Advertisement
ಅಖೀಲೇಶ್ ಅವರ ಕೊಲೆಯ ಹಿಂದೆ ಅವರ ವೃತ್ತಿಯಿತ್ತೋ ಇಲ್ಲವೋ ಎಂಬುದು ಇನ್ನೂ ಪರಿಹಾರವಾಗಿಲ್ಲ. ಆದರೆ, ರಾಜ್‌ದೇವ್ ಅವರ ಕೊಲೆಗೆ ಕಾರಣವಾಗಿದ್ದು ಅವರು ಮಾಡುತ್ತಿದ್ದ ವರದಿಗಳು. ಅವರು 2014ರಲ್ಲಿ ಕೊಲೆಗೀಡಾದ ಶ್ರೀಕಾಂತ್ ಭಾರ್ತಿ ಪ್ರಕರಣದ ಕುರಿತಂತೆ ಹಲವು ವರದಿಗಳನ್ನು ಮಾಡಿದ್ದರು.
Related Articles
Advertisement
ಸೆಂಟರ್ ಫಾರ್ ಪೊ›ಟೆಕ್ಷನ್ ಆಫ್ ಜರ್ನಲಿಸ್ಟ್ ಮತ್ತು ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್‌ನಂಥ ಸಂಸ್ಥೆಗಳು ಭಾರತವನ್ನು ಯುದ್ಧ ಪೀಡಿತ ಪ್ರದೇಶಗಳಿಗಿಂತ ಅಪಾಯಕಾರಿಯೆಂದು ಏಕೆ ಪರಿಗಣಿಸುತ್ತಿವೆ? ಇದಕ್ಕೆ ಬಹುಮುಖ್ಯ ಕಾರಣ ಸೈದ್ಧಾಂತಿಕ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳು ಹಿಂಸಾತ್ಮಕ ಸ್ವರೂಪ ಪಡೆಯುತ್ತಿರುವುದು. ಭಿನ್ನ ನಿಲುವುಗಳನ್ನು ಇಟ್ಟುಕೊಂಡವರಿಗೆ ದೇಶದಲ್ಲಿ ಬದುಕಲು ಅವಕಾಶವೇ ಇಲ್ಲ ಎಂಬ ಬಗೆಯಲ್ಲಿ ವಾದಿಸುವ ಸಂಘಟನೆಗಳು ಹೆಚ್ಚು ಬಲಪಡೆದುಕೊಳ್ಳುತ್ತಿರುವುದು!
ಅಮೆರಿಕದಂತೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಕಾನೂನುಗಳಿಲ್ಲ. ಪತ್ರಕರ್ತರು ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪರಿಧಿಯÇÉೇ ಕಾರ್ಯನಿರ್ವಹಿಸುತ್ತಾರೆ. ಅಂದರೆ ಸಾಮಾನ್ಯನಿಗಿಂತ ಹೆಚ್ಚಿನ ಯಾವ ರೀತಿಯ ರಕ್ಷಣೆಯೂ ಪತ್ರಕರ್ತನಿಗಿಲ್ಲ ಎಂದರ್ಥ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಅನೇಕ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಕೊಲೆ ಈ ಮಾರ್ಗಗಳಲ್ಲಿ ಒಂದು ಮಾತ್ರ.
ಭಾರೀ ಮೊತ್ತದ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆಗಳನ್ನು ಹೂಡುವುದು. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಪತ್ರಕರ್ತರನ್ನು ಸಿಲುಕಿಸುವುದು ಇತ್ಯಾದಿಗಳು ಭಾರತದಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿದೆ. ಹತ್ಯೆ ಕೂಡಾ ಇದೇ ಪಟ್ಟಿಯಲ್ಲಿರುವ ಮತ್ತೂಂದು ತಂತ್ರ. ಬೇರೆಲ್ಲ ತಂತ್ರಗಳು ವಿಫಲವಾದಾಗ ಪತ್ರಕರ್ತರನ್ನು ಹತ್ಯೆ ಮಾಡುವುದು ನಡೆಯುತ್ತದೆ. ಇದು ಕೇವಲ ಒಬ್ಬನ ಅಥವಾ ಒಬ್ಬಳ ಬಾಯಿ ಮುಚ್ಚಿಸುವ ತಂತ್ರವಷ್ಟೇ ಅಲ್ಲ. ಇದು ಇಡೀ ಪತ್ರಕರ್ತ ಸಮುದಾಯ ಒಂದು ಹೆದರಿಕೆಯಲ್ಲಿ ಬದುಕುವಂತೆ ಮಾಡುವ ತಂತ್ರ.
– ಈಶಾ