಶೇನ್‌ ಗುಪ್ತಾಗೆ ರಹಸ್ಯವಾಗಿ ಕಮಿಷನ್‌ ಪಾವತಿಸಲು ನಕಲಿ ಇನ್‌ವಾಯ್ಸಗಳನ್ನೂ ಡಸಾಲ್ಟ್ ಸಿದ್ಧಪಡಿಸಿತ್ತು. ಈ ಇನ್‌ವಾಯ್ಸಗಳಿದ್ದರೂ ಭಾರತದ ತನಿಖಾ ಸಂಸ್ಥೆಯು ಈ ಕುರಿತು ತನಿಖೆ ನಡೆಸದೇ ಇರಲು ನಿರ್ಧರಿಸಿದೆ. ರಫೇಲ್‌ ಮಾರಾಟಕ್ಕಾಗಿ ಸುಶೇನ್‌ ಗುಪ್ತಾಗೆ ಡಸಾಲ್ಟ್ ಕಂಪನಿ ಲಂಚ ಪಾವತಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು 2018ರ ಅಕ್ಟೋಬರ್‌ನಲ್ಲೇ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದರೂ, ತನಿಖೆ ಮಾತ್ರ ಆರಂಭವಾಗಿಲ್ಲ ಎಂದೂ ವರದಿಯಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next