Advertisement
ಇದನ್ನೂ ಓದಿ:ಹುಬ್ಬಳ್ಳಿ: ಐರಾವತ ಬಸ್ – ಕಾರು ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಾಯ
Related Articles
Advertisement
ಕ್ಯಾಲೆಂಡರ್ ನಲ್ಲಿ ವಿವರಣೆಯೂ ಇದೆ:
ಮೆಕ್ಕಾ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ನಲ್ಲಿ ಮೆಕ್ಕಾವನ್ನು ಮಕ್ಕೇಶ್ವರ ಮಹಾದೇವ ದೇವಸ್ಥಾನ ಎಂದು ಕರೆಯಲಾಗಿದ್ದು, ಇದರ ಜೊತೆಗೆ ವಿವರಣೆ ನೀಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿ ಶಿವನ ದೇವಸ್ಥಾನ ಇದ್ದಿದ್ದು, ಈಗಲೂ ಕೂಡಾ ಛಿದ್ರವಾದ ಸ್ಥಿತಿಯಲ್ಲಿರುವ ಶಿವಲಿಂಗ ಇದ್ದಿರುವುದಾಗಿ ಮುದ್ರಿಸಲಾಗಿದೆ.
ಮಂಗಳವಾರ ಅಲಿಗಢ್ ಜಿಲ್ಲೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾ ಕಚೇರಿಯಲ್ಲಿ ಹಿಂದೂ ಹೊಸ ವರ್ಷ ಮತ್ತು ನವದುರ್ಗೆಯ ಕುರಿತು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಡಾ.ಪೂಜಾ ಶಾಕುನ್ ಪಾಂಡೆ ಹಿಂದೂ ನ್ಯೂ ಇಯರ್ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ್ದರು.
2018ರಲ್ಲಿ ಅಖಿಲ ಭಾರತ್ ಹಿಂದೂ ಮಹಾಸಭಾ ಬಿಡುಗಡೆ ಮಾಡಿರುವ ಕ್ಯಾಲೆಂಡರ್ ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ ಈ ಕ್ಯಾಲೆಂಡರ್ ನಲ್ಲಿ ಮುದ್ರಿಸಲಾಗಿದೆ ಎಂದು ಪಾಂಡೆ ಹೇಳಿದರು. 2018ರ ಕ್ಯಾಲೆಂಡರ್ ನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಶೀಘ್ರವಾಗಿ ನಿರ್ಮಾಣ ಮಾಡಬೇಕೆಂದು ಉಲ್ಲೇಖಿಸಿತ್ತು. ಆದರೆ ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇದೀಗ ಈ ಸ್ಥಳಗಳ ಹಿಂದೂ ಹೆಸರನ್ನು ಮುದ್ರಿಸುವ ಮೂಲಕ ಆ ಹೆಸರನ್ನು ಇಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದೇಶಿ ದಾಳಿಕೋರರು ದೇಶದಲ್ಲಿರುವ ಹಿಂದೂಗಳ ಪವಿತ್ರ ಸ್ಥಳಗಳನ್ನು ಲೂಟಿ ಮಾಡಿದ್ದರು. ಅಲ್ಲದೇ ಧಾರ್ಮಿಕ ಕ್ಷೇತ್ರಗಳ ಹೆಸರನ್ನು ಬದಲಾಯಿಸಿ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. ಈಗ ಹಿಂದೂಗಳ ಸ್ಥಳಗಳು ನಮಗೆ ವಾಪಸ್ ಸೇರಬೇಕಾಗಿದೆ ಎಂದು ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.