ಮಕ್ಕಳಿಗೆ ಖುಷಿ ಪಡಿಸುವುದಕ್ಕೆ ಎಷ್ಟು ವಿಧಾನಗಳಿವೆ. ಒಂದೋ ಮಾಲ್‌ಗೆ ಕರೆದುಕೊಂಡು ಹೋಗಿ ಸಿನಿಮಾ ನೋಡಬಹುದು. ಇಲ್ವಾ ಪಾರ್ಕ್‌ಗಳಿಗೆ ಕರೆದುಕೊಂಡು ಹೋಗಿ ಆಟ ಆಡಿಸಬಹುದು. ತಪ್ಪಿದ್ರೆ ವೀಡಿಯೋ ಗೇಮ್ ಆಟ ಆಡಲು ಕಲಿಸಬಹುದು. ಇವನ್ನೇ ಮಕ್ಕಳು ಎಷ್ಟು ದಿನ ಅಂತ ಮಾಡುತ್ತಾರೆ. ಒಂದಲ್ಲ ಒಂದು ದಿನ ಬೋರಾಗುತ್ತದೆ. ಆಗ ಅವರು ಹೊಸ ಹೊಸ ಆಟಗಳನ್ನು ಹುಡುಕುತ್ತಾರೆ. ಹಾಗೆ ಹೊಸ ಥರದ ಆಟಗಳನ್ನು ಹುಡುಕುವ ಮಕ್ಕಳಿಗೆ ಮತ್ತು ತಮ್ಮ ಮಕ್ಕಳನ್ನು ವಿಭಿನ್ನವಾದ ಜಾಗಕ್ಕೆ ಕರೆದೊಯ್ಯಬೇಕು ಅನ್ನೋ ಮನಸ್ಸಿರೋ ಪೋಷಕರಿಗೆ ಇಲ್ಲೊಂದು ಆಯ್ಕೆ ಇದೆ. ಅದರ ಹೆಸರು ಮೆಕೋ ಕಾರ್ಟೋಪಿಯಾ.
ಏನಿದು ಮೆಕೋ ಕಾರ್ಟೋಪಿಯಾ?
ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಕಾರ್ ಅಂದ್ರೆ ಆಸೆ. ಎಂದಾದರೊಂದು ದಿನ ತಾನೂ ಕಾರ್ ಡ್ರೈವ್ ಮಾಡಬೇಕು ಅಂತ ಆಸೆ ಪಡುತ್ತಿರುತ್ತಾರೆ. ಹುಡುಗರಂತೂ ಅದರಲ್ಲಿ ಮುಂದು. ಪ್ರೈಮರಿ ಮುಗಿಯುವ ಮೊದಲೇ ಮನೆಯಲ್ಲಿ ಬೈಕ್ ಇದ್ದರೆ ಪ್ರಾಕ್ಟೀಸ್ ಶುರುವಾಗುತ್ತದೆ. ಆ ಮಕ್ಕಳಿಗೆಲ್ಲಾ ಚಿಕ್ಕಂದಿನಿಂದಲೇ ಕಾರ್ ರೇಸ್ ಕ್ರೇಜ್ ಇರುತ್ತದೆ. ಮೊಬೈಲ್ ಸಿಕ್ಕಿದರೆ ಸಾಕು ಕಾರ್ ರೇಸ್ ಆಟ ಆಡಲು ಶುರು ಮಾಡುತ್ತಾರೆ. ಅವರಿಗೆ ಕಾರ್ ರೇಸ್ ಅಂದ್ರೆ ಆಸೆ. ಕಾರ್ ಡ್ರೈವಿಂಗ್ ಅಂದ್ರೆ ಕನಸು. ಆ ಕನಸನ್ನು ಈ ಮೆಕೋ ಕಾಟೋìಪಿಯಾ ನನಸು ಮಾಡುತ್ತದೆ.
ಹೇಗೆ ಅಂತೀರಾ? ಅಲ್ಲಿ ರೇಸ್ ಕಾರ್‌ಗಳಿವೆ. ರೇಸ್ ಟ್ರ್ಯಾಕುಗಳೂ ಇವೆ. ಯಾವ ಮಕ್ಕಳಿಗೆ ರೇಸ್ ಕಾರ್ ಅನ್ನು ಡ್ರೈವ್ ಮಾಡಬೇಕು ಅನ್ನೋ ಆಸೆ ಇರುತ್ತದೋ ಅವರನ್ನು ಇಲ್ಲಿ ಕರೆದುಕೊಂಡು ಬಂದರೆ ಅವರ ಆಸೆ ಈಡೇರುತ್ತದೆ. ಹತ್ತು ನಿಮಿಷಗಳ ಕಾಲ ರೇಸ್ ಕಾರ್ ಓಡಿಸಬಹುದು. ಕಾರ್ ಓಡಿಸುವ ಮೊದಲೇ ನುರಿತ ತರಬೇತಿದಾರರು ತರಬೇತಿ ನೀಡುತ್ತಾರೆ. ಅನಂತರವೇ ಕಾರ್ ಒಳಗೆ ಕೂರಲು ಅವಕಾಶ. ಮಕ್ಕಳು ಗುಂಪಾಗಿ ಹೋದರೆ ಎಲ್ಲರೂ ಒಂದೇ ಸಾಲಲ್ಲಿ ಕಾರ್ ನಿಲ್ಲಿಸಿ ಡ್ರೈವ್ ಮಾಡಬಹುದು. ರೇಸ್ ಆಟ ಆಡಬಹುದು. ಆಸೆ ಮತ್ತು ಆಸಕ್ತಿ ಇದ್ದರೆ ಒಂದ್ಸಲ ಟ್ರೈ ಮಾಡಬಹುದು. ಅಂದಹಾಗೆ ಇಲ್ಲಿ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಕಾರ್ಟಿಂಗ್ ಅವಕಾಶ ಇದೆ.
ಫೀಸು
ಮಕ್ಕಳಿಗೆ ಹತ್ತು ನಿಮಿಷ ಡ್ರೈವ್ ಮಾಡಲು ರೂ. 450
ಎಲ್ಲಿ- ಚಗ್ಗಲಗಟ್ಟಿ ವಿಲೇಜ್, ಹೆಣ್ಣೂರು ಬಾಗಲೂರು ರಸ್ತೆ
ದೂ- 9901908789
ಫೇಸ್‌ಬುಕ್- https://www.facebook.com/MecoKartopia/timeline
ವೆಬ್‌ಸೈಟ್- www.mecokartopia.com