Advertisement

ಶುದ್ಧ ಕುಡಿಯುವ ನೀರಿಗಾಗಿ ಮೇದಕ್‌ ಗ್ರಾಮಸ್ಥರ ಪರದಾಟ

05:52 PM Apr 20, 2022 | Team Udayavani |

ಗುರುಮಠಕಲ್‌: ಬೇಸಿಗೆ ಬಂದಿದೆ. ಎಲ್ಲ ಕಡೆ ನೀರಿನ ಹಾಹಾಕಾರ ಎದ್ದಿದೆ. ಶುದ್ಧ ನೀರಿಗಾಗಿ ಪರದಾಡುವ ಸ್ಥಿತಿ ಹಾಗೂ ಇದ್ದ ನೀರಿನ ಮೂಲವನ್ನು ಸ್ವಚ್ಛಗೊಳಿಸದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾಲಿನ್ಯ ನೀರು ಕುಡಿಯುವ ದುಸ್ಥಿತಿ ಗ್ರಾಮದ ಜನರಿಗೆ ಬಂದಿದೆ.

Advertisement

ಹೌದು. ಸಮೀಪದ ಮೇದಕ್‌ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರಿನ ಮೂಲವಾಗಿ ಬಾವಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕಳೆದ 20 ವರ್ಷಗಳಿಂದ ಊರಿನ ಹೊರವಲಯದಲ್ಲಿರುವ ಭೂತನಾಥೇಶ್ವರ ದೇವಸ್ಥಾನ ಮುಂಭಾಗದಲ್ಲಿ ಬಾವಿಯಿದ್ದು, ಈ ಬಾವಿಯ ನೀರೆ ಗ್ರಾಮದವರಿಗೆ ಕುಡಿಯುವ ನೀರಿನ ಆಧಾರವಾಗಿದೆ.

ಬಾವಿಯು ಭತ್ತದ ಚಿಲುಮೆಯಾಗಿದ್ದು, ಸದಾ ನೀರು ಬಾವಿಯಲ್ಲಿರುತ್ತದೆ. ಕಳೆದ 15 ವರ್ಷಗಳ ಹಿಂದೆ ಗ್ರಾಪಂ ಈ ಬಾವಿಯ ನೀರನ್ನು ಊರಿನ ಜನರಿಗೆ ಕುಡಿಯಲು ಅನುಕೂಲಕ್ಕಾಗಿ ಮನೆಮನೆಗಳಿಗೆ ಸರಬರಾಜು ಮಾಡತೊಡಗಿದೆ. ಆದರೆ ಬಾವಿ ನೋಡಿದರೆ ಪಾಚಿಯಿಂದ ಆವರಿಸಿಕೊಂಡಿದೆ. ದೇವಸ್ಥಾನದ ಆವರಣದಲ್ಲಿ ಇರುವ ಕಾರಣ ಮತ್ತು ಜನರು ಪೂಜೆ ವಸ್ತುಗಳನ್ನು ಬಾವಿಯಲ್ಲಿ ಬೀಸಾಕುತ್ತಾರೆ. ದೇವಸ್ಥಾನದಲ್ಲಿ ನಡೆಯುವ ಅನ್ನದಾಸೋಹದ ಪ್ಲಾಸ್ಟಿಕ್‌ ಪಾತ್ರೆಗಳನ್ನು ಬಾವಿಯಲ್ಲಿ ಹಾಕುತ್ತಾರೆ. ಇದರಿಂದ ಇದೇ ನೀರನ್ನು ಜನರು ಕುಡಿಯಬೇಕಾಗಿದೆ.

ಅಶುದ್ಧವಾದ ನೀರಿನ ಸೇವನೆಯಿಂದ ಗ್ರಾಮದ ಅನೇಕ ಜನರು ಕಾಲರ, ಆಮಶಂಕೆ ಮುಂತಾದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ನಿರ್ದೇಶನಗಳಿವೆ. ಬಾವಿಯ ಸುರಕ್ಷತೆಗಾಗಿ ಹಾಗೂ ಗ್ರಾಪಂನ ನರೇಗಾ ಯೋಜನೆಯಡಿಯಲ್ಲಿ ಬಾವಿ ಸ್ವಚ್ಛಗೊಳಿಸುವ ಯೋಜನೆ ಹಮ್ಮಿಕೊಳ್ಳಬೇಕು ಎಂದು ಗ್ರಾಮಸ್ಥರು ಹಲವು ಸಲ ಗ್ರಾಪಂ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

ಕಳೆದ 10 ವರ್ಷಗಳಿಂದ ಮನವಿ ಕೊಟ್ಟ ಮೇಲೆ ಮೇಲಾಧಿಕಾರಿಗಳು ಬಂದು ವೀಕ್ಷಣೆ ಮಾಡುತ್ತಾರೆ, ಬಾವಿ ಸ್ವಚ್ಛಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗುವುದು ಎಂದು ಭರವಸೆ ನೀಡಿ ಹೋಗುತ್ತಾರೆ ಹೊರತು ಯಾವುದೇ ಕೆಲಸವಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಾನು ಅಧಿಕಾರ ಸ್ವೀಕರಿಸಿ ಕೆಲವೇ ದಿನವಾಗಿದೆ. ಇಂಟರ್‌ನೆಟ್‌ ಸಮಸ್ಯೆಯಿಂದ ನರೇಗಾ ಅಡಿಯಲ್ಲಿ ಸ್ವತ್ಛಗೊಳಿಸುವ ಕೆಲಸ ಮಾಡಲಾಗುತ್ತಿಲ್ಲ. ಆದರೂ ಶುದ್ಧ ನೀರು ಜನರಿಗೆ ಒದಗಿಸಲು ಪ್ರಯತ್ನಿಸುತ್ತೇನೆ. -ರಾಮಪ್ಪ, ಪಿಡಿಒ ಮೇದಕ್‌

ಬಾವಿಯ ನೀರೇ ಜನರಿಗೆ ಕುಡಿಯಲು ಆಧಾರವಾಗಿದೆ. ಬಾವಿ ಹೊಲಸಿನಿಂದ ಕೂಡಿದ್ದು, ಇದನ್ನು ಸ್ವತ್ಛಗೊಳಿಸಲು ಗ್ರಾಪಂಗೆ ಮನವಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದಾರೆ ಗ್ರಾಪಂಗೆ ಮುತ್ತಿಗೆ ಹಾಕಲಾಗುವುದು. -ಸುಭಾಷ ಸಜ್ಜನ, ಬಿಜೆಪಿ ಮುಖಂಡ ಮೇದಕ

Advertisement

Udayavani is now on Telegram. Click here to join our channel and stay updated with the latest news.

Next