Advertisement

ಟ್ರಂಪ್‌ಗೆ ಮಾಧ್ಯಮ ಬಹಿಷ್ಕಾರ

12:24 AM Nov 07, 2020 | mahesh |

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಯ “ಸೂಪರ್‌ಓವರ್‌’ ನಲ್ಲಿರುವ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಈಗ ಸುದ್ದಿ ಮಾಧ್ಯಮಗಳು ಸಮರ ಸಾರಿವೆ. ಗುರುವಾರ ಶ್ವೇತಭವನದಲ್ಲಿ ಟ್ರಂಪ್‌ ಭಾಷಣದ ವೇಳೆ “ನನ್ನನ್ನು ಸೋಲಿಸಲು ಬಿಗ್‌ ಮೀಡಿಯಾ, ಬಿಗ್‌ ಮನಿ, ಬಿಗ್‌ ಟೆಕ್‌ ಒಗ್ಗೂಡಿವೆ’ ಎಂದು ಆರೋಪಿಸುತ್ತಿದ್ದಂತೆ, ಮಾಧ್ಯಮಗಳು ಭಾಷಣ ಪ್ರಸಾರವನ್ನು ಅರ್ಧಕ್ಕೇ ಮೊಟಕುಗೊಳಿಸಿವೆ.

Advertisement

ಅಧ್ಯಕ್ಷಾವಧಿ ಉದ್ದಕ್ಕೂ ಮಾಧ್ಯಮಗಳಿಗೆ ಕಿಮ್ಮತ್ತು ನೀಡದ ಟ್ರಂಪ್‌ ಶ್ವೇತಭವನದಲ್ಲಿ 17 ನಿಮಿಷದ “ಹತಾಶಪೂರಿತ’ ಭಾಷಣ ದಲ್ಲೂ ಆರೋಪ ಮುಂದುವರಿಸಿದ್ದರು. “ಚುನಾವಣೆ ಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ನನಗೆ ಬಿದ್ದ ಅಂಚೆ ಮತಗಳನ್ನು ಬೈಡೆನ್‌ಗೆ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ’ ಎಂದು ಆರೋಪಿಸುತ್ತಿದ್ದಂತೆ ಮಾಧ್ಯಮಗಳು ಅವರ ಭಾಷಣ ನಿರ್ಬಂಧಿಸಿವೆ.

ಮಾಧ್ಯಮ ಮುನಿಸು!: ಪ್ರಮುಖ ಟಿವಿ ಸುದ್ದಿ ಚಾನೆಲ್‌ಗ‌ಳಾದ ಎಬಿಸಿ, ಸಿಬಿಎಸ್‌, ಎನ್‌ಬಿಸಿ ಪತ್ರಿಕಾಗೋಷ್ಠಿ ಯನ್ನು ಅರ್ಧಕ್ಕೆ ಮೊಟಕು ಗೊಳಿ ಸಿವೆ. ಅಲ್ಲದೆ, “ಟ್ರಂಪ್‌ ಅಸಂಖ್ಯ ಸುಳ್ಳು ಹೇಳಿಕೆ ಗಳನ್ನು ನೀಡುತ್ತಿದ್ದಾರೆ’ ಎಂಬ ಸಾಲುಗಳನ್ನು ಪ್ರಸಾರ ಮಾಡಿ, ವೀಕ್ಷಕರನ್ನು ಎಚ್ಚರಿಸಿವೆ. ಆದರೆ, ಫಾಕ್ಸ್‌ ನ್ಯೂಸ್‌ ಮತ್ತು ಸಿಎನ್‌ಎನ್‌ ಪೂರ್ಣ ಭಾಷಣ ಪ್ರಸಾರ ಮಾಡಿವೆ.

ಕೋರ್ಟಲ್ಲಿ ಸೋಲು
ಚುನಾವಣಾ ಫ‌ಲಿತಾಂಶದಲ್ಲಿ ಅಕ್ರಮ ಎಸಲಾಗುತ್ತಿದೆ ಆರೋಪಿಸಿ ಡೊನಾಲ್ಡ್‌ ಟ್ರಂಪ್‌, ಮಿಚಿಗನ್‌ ಮತ್ತು ಜಾರ್ಜಿಯಾ ಹೈಕೋರ್ಟ್‌ಗಳ ಮೆಟ್ಟಿಲೇರಿದ್ದರು. ಆದರೆ, ಎರಡೂ ಕೋರ್ಟ್‌ಗಳು ಟ್ರಂಪ್‌ ವಕೀಲರ ವಾದಕ್ಕೆ ಸೊಪ್ಪುಹಾಕದೆ, ಅರ್ಜಿ ತಿರಸ್ಕರಿಸಿದ್ದಾರೆ.

ನೀನು ಕೂಡ ಪ್ರಸಿಡೆಂಟ್‌ ಆಗ್ಬಹುದು!
ಸೋದರಿ ಮೀನಾ ಹ್ಯಾರಿಸ್‌ರ ಪುತ್ರಿಯನ್ನು ಡೆಮಾಕ್ರಾಟ್‌ನ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಕಾಲಿನ ಮೇಲೆ ಕೂರಿಸಿಕೊಂಡು, ಸಂಭಾಷಿಸಿದ ವಿಡಿಯೊ ವೈರಲ್‌ ಆಗಿದೆ. 4 ವರ್ಷದ ಪೋರಿ ಅಮರಾ ಅಜಾಗುವನ್ನು ಮುದ್ದಿಸುತ್ತಾ ಕಮಲಾ, “ನೀನು ಕೂಡ ಅಧ್ಯಕ್ಷೆ ಆಗಬಹುದು. ಆದರೆ, ಈಗ ನನ್ನ ಸರದಿ. ನಿನಗೆ 35 ವರ್ಷ ಆದ ಮೇಲೆ ನೀನೂ ಅಧ್ಯಕ್ಷೆ ಆಗ್ಬಹುದು’ ಎಂಬ ಸ್ಫೂರ್ತಿಯ ಮಾತುಗಳುಳ್ಳ ವಿಡಿಯೊವನ್ನು ಮೀನಾ ಹ್ಯಾರೀಸ್‌ ಟ್ವೀಟ್‌ ಮಾಡಿದ್ದರು.

Advertisement

ಕೇವಲ ಕಾನೂನಾ ತ್ಮಕ ಮತಗಳನ್ನು ಮಾತ್ರವೇ ಎಣಿಸಿದರೆ ನಾನೇ ಗೆಲ್ಲುವೆ.
ಡೊನಾಲ್ಡ್‌ ಟ್ರಂಪ್‌

Advertisement

Udayavani is now on Telegram. Click here to join our channel and stay updated with the latest news.

Next