Advertisement

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

08:53 PM May 26, 2022 | Team Udayavani |

ಮುಂಬಯಿ: ಸೈಬರ್‌ ವಂಚನೆಗೆ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು 50 ಸಾವಿರ ರೂ. ಕಳೆದುಗೊಂಡ ಘಟನೆ ಮುಂಬಯಿಯಲ್ಲಿ ಗುರುವಾರ ನಡೆದಿದೆ.

Advertisement

ವಂಚಕ ಮಹಿಳೆಗೆ ಅವರ ಹಿರಿಯ ಸಹದ್ಯೋಗಿಯ ನಕಲಿ ಇಮೇಲ್‌ ಐಡಿ ಬಳಸಿ ತನ್ನ ಬ್ಯಾಂಕ್‌ ಖಾತೆಗೆ ಹಣ ತತ್‌ಕ್ಷಣ 50 ಸಾವಿರ ರೂ. ವರ್ಗಾಯಿಸುವಂತೆ ತಿಳಿಸಿದ್ದು, ಈ ಕುರಿತು ವಿಚಾರಿಸದೆ ಮಹಿಳೆ ಕ್ರಮವಾಗಿ 25,000 ಹಾಗೂ 24,700 ರೂ. ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next