ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡಲಾಗುವ ಮಾಧ್ಯಮ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಉದಯವಾಣಿಯ ಅ.ಮ. ಸುರೇಶ್, ನಿಂಗಜ್ಜ, ಬಾಳಪ್ಪ, ಹನುಮಂತರಾವ್ ಬೈರಮಡಗಿ, ಅಮರೇಗೌಡ ಗೋನಾವರ, ಚಂದ್ರಶೇಖರ ಮೋರೆ ಸೇರಿ 145 ಪತ್ರಕರ್ತರನ್ನು ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2019ನೇ ಸಾಲಿನ ಜೀವಮಾನದ ಸಾಧನೆಗಾಗಿ ಡೆಕ್ಕನ್ ಹೆರಾಲ್ಡ್‌ನ ತಿಲಕ್‌ಕುಮಾರ್, ವಾರ್ಷಿಕ ಪ್ರಶಸ್ತಿಗೆ ವಿಸ್ತಾರ ನ್ಯೂಸ್‌ನ ಹರಿಪ್ರಕಾಶ್ ಕೋಣೆಮನೆ, ಪ್ರಶಾಂತ್ ನಾತು, ವಿಜಯ ಕರ್ನಾಟಕದ ಸುದರ್ಶನ್ ಚನ್ನಂಗಿಹಳ್ಳಿ, ಹೊಸದಿಗಂತದ ವಿನಾಯಕ ಭಟ್ ಮೂರೂರು, ಕಸ್ತೂರಿ ಟಿವಿಯ ಆರ್. ಮನೋಜ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2020ನೇ ಸಾಲಿನ ಜೀವಮಾನದ ಸಾಧನೆಗಾಗಿ ವಿಆರ್‌ಎಲ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಶ್ವರ್, ವಾರ್ಷಿಕ ಪ್ರಶಸ್ತಿಗೆ ನೆಟ್ವರ್ಕ್ 18ನ ಡಿ.ಪಿ. ಸತೀಶ್, ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್, 2021ನೇ ಸಾಲಿನ ಜೀವಮಾನದ ಸಾಧನೆಗಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್, 2022ನೇ ಸಾಲಿನ ಜೀವಮಾನದ ಸಾಧನೆಗಾಗಿ ಆರ್ಥಿಕ ತಜ್ಞೆ ಸುಶೀಲಾ ಸುಬ್ರಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ.
ವಾರ್ಷಿಕ ಪ್ರಶಸ್ತಿಗಳ ಜತೆಗೆ ಡಾ. ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ ಹಾಗೂ ಅತ್ಯುತ್ತಮ ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.